ಹೊಸ ವರ್ಷಕ್ಕೆ 112 ತುರ್ತು ಸೇವೆ ನಂಬರ್ ಚಾಲನೆ!

Posted By:
Subscribe to Oneindia Kannada

ನವದೆಹಲಿ, ಮೇ 08: ಭಾರತದಲ್ಲಿ ಇನ್ಮುಂದೆ ತುರ್ತು ಪರಿಸ್ಥಿತಿ ಎದುರಾದರೆ ಸಾರ್ವಜನಿಕರು 112 ಸಂಖ್ಯೆಗೆ ಡಯಲ್ ಮಾಡಿದರೆ ಸಾಕು. ಈಗ ಚಾಲ್ತಿಯಲ್ಲಿರುವ ಎಲ್ಲಾ ತುರ್ತು ಸೇವೆ(112) ಗೆ ಪರ್ಯಾಯವಾಗಿ ಏಕೈಕ ತುರ್ತು ಸೇವೆ ಸಂಖ್ಯೆಯನ್ನು ಜನವರಿ 01, 2017ರಿಂದ ಜಾರಿಗೆ ತರಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ಧರಿಸಿದೆ.

ಭಾರತದಲ್ಲಿ ನಾಲ್ಕು ತುರ್ತು ಸಂಖ್ಯೆಗಳಿದ್ದು, 2017ರ ಜನವರಿ 01 ರಿಂದ ಪೊಲೀಸ್, ಅಗ್ನಿ ಶಾಮಕ ದಳ ಹಾಗೂ ಆಂಬುಲೆನ್ಸ್ ಸೇವೆ ಪಡೆಯಲು '112' ಏಕ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಭಾರತದ ಯಾವುದೇ ಮೂಲೆಯಿಂದ ಬೇಕಾದರೂ ಈ ನಂಬರ್ ಗೆ ಕರೆ ಮಾಡಿ, ಅಗತ್ಯ ತುರ್ತುಸೇವೆ ಪಡೆಯಬಹುದು. [ಹಿರಿಯರ ನೆರವಿಗೆ ಬೆಂಗಳೂರು ಪೊಲೀಸರ ಸಹಾಯವಾಣಿ]

India’s single emergency number ‘112’ to be active from Jan 1

ಅಮೆರಿಕದಲ್ಲಿ ಚಾಲನೆಯಲ್ಲಿರುವ 911 ಸಂಖ್ಯೆಯಂತೆ ಭಾರತದಲ್ಲಿ 112 ಜಾರಿಗೆ ಬರಲಿದೆ. ಈಗ ಚಾಲ್ತಿಯಲ್ಲಿರುವ ಪೊಲೀಸ್, ಅಗ್ನಿಶಾಮಕದಳ, ಮಹಿಳೆಯರು ಮತ್ತು ಮಕ್ಕಳ ಸಹಾಯವಾಣಿಗಳ ಬದಲಿಗೆ 112 ಬಳಸಬಹುದು. 100,101,102,108 ದೂರವಾಣಿ ಸಂಖ್ಯೆಗಳು ಕೂಡಾ ಚಾಲನೆಯಲ್ಲಿರುತ್ತದೆ ಎಂದು ಟ್ರಾಯ್ ಹೇಳಿದೆ.[ಗರ್ಭಿಣಿ, ಮಕ್ಕಳ ರಕ್ಷಣೆಗಾಗಿ 'ವಾತ್ಸಲ್ಯವಾಣಿ-104']

* ಸಿಮ್ ಚಾಲನೆ ಇಲ್ಲದೆ, ಹೊರ ಹೋಗುವ ಕರೆ ಬಂದ್ ಆಗಿರುವ ಲ್ಯಾಂಡ್ ಲೈನ್ ಫೋನಿನಿಂದಲೂ ಕೂಡಾ 112ಗೆ ಕರೆ ಮಾಡಬಹುದು.
* ಮೊಬೈಲ್ ನಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದದ ಬಟನ್ ಒತ್ತಿದರೆ ಸಾಕು.[ತುರ್ತು ಚಿಕಿತ್ಸೆಗಾಗಿ ಆರೋಗ್ಯ ವಾಹಿನಿ ಸೇವೆ]

* ತುರ್ತು ಸೇವೆ ಕರೆಗಳು ನಿಮ್ಮದೇ ಭಾಷೆಯಲ್ಲಿ ಲಭ್ಯವಿದ್ದು, ಇಂಗ್ಲೀಷ್, ಹಿಂದಿ ಅಲ್ಲದೆ, ಕನ್ನಡ ಸೇರಿದಂತೆ ಸ್ಥಳೀಯ ಭಾಷೆಯಲ್ಲಿ ಅಗತ್ಯ ಸೇವೆ ಪಡೆಯಬಹುದು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The single emergency number ‘112’ will be operational throughout India from January 1 to help people reach immediate services of police, ambulance and fire department.
Please Wait while comments are loading...