ಏಷ್ಯಾದಲ್ಲೇ ಅತ್ಯಂತ ಲಂಚಕೋರ ರಾಷ್ಟ್ರ ಭಾರತ: ಸಮೀಕ್ಷೆ
ಶೇ. 65 ರಷ್ಟು ಜನರು ಇಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಲಂಚ ನೀಡಲೇಬೇಕು ಎಂಬ ಮಾಹಿತಿ ಸಮೀಕ್ಷೆಯಲ್ಲಿದೆ. ಇನ್ನು, ಜಪಾನ್ ದೇಶ ಅತಿ ಕಡಿಮೆ ಲಂಚಕೋರ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬರ್ಲಿನ್ / ನವದೆಹಲಿ, ಮಾರ್ಚ್ 7: ಭಾರತ ದೇಶವು ಏಷ್ಯಾದಲ್ಲೇ ನಂಬರ್ ಒನ್ ಲಂಚಕೋರ ರಾಷ್ಟ್ರವೆಂಬ ಹೊಸ ಕುಖ್ಯಾತಿಗೆ ಪಾತ್ರವಾಗಿದೆ. ವಿಯೆಟ್ನಾಂ ದೇಶದ ಆ್ಯಂಟಿ ಗ್ರಾಫ್ಟ್ ರೈಟ್ಸ್ ಗ್ರೂಪ್ ಟ್ರಾನ್ಸ್ ಪೆರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯು ಏಷ್ಯಾ ಮಟ್ಟದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಈ ಬಗ್ಗೆ ಹೇಳಲಾಗಿದೆ.
ಈ ಸಂಸ್ಥೆಯು ಸುಮಾರು 16 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷಾ ವರದಿ ಇದಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 69ರಷ್ಟು ಜನರು, ಸರ್ಕಾರಿ ವಲಯದಲ್ಲಿ ತಮಗೆ ಸಿಕಬೇಕಿರುವ ಹಕ್ಕು ಅಥವಾ ಸೇವೆಗಳನ್ನು ಪಡೆಯಲು ಲಂಚ ನೀಡಲೇಬೇಕಾದ ಪರಿಸ್ಥಿತಿಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ವಿಯೆಟ್ನಾ (ಶೇ. 65) ದ್ವಿತೀಯ ಸ್ಥಾನದಲ್ಲಿ ಹಾಗೂ ಪಾಕಿಸ್ತಾನ (ಶೇ. 40) ಮೂರನೇ ಸ್ಥಾನದಲ್ಲಿವೆ.
ಈ ಪಟ್ಟಿಯಲ್ಲಿ ಅತಿ ಕಡಿಮೆ ಲಂಚದ ದೇಶವಾಗಿ ಜಪಾನ್ ಹೊರಹೊಮ್ಮಿದ್ದು, ಆ ದೇಶದಲ್ಲಿರುವ ಲಂಚದ ಪ್ರಮಾಣ ಶೇ. 0.2ರಷ್ಟು ಮಾತ್ರ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications