ಈ ವಾರದಲ್ಲಿ ಭಾರತದ ಮೊದಲ ಎಸಿ ಡಬಲ್ ಡೆಕ್ಕರ್ ಇ-ಬಸ್ ಸಂಚಾರ: ಎಲ್ಲಿ? ಮಾರ್ಗ, ಮಾಹಿತಿ ತಿಳಿಯಿರಿ

ಸ್ವಿಚ್ ಸಂಸ್ಥೆಯು ನಿರ್ಮಿಸಿದ ಇ-ಬಸ್ ಆಗಸ್ಟ್ 2022 ರಲ್ಲಿ ಆಗಮಿಸಿತ್ತು. ಇದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾಕ್ಷಿಯಾಗಿದ್ದರು.

ಮುಂಬೈ, ಫೆಬ್ರವರಿ 13: ಭಾರತದ ಮೊದಲ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಶೀಘ್ರದಲ್ಲೇ ರಸ್ತೆಗಳಿಯಲು ಎಲ್ಲ ಸಿದ್ದತೆಗಳು ನಡೆದಿವೆ. ಕೊನೆಯ ಹಂತದ ಸಿದ್ಧತಾ ಕ್ರಮಗಳು ಮುಗಿದರೆ ಈ ವಾರದಲ್ಲಿ ಸಂಚಾರ ಆರಂಭಿಸಲಿದೆ ಎಂದು ಡಿಎನ್‌ಎ ವರದಿ ಮಾಡಿದೆ.

ಭಾರತದಲ್ಲಿ ಮೊದಲ ಬಾರಿಗೆ ಈ ಬಸ್‌ ಮುಂಬೈನಲ್ಲಿ ಸಂಚಾರ ಪ್ರಾರಂಭ ಮಾಡಲಿದೆ. ಈಗಾಗಲೇ ಈ ಬಸ್‌ ಇದು ಪುಣೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದ (ARAI) ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಸ್ವಿಚ್ ಸಂಸ್ಥೆಯು ನಿರ್ಮಿಸಿದ ಇ-ಬಸ್ ಆಗಸ್ಟ್ 2022 ರಲ್ಲಿ ಆಗಮಿಸಿತ್ತು. ಇದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾಕ್ಷಿಯಾಗಿದ್ದರು.

ಮೂಲಗಳ ಪ್ರಕಾರ, ಮುಂಬೈ ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಸಂಸ್ಥೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಕಾರಣ ಬಸ್ ಇನ್ನೂ ಎರಡು ಮೂರು ದಿನಗಳವರೆಗೆ ಸಂಚಾರ ಪ್ರಾರಂಭಿಸುವುದಿಲ್ಲ. ಒಮ್ಮೆ ಪ್ರಕ್ರಿಯೆ ಪ್ರಾರಂಭಗೊಂಡರೆ ಕುರ್ಲಾ ಬಸ್ ಡಿಪೋದಿಂದ ಹೊರಟು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮಾರ್ಗದಲ್ಲಿ ಮೊದಲ ಎಸಿ ಡಬಲ್ ಡೆಕ್ಕರ್ ಇ-ಬಸ್‌ ಸಂಚಾರ ಪ್ರಾರಂಭಿಸಲಿದೆ ಎಂದು ಬೆಸ್ಟ್ ಜನರಲ್ ಮ್ಯಾನೇಜರ್ ಲೋಕೇಶ್ ಚಂದ್ರ ಹೇಳಿದ್ದಾರೆ.

ಪ್ರತಿ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ನ ಬೆಲೆ 2 ಕೋಟಿ ರೂಪಾಯಿ ಆಗಿದ್ದು, ಇವುಗಳಲ್ಲಿ ಹತ್ತು ಬಸ್‌ಗಳು ಮೊದಲ ಬ್ಯಾಚ್‌ನಲ್ಲಿ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಬಳಿಕ ಹಂತ ಹಂತವಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

ಡಬಲ್ ಡೆಕ್ಕರ್ ಎಸಿ ಇ-ಬಸ್‌ನ ವೈಶಿಷ್ಟ್ಯಗಳು ಇಂತಿವೆ

ಡಬಲ್ ಡೆಕ್ಕರ್ ಎಸಿ ಇ-ಬಸ್‌ನ ವೈಶಿಷ್ಟ್ಯಗಳು ಇಂತಿವೆ

1. ಡಿಜಿಟಲ್ ಟಿಕೆಟಿಂಗ್‌ಗಾಗಿ ಟ್ಯಾಪ್-ಇನ್ ಮತ್ತು ಟ್ಯಾಪ್-ಔಟ್ ಸೌಲಭ್ಯ ಸೇರಿದಂತೆ ಎಲೆಕ್ಟ್ರಾನಿಕ್ ಸೂಚನೆಗಳು, ಸಿಸಿಟಿವಿ ಕ್ಯಾಮೆರಾವನ್ನು ಬಸ್ ಹೊಂದಿರುತ್ತದೆ.

2. ಇದು ಎರಡು ಮೆಟ್ಟಿಲುಗಳ ವ್ಯವಸ್ಥೆಯನ್ನು ಹೊಂದಿರುತ್ತದೆ. ಅಸ್ತಿತ್ವದಲ್ಲಿರುವ ಡಬಲ್ ಡೆಕ್ಕರ್ ಬಸ್ ಅನ್ನು ಅನ್ಲೈನ್ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಹೊಂದಿರುತ್ತದೆ.

