ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ

ನವ ದೆಹಲಿ, ಜೂನ್ 26: ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಿರುವ ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವಂತೆ. ಮಹಿಳೆಯರ ಪಾಲಿಗೆ ವಿಶ್ವದ ಅತ್ಯಂತ ಅಸುರಕ್ಷಿತ ರಾಷ್ಟ್ರ ಭಾರತ ಎಂದು ಹೊಸ ಸಮೀಕ್ಷೆಯೊಂದು ಹೇಳುತ್ತಿದೆ.

ಹೌದು, ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶ ಭಾತರವೆಂದು ಥಾಮ್ಸನ್ ರಾಯಿಟರ್ಸ್‌ ಫೌಂಡೇಶನ್ ಮಾಡಿರುವ ಸರ್ವೆ ಹೇಳುತ್ತಿದೆ. ಯುದ್ಧಗಳಲ್ಲಿ ಸಿಲುಕಿರುವ ಅಪಘಾನಿಸ್ಥಾನ ಮತ್ತು ಸಿರಿಯಾಕ್ಕೆ ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನ ಲಭಿಸಿದೆ. 550 ಮಂದಿ ಮಹಿಳಾ ವಿಷಯ ತಜ್ಞರು ತಂಡ ಈ ಸರ್ವೆ ಮಾಡಿದೆ.

ಭಾರತದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ಶೋಷಣೆ, ಅತ್ಯಾಚಾರ, ಗುಲಾಮರನ್ನಾಗಿ ಮಾಡಿಕೊಳ್ಳುವ ಪದ್ಧತಿ ವಿಶ್ವದ ಉಳಿದ ದೇಶಗಳಿಗಿಂತಲೂ ಹೆಚ್ಚಿದೆ ಎಂದು ಥಾಮ್ಸನ್ ರಾಯಿಟರ್ಸ್‌ ಫೌಂಡೇಶನ್ ಹೇಳಿದೆ. ಈ ಸಂಸ್ಥೆ ಈ ಹಿಂದೆಯೂ ಇದೇ ರೀತಿಯ ಸರ್ವೆ ಮಾಡಿತ್ತು.

ದೇಶದಲ್ಲಿ ಪ್ರತಿ ಗಂಟೆಗೆ 4 ಅತ್ಯಾಚಾರ

ದೇಶದಲ್ಲಿ ಪ್ರತಿ ಗಂಟೆಗೆ 4 ಅತ್ಯಾಚಾರ

ಸರ್ಕಾರಿ ದಾಖಲೆಗಳ ಪ್ರಕಾರ 2007 ರಿಂದ 2016ರ ಅಂತರದಲ್ಲಿ ಭಾರತದಲ್ಲಿ ಮಹಿಳೆಯರ ಮೇಲಿನ ಹಿಂಸೆ 83% ಹೆಚ್ಚಾಗಿದೆಯಂತೆ. ಭಾರತದಲ್ಲಿ ಪ್ರತಿ 1 ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆಯಂತೆ. ದಾಖಲಾಗದೇ ಉಳಿವ ಅತ್ಯಾಚಾರಗಳನ್ನು ಪರಿಗಣಿಸಿದರೆ ಗಂಟೆಗೆ 10ಕ್ಕೂ ಹೆಚ್ಚು ಅತ್ಯಾಚಾರಗಳಾಗುತ್ತಿವೆ ಎಂಬುದು ಆತ್ಮವನ್ನೇ ಹಿಸುಕುವ ಕಠು ಸತ್ಯ.

ಯಾವ ರೀತಿಯ ದೌರ್ಜನ್ಯ ಹೆಚ್ಚು

ಯಾವ ರೀತಿಯ ದೌರ್ಜನ್ಯ ಹೆಚ್ಚು

ಭಾರತದಲ್ಲಿ ಪ್ರಮುಖವಾಗಿ ಮಹಿಳೆಯರ ಮೇಲೆ ಮೂರು ವಿಧದ ದೌರ್ಜನ್ಯಗಳು ನಡೆಯುತ್ತಿವೆ. ಮೊದಲನೆಯದು ಲೈಂಗಿಕ ಅತ್ಯಾಚಾರ. ಧಾರ್ಮಿಕ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಆಗುತ್ತಿರುವ ದೌರ್ಜನ್ಯ, ಮೂರನೆಯದ್ದು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳಲು ಮಾನವ ಕಳ್ಳ ಸಾಗಣೆ ಮಾಡುವುದು ಕೂಡಾ ಭಾರತದಲ್ಲೇ ಹೆಚ್ಚಂತೆ.

