ಜೂ.13: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜೂ.13: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

13.00: ಮಹಾರಾಷ್ಟ್ರದಲ್ಲಿ ಶುಕ್ರವಾರ ಬೆಳಂಬೆಳಗ್ಗೆ ಸತಾರಾದ ಹೆದ್ದಾರಿಯಲ್ಲಿ ಕ್ರೂಸರ್ ವಾಹನ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು 10 ಜನರ ದುರ್ಮರಣವಾಗಿದೆ. ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
12.00: ಫುಟ್ಬಾಲ್ ವಿಶ್ವಕಪ್ ಕುರಿತು ಅಧ್ಯಯನ ನಡೆಸಲು ಸಚಿವ ಸೇರಿದಂತೆ ಗೋವಾ ಬಿಜೆಪಿಯ ಆರು ಶಾಸಕರು ಬ್ರೆಜಿಲ್ ಪ್ರವಾಸಕ್ಕೆ ಹೊರಟಿದ್ದಾರೆ. ಅವರು ತೆರಳುತ್ತಿರುವುದು ಸ್ವಂತ ಖರ್ಚಿನಲ್ಲೇ ಎಂದೇ ಸಿಎಂ ಮನೋಹರ್ ಪಾರಿಕ್ಕಾರ್ ಹೇಳಿದ್ದಾರೆ.

Top news in brief for the day

11.30: ಕರ್ನಾಟಕದ ಬಿಜಾಪುರ ನಗರದಲ್ಲಿ ಈಚೆಗೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ 17 ಮಂದಿಗೆ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ
10.40: ಮಾಜಿ ಸಂಸದ ಹಾಗೂ ಮಾಜಿ ರಾಜ್ಯಸಭಾ ಸದಸ್ಯರ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ತಂಡದಿಂಡ ಪ್ರಕರಣ ದಾಖಲು. ನವದೆಹಲಿ ಹಾಗೂ ಒಡಿಶಾದಲ್ಲಿ ದಾಳಿ.
10.30: ಎನ್ಡಿಎ ಸರ್ಕಾರದ ಚೊಚ್ಚಲ ಬಜೆಟ್ ಜುಲೈ 11 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಮುಂದಿನ ಅಧಿವೇಶನ ಜುಲೈ 7 ರಿಂದ ಆರಂಭವಾಗುವ ನಿರೀಕ್ಷೆಯಿದೆ.
10.15: ಚತ್ತೀಸ್ ಗಢದ ಬಿಲಾಯಿ ಉಕ್ಕು ಕಾರ್ಖಾನೆಯಲ್ಲಿ ಶುಕ್ರವಾರ ಸಂಜೆ ಸ್ಫೋಟ ಸಂಭವಿಸಿದ್ದು, ವಿಷಾನಲ ಸೋರಿಕೆಯಿಂದ 5 ಮಂದಿ ಸಾವನ್ನಪ್ಪಿ, 40 ಮಂದಿ ಗಾಯಗೊಂಡಿದ್ದಾರೆ.
9.45 : ಕ್ಯಾಂಪಾಕೋಲಾ ತೆರವು ಜೂ.17ರಿಂದ ಆರಂಭಗೊಳ್ಳಲಿದೆ. ಕಟ್ಟಡ ತೆರವಿಗೆ ಗುರುವಾರ ಸಂಜೆ 5 ಗಂಟೆಗೆ ಗಡುವು ಮುಗಿದಿದೆ. [ಹಿಂದಿನ ಕಥೆ ಓದಿ]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+