India TV-CNX Opinion Poll Survery: ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಯಾರಿಗೆ ಜಯ, ಹಿನ್ನಡೆ ಯಾರಿಗೆ, ಅಂಕಿ-ಅಂಶಗಳು
ಬೆಂಗಳೂರು, ಅಕ್ಟೋಬರ್ 06: ದೇಶಾದ್ಯಂತ ಲೋಕಸಭಾ ಚುನಾವಣೆ 2024 ಕಾವು ಕ್ರಮೇಣ ಹೆಚ್ಚಾಗುತ್ತಿದೆ. ಇತ್ತ ಪಕ್ಷಗಳು ಅಭಿವೃದ್ಧಿ ಜಪದ ಜೊತೆಗೆ ಮರೆಯಲ್ಲಿಯೇ ಚುನಾವಣೆ ತಂತ್ರ ಹೆಣೆಯುತ್ತಿವೆ. ಒಂದೆಡೆ ಆಡಳಿತಾರೂಢ ಬಿಜೆಪಿ ಕಟ್ಟಿಹಾಕಲು ಕೇಂದ್ರ ವಿಪಕ್ಷಗಳು ಒಂದಾಗಿವೆ. ಆಯಾ ರಾಜ್ಯಗಳಲ್ಲಿ ಸೀಟು ಹಂಚಿಕೆಯಿಂದ ಗೆಲುವಿನ ವರೆಗೂ ಬೇಕಾದ ಸಂಘಟನೆ, ತಯಾರಿ ನಡೆಯುತ್ತಿವೆ.
ಈ ಲೋಕಸಭಾ ಚುನಾವಣೆ 2024 ಸಂಬಂಧ ಇಂಡಿಯಾ ಟಿವಿ ಸಿಎನ್‌ಎಕ್ಸ್ (India TV-CNX opinion poll) ಚುನಾವಣೆ ಪೂರ್ವ ಅಭಿಪ್ರಾಯ ಸಂಗ್ರಹಿಸಿದೆ. ಈ ಸಮೀಕ್ಷೆಯಲ್ಲಿ ಯಾರಿಗೆ ಹೆಚ್ಚು ಸ್ಥಾನಗಳು ಧಕ್ಕಲಿವೆ, ಯಾರು ಯಾರನ್ನು ಮಣಿಸಲಿದ್ದಾರೆ ಎಂದು ಬಹಿರಂಗಪಡಿಸಿದೆ. ಒಟ್ಟು ಸಮೀಕ್ಷೆಯ ಪೈಕಿ ದಕ್ಷಿಣ ಭಾರತದ 'ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು' ಐದು ರಾಜ್ಯಗಳ ಸಮೀಕ್ಷೆಯ ಪೂರ್ಣ ವರದಿ ಇಲ್ಲಿ ತಿಳಿದುಕೊಳ್ಳಬಹುದು.

ಕರ್ನಾಟಕದಲ್ಲಿ ಬಿಜೆಪಿ 9 ಸ್ಥಾನ ಕಳೆದುಕೊಂಡು ಮುನ್ನಡೆ, ಕಾಂಗ್ರೆಸ್?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಪಕ್ಷವು 16 ಸ್ಥಾನಗಳನ್ನು ಗೆಲ್ಲವ ನಿರೀಕ್ಷೆಗಳು ಇವೆ. ಇತ್ತ ಆಡಳಿತಾರೂಢ ಕಾಂಗ್ರೆಸ್ ಪಕ್ಷವು 10 ಸ್ಥಾನ ಪಡೆದು ಹಿನ್ನಡೆ ಅನುಭವಿಸಿದರೆ, ಸ್ಥಳೀಯ ಪಕ್ಷ ಜೆಡಿಎಸ್ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ರಾಜ್ಯದ ಮತಗಳನ್ನು ನೋಡುವುದಾದರೆ, ಬಿಜೆಪಿಗೆ ಶೇಕಡಾ 44 ರಷ್ಟು ಮತಗಳು, ಕಾಂಗ್ರೆಸ್ ಶೇಕಡಾ 40 ಮತ್ತು ಜೆಡಿಎಸ್ ಗೆ ಕೇವಲ 11 ರಷ್ಟು ಮತಗಳು ಬರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳ ಪ್ರಕಾರ ಬಿಜೆಪಿ 16, ಕಾಂಗ್ರೆಸ್ 10 ಮತ್ತು ಜೆಡಿಎಸ್ 2 ಗೆಲ್ಲಲಿವೆ ಎಂದು ತಿಳಿದು ಬಂದಿದೆ.