3. ಒಮ್ಮೆ ಚಾರ್ಚ್‌ ಮಾಡಿದ ಸ್ವಿಚ್ EiV22 ಮಾಡೆಲ್ ಬಸ್‌ 231-kWh ಬ್ಯಾಟರಿಯನ್ನು ಹೊಂದಿದ್ದು 250 ಕಿಲೋಮೀಟರ್‌ವರೆಗೂ ಚಲಿಸುತ್ತದೆ.

4. ಕೇವಲ 45 ನಿಮಿಷಗಳ ಚಾರ್ಜ್‌ನ ನಂತರ ಇ-ಬಸ್ ತನ್ನ ವ್ಯಾಪ್ತಿಯನ್ನು 100 ಕಿಲೋಮೀಟರ್‌ಗಳಷ್ಟು ಓಡುತ್ತದೆ. ಆದರೆ ಪೂರ್ಣ ಚಾರ್ಜ್‌ಗೆ 80 ನಿಮಿಷಗಳು ಬೇಕಾಗುತ್ತದೆ.

5. ಇದು ಪ್ರತಿ ಬಸ್ಸಿಗೆ 90 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು.

ಇನ್ನು ಒಂದು ವಾರದಲ್ಲಿ ಕಾರ್ಯಾಚರಣೆ

ಇನ್ನು ಒಂದು ವಾರದಲ್ಲಿ ಕಾರ್ಯಾಚರಣೆ

ಬೆಸ್ಟ್‌ನ ಜನರಲ್ ಮ್ಯಾನೇಜರ್ ಲೋಕೇಶ್ ಚಂದ್ರ, ಎಸಿ ಡಬಲ್ ಡೆಕ್ಕರ್ ಇ-ಬಸ್ ಇನ್ನು ಒಂದು ವಾರದಲ್ಲಿ ಕಾರ್ಯಾಚರಣೆಗೆ ಬರಲಿದೆ. ಡೀಸೆಲ್‌ನಲ್ಲಿ ಚಲಿಸುವ ಸುಮಾರು 40 ನಾನ್-ಎಸಿ ಡಬಲ್-ಡೆಕ್ಕರ್‌ಗಳು ಈಗ ಹೆಚ್ಚು ಚಲನೆಯಲ್ಲಿವೆ. ಆದರೆ ಜೂನ್ ಅಂತ್ಯದ ವೇಳೆಗೆ ಅವುಗಳನ್ನು ಹಂತಹಂತವಾಗಿ ಅವುಗಳ ಸಂಖ್ಯೆಯನ್ನು ಕಡಿತ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ನಗರಕ್ಕೂ ಡಬಲ್‌ ಡೆಕ್ಕರ್‌ ಬಸ್‌

ಬೆಂಗಳೂರು ನಗರಕ್ಕೂ ಡಬಲ್‌ ಡೆಕ್ಕರ್‌ ಬಸ್‌

ಇದೇ ಮಾದರಿಜಯ ಬಸ್‌ಗಳು ಬೆಂಗಳೂರಿನಲ್ಲೂ ಚಾಲನೆಗಳ್ಳಲಿದ್ದು, ಈಗಾಗಲೇ ಬೆಂಗಳೂರು ನಗರ ಸಾರಿಗೆ ಸಂಸ್ಥೆ ಟೆಂಡರನ್ನಯ ಆಹ್ವಾನಿದೆ. ಇದೇ ಜನವರಿ 3ರಂದು ಬಿಎಂಟಿಸಿ ಡಬಲ್ ಡೆಕ್ಕರ್ ಬಸ್‌ಗಳ ತಾಂತ್ರಿಕ ವಿಶೇಷಣಗಳನ್ನು ಅಂತಿಮಗೊಳಿಸಿದ್ದು, ಇದು 25 ವರ್ಷಗಳ ನಂತರ ನಗರದ ರಸ್ತೆಗಳಿಗೆ ಡಬಲ್‌ ಡೆಕ್ಕರ್‌ ಬಸ್‌ ಮರಳಲಿದೆ.

ಡಬಲ್‌ ಡೆಕ್ಕರ್‌ಗೆ ಬಿಎಂಟಿಸಿ ಟೆಂಡರ್

ಡಬಲ್‌ ಡೆಕ್ಕರ್‌ಗೆ ಬಿಎಂಟಿಸಿ ಟೆಂಡರ್

ಬಿಎಂಟಿಸಿ ಟೆಂಡರ್ ಸೂಚನೆಯ ಪ್ರಕಾರ, ಫೆಬ್ರವರಿ 1, 2023, ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಡಬಲ್‌ ಡೆಕ್ಕರ್‌ ಎಸಿ ಬಸ್‌ ಸಂಬಂಧ ಬಿಎಂಟಿಸಿ ಜನವರಿ 17ರಂದು ಪೂರ್ವಭಾವಿ ಸಭೆಯನ್ನು ಕರೆದಿತ್ತು. ಈ ಬಗ್ಗೆ ಫೆಬ್ರವರಿ 15ಳಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯೋಜಿಸಿದ್ದು. ಜುಲೈನಲ್ಲಿ ಬಸ್‌ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+