Mpox in India: ಭಾರತದಲ್ಲಿ ಶಂಕಿತ ಎಂಪಾಕ್ಸ್ ಪ್ರಕರಣ ಪತ್ತೆ; ರೋಗಿಯ ಸ್ಥಿತಿ ಹೇಗಿದೆ?

ಭಾರತದಲ್ಲಿ ಎಂಪಾಕ್ಸ್ ಶಂಕಿತ ಪ್ರಕರಣ ಪತ್ತೆಯಾಗಿದೆ. ಹಲವು ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಆತಂಕದ ನಡುವೆ ಭಾರತದಲ್ಲಿ ಕೂಡ ಸೋಂಕಿತ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ವಾಪಸಾಗಿರುವ ಯುವಕನಲ್ಲಿ ಎಂಪಾಕ್ಸ್‌ನ ಲಕ್ಷಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ರೋಗಿಯನ್ನು ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ.

ರೋಗಿಗೆ ಎಂಪಾಕ್ಸ್ ಸೋಂಕು ಇದೆಯೇ ಎಂದು ದೃಢಪಡಿಸಿಕೊಳ್ಳಲು ವಿವಿಧ ಮಾದರಿಗಳನ್ನು ತೆಗೆದುಕೊಂಡಿದ್ದು, ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಎಂಪಾಕ್ಸ್‌ ಸೋಂಕು ಇರುವ ಬಗ್ಗೆ ಖಚಿತಪಡಿಸಲು ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪ್ರೋಟೊಕಾಲ್‌ಗೆ ಅನುಗುಣವಾಗಿಯೇ ಪ್ರಕರಣವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆತನ ಸಂಪರ್ಕಕ್ಕೆ ಯಾರಾದರೂ ಬಂದಿದ್ದಾರ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

india suspected mpox case stable condition

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ಹಿಂದಿನ ಅಪಾಯದ ಬಗ್ಗೆ ಮೌಲ್ಯಮಾಪನ ಮಾಡಿದ್ದು, ಸದ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ಎಂಪಾಕ್ಸ್ ಸೋಂಕು ನಿಯಂತ್ರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ, ಸೋಂಕು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

ಜಾಗತಿಕ ತುರ್ತುಸ್ಥಿತಿ ಘೋಷಣೆ

ಆಫ್ರಿಕಾದ 12 ದೇಶಗಳಲ್ಲಿ ಎಂಪಾಕ್ಸ್ ಪ್ರಕರಣ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಮೂರು ವಾರಗಳ ಬಳಿಕ ಭಾರತದಲ್ಲಿ ಮೊದಲ ಎಂಪಾಕ್ಸ್ ಪ್ರಕರಣ ಪತ್ತೆಯಾಗಿದೆ.

ಆಫ್ರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಂಪಾಕ್ಸ್ ತಡೆಗಟ್ಟಲು ಯೋಜನೆಯನ್ನು ಆರಂಭಿಸಿದೆ. ಇದಕ್ಕಾಗಿ ಆರು ತಿಂಗಳಿಗೆ $600 ಮಿಲಿಯನ್ ಹಣ ಮೀಸಲಿಟ್ಟಿದ್ದು, ಸೋಂಕು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದೆ.

ಗುರುವಾರ ಕಾಂಗೋ ದೇಶಕ್ಕೆ ಮೊದಲ ಬ್ಯಾಚ್‌ನ 100,000 JYNNEOS ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಯೂರೋಪಿಯನ್ ಒಕ್ಕೂಟ ಆರೋಗ್ಯ ತುರ್ತು ಏಜೆನ್ಸಿ HERA ಮೂಲಕ ಪೂರೈಕೆ ಮಾಡಲಾಗಿದೆ.

ಕಾಂಗೋದಲ್ಲಿ 3 ಮಿಲಿಯನ್ ಲಸಿಕೆಗಳ ಪೂರೈಸಬೇಕಾಗಿದ್ದು ಈಗ ಕೇವಲ 1 ಲಕ್ಷ ಲಸಿಕೆಗಳನ್ನು ಮಾತ್ರ ಪೂರೈಸಲಾಗಿದೆ. ಆರಂಭಿಕ ಹಂತದಲ್ಲಿ ಸೋಂಕಿತರ ಜೊತೆಗೆ ಸಂಪರ್ಕದಲ್ಲಿರುವ ವಯಸ್ಕರು ಮತ್ತು ಲೈಂಗಿಕ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೂ ಇನ್ನೂ ಲಸಿಕೆಯನ್ನು ನೀಡುವ ದಿನಾಂಕದ ಬಗ್ಗೆ ಅಸ್ಪಷ್ಟವಾಗಿದೆ. ತಿಂಗಳ ಅಂತ್ಯದ ವೇಳೆಗೆ ಈ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+