2019 ರ ಚುನಾವಣೆಯಲ್ಲಿ ಬಿಜೆಪಿ 25 ಪಡೆದಿತ್ತು, ಅದರಲ್ಲಿ ಈ ಬಾರಿ 9 ಸ್ಥಾನ ಕಳೆದುಕೊಳ್ಳಲಿದೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲಿದೆ ಎಂದು ಸಮೀಕ್ಷೆ ಬಹಿರಂಪಡಿಸಿದೆ.
ತಮಿಳುನಾಡು: ಡಿಎಂಕೆ 21, ಎಐಎಡಿಎಂಕೆ 6 ಸ್ಥಾನ ಸಾಧ್ಯತೆ
ಲಭ್ಯವಾಗಿರುವ ಸಮೀಕ್ಷೆಯ ಪ್ರಕಾರ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಅತ್ಯಧಿಕ ಸ್ಥಾನಗಳು ಬರುವ ಮುನ್ಸೂಚನೆ ಇದೆ. ಡಿಎಂಕೆ ಗೆ ಶೇಕಡಾ 31 ರಷ್ಟು ಮತಗಳನ್ನು ಬಂದರೆ, ಎಐಎಡಿಎಂಕೆ ಶೇಕಡಾ 25 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಗಳು ಇವೆ ಎಂಬುದು ಬಹಿರಂಗವಾಗಿದೆ.
ಇತ್ತ ವಿಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ 11 ರಷ್ಟು ಮತಗಳು ಬಂದಿರೆ, ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ಕೇಂದ್ರ ಆಡಳಿತಾರೂಢ ಬಿಜೆಪಿಗೆ ಶೇಕಡಾ 7 ರಷ್ಟು ಮತಗಳು ಬರಬಹದು ಎಂದು ಅಂದಾಜಿಸಲಾಗಿದೆ. ಇಲ್ಲಿ ಕಾಂಗ್ರೆಸ್-ಬಿಜೆಪಿಗೆ ಪೈಪೋಟಿ ನಡೆಯುವ ಸಾಧ್ಯತೆಗಳು ಇವೆ. ತಮಿಳುನಾಡಿನಲ್ಲಿ ಡಿಎಂಕೆ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಆಂಧ್ರ ಪ್ರದೇಶ: ಯಾರಿಗೆ ಬಹುಮತ?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಮೀಕ್ಷೆ ಪ್ರಕಾರ, ಈ ರಾಜ್ಯದ ಲೋಕಸಭೆ ಚುನಾವಣೆಯಲ್ಲಿ ತೀವ್ರ ಪೈಪೋಟಿ, ಹಗ್ಗ ಜಗ್ಗಾಟ ನಡೆಯುವುದು ಖಚಿತ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತಾರೂಢ YSP ಮತ್ತು ಪ್ರತಿಪಕ್ಷ TDP ನಡುವೆ ದ್ವಿಪಕ್ಷೀಯ ಸಮರ ನಡೆಯುತ್ತಿರುದೆ. ಈ ಮಧ್ಯೆ ಈ ಸಮೀಕ್ಷೆ ಫಲಿತಾಂಶ ಮಹತ್ವ ಪಡೆದಿದೆ.