ಭಾರತಕ್ಕಿಂತ ಪಾಕಿಸ್ತಾನ ಬೆಟರ್‌ ಅಂತೆ

ಭಾರತಕ್ಕಿಂತ ಪಾಕಿಸ್ತಾನ ಬೆಟರ್‌ ಅಂತೆ

ಭಾರತಕ್ಕೆ ಹೋಲಿಸಿದಲ್ಲಿ ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಸುರಕ್ಷತೆ ಹೆಚ್ಚಿದೆ ಎನ್ನುತ್ತಿದೆ ವರದಿ. ಪಾಕಿಸ್ತಾನವು ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಸೌದಿ ಅರೆಬಿಯಾ 5ನೇ ಸ್ಥಾನದಲ್ಲಿದೆ.

ಭಾರತ ತಲೆ ತಗ್ಗಿಸುವ ವಿಷಯ

ಭಾರತ ತಲೆ ತಗ್ಗಿಸುವ ವಿಷಯ

ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರ, ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತವು ವಿಶ್ವದ ಮುಂದೆ ತಲೆ ತಗ್ಗಿಸುವ ವಿಷಯ ಇದಾಗಿದ್ದು, ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಯತ್ನದಲ್ಲಿರುವ ನಾವುಗಳು ಮೊದಲಿಗೆ ಮಹಿಳೆಯರ ಭದ್ರತೆಗೆ ಆದ್ಯತೆ ನೀಡಬೇಕಿದೆ.

ಅಮೆರಿಕ ಕೂಡಾ ಪಟ್ಟಿಯಲ್ಲಿದೆ

ಅಮೆರಿಕ ಕೂಡಾ ಪಟ್ಟಿಯಲ್ಲಿದೆ

ಆಶ್ಚರ್ಯಕರ ರೀತಿಯಲ್ಲಿ ಈ ಪಟ್ಟಿಯಲ್ಲಿ ದೇಶ ಅಮೆರಿಕ ಕೂಡ ಇದೆ. ಮೊದಲ ಬಾರಿಗೆ ಅಮೆರಿಕವು ಈ ಪಟ್ಟಿಯಲ್ಲಿ ಟಾಪ್ 10 ಒಳಗೆ ಬಂದಿದೆ. ಅಲ್ಲಿ ಕೂಡ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆಯೆಂದು ವರದಿ ಹೇಳುತ್ತಿದೆ. ಅಮೆರಿಕವು ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಶಾಸಕರು, ಮಂತ್ರಿಗಳಿಂದಲೇ ದೌರ್ಜನ್ಯ

ಶಾಸಕರು, ಮಂತ್ರಿಗಳಿಂದಲೇ ದೌರ್ಜನ್ಯ

ದೆಹಲಿಯ ನಿರ್ಭಯ ಅತ್ಯಾಚಾರದ ನಂತರ ಕಾನೂನುಗಳಲ್ಲಿ ಬದಲಾವಣೆಗಳಾದರೂ, ಮಹಿಳೆಯರ ರಕ್ಷಣೆಗಾಗಿ ಹಲವು ಹೊಸ-ಹೊಸ ತಂಡಗಳ ರಚನೆ ಮಾಡಲಾದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ. ರಕ್ಷಣೆಯ ಹೊಣೆ ಹೊರಬೇಕಾದ ಶಾಸಕರು, ಮಂತ್ರಿಗಳ ಮೇಲೆ ಮಹಿಳಾ ದೌರ್ಜನ್ಯ, ಅತ್ಯಾಚಾರಗಳಂತಹಾ ಹೀನ ಪ್ರಕರಣಗಳು ದಾಖಲಾಗಿರುವುದು ದೇಶದಲ್ಲಿ ಮಹಿಳೆಯರಿಗಿರುವ ಅಸುರಕ್ಷತೆಯನ್ನು ಎತ್ತಿ ತೋರುತ್ತದೆ.

ಟಾಪ್ ಟೆನ್ ಪಟ್ಟಿ ಇಲ್ಲಿದೆ ನೋಡಿ

ಟಾಪ್ ಟೆನ್ ಪಟ್ಟಿ ಇಲ್ಲಿದೆ ನೋಡಿ

1-ಭಾರತ
2-ಅಫ್ಘಾನಿಸ್ಥಾನ
3-ಸಿರಿಯಾ
4-ಸೊಮಾಲಿಯಾ
5-ಸೌದಿ ಅರೆಬಿಯಾ
6-ಪಾಕಿಸ್ತಾನ
7-ರಿಪಬ್ಲಿಕ್ ಆಫ್ ಕಾಂಗೋ
8-ಯೆಮನ್
9-ನೈಜೀರಿಯಾ
10-ಅಮೆರಿಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+