ಆಂಧ್ರಪ್ರದೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವೈಎಸ್ ಜಗನ್ ನೇತೃತ್ವದ YSP 15 ಲೋಕಸಭಾ ಸ್ಥಾನಗಳು ಲಭಿಸಲಿವೆ. ಚಂದ್ರಬಾಬು ನಾಯ್ಡು ನೇತೃತ್ವದ TDP 10 ಸ್ಥಾನ ಪಡೆಯಲಿದೆ. ಈ ಮೂಲಕ ಆಂಧ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜನಸೇನೆಗೆ ಒಂದೇ ಒಂದು ಸ್ಥಾನ ಸಹ ಧಕ್ಕುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 2019ರ ಚುನಾವಣೆಗೆ ಹೋಲಿಸಿದರೆ, ಟಿಡಿಪಿ 7 ಲೋಕಸಭಾ ಸ್ಥಾನ ಹೆಚ್ಚು ಗೆಲ್ಲಬಹುದು. ಆಡಳಿತಾರೂಢ YSP ಅಷ್ಟೇ ಸ್ಥಾನಗಳನ್ನು ಕಳೆದು ಕೊಳ್ಳಬಹುದು ಎಂದು ಸಮೀಕ್ಷೆ ತಿಳಿಸಿದೆ.
ಕೇರಳ ಲೋಕಸಭಾ ಚುನಾವಣೆ ಸಮೀಕ್ಷೆ, ವಿವರ
ಇಂಡಿಯಾ ಟಿವಿ ಸಿಎನ್‌ಎಕ್ಸ್ ಅಭಿಪ್ರಾಯ ಸಮೀಕ್ಷೆಯಲ್ಲಿ ಕೇರಳ ರಾಜ್ಯದ 20 ಲೋಕಸಭಾ ಸ್ಥಾನಗಳಿವೆ. ಇದರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 16 ಸ್ಥಾನಗಳನ್ನು ಗೆಲ್ಲಲಿದೆ. ಇತ್ತ ಎಲ್‌ಡಿಎಫ್ 4 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಕಳೆದ 2019 ರ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 3 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಆದರೆ ಎಲ್‌ಡಿಎಫ್ 3 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯ ವರದಿ ಮಾಹಿತಿ ನೀಡಿದೆ.
ತೆಲಂಗಾಣ: ಬಿಆರ್‌ಎಸ್‌ಗೆ ಗೆಲುವು, ಎಷ್ಟು ಮತ?
ಸಮೀಕ್ಷೆ ಪ್ರಕಾರ, ತೆಲಂಗಾಣದ ಒಟ್ಟು 17 ಲೋಕಸಭಾ ಸ್ಥಾನಗಳ ಪೈಕಿ ಬಿಆರ್‌ಎಸ್ ಪಕ್ಷಕ್ಕೆ ಅತ್ಯಧಿಕ ಶೇಕಡಾ 40ರಷ್ಟು ಮತಗಳನ್ನು ಲಭಿಸುವ ನಿರೀಕ್ಷೆ ಇದೆ. ಬಿಜೆಪಿಗೆ ಶೇಕಡಾ 28ರಷ್ಟು ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಕೇವಲ ಶೇಕಡಾ 23ರಷ್ಟು ಮತಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎನ್ನಲಾಗಿದೆ.
ಒಟ್ಟು ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿ 6, ಕಾಂಗ್ರೆಸ್ 2 ಸ್ಥಾನ ಗೆಲ್ಲುವ ಸಾಧ್ಯತೆಗಳು ಇದೆ. ಕೆಸಿಆರ್ ಅವರ ಬಿಆರ್ ಎಸ್ ಒಂದು ಸ್ಥಾನ ಕಳೆದುಕೊಳ್ಳಲಿದೆ. ಈ ರಾಜ್ಯದಲ್ಲಿ ಸಹ ಬಿಜೆಪಿ ಮತ್ತು ಕಾಂಗ್ರೆಸ್ ಗೆವೈಯಕ್ತಿವಾಗಿ ಪೈಪೋಟಿ ಏರ್ಪಡಲಿದೆ .ಇಬ್ಬರ ಜಗಳ ಮಧ್ಯೆ ಬಿಆರ್‌ಎಸ್ ಪಕ್ಷವು ಬೃಹತ್ ಪಕ್ಷವಾಗಿ ಹೊರ ಹೊಮ್ಮಲಿದೆ.
-
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ












Click it and Unblock the Notifications