ಭಾರತದಲ್ಲಿ ಲೆಕ್ಕ ತಪ್ಪುವಂತಿಲ್ಲ ರಾಜಕೀಯ ಪಕ್ಷಗಳಿಗೆ ಕೊಡುವ ರೊಕ್ಕಾ!
ನವದೆಹಲಿ,
ಸೆಪ್ಟೆಂಬರ್ 20: ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕವಾಗಿ ನೀಡುವ ದೇಣಿಗೆಗೆ ಒಂದು ಮಿತಿ ಇರಬೇಕು. ಇಂಥದೊಂದು ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಒಂದು ಹೆಜ್ಜೆ ಮುಂದೆ ಇಟ್ಟಿದೆ.ದೇಶದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಸೋಮವಾರ ಈ ಬಗ್ಗೆ ಪತ್ರವೊಂದನ್ನು ಬರೆದಿದ್ದು, ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಯನ್ನು ಮಿತಿಗೊಳಿಸಲು ಪ್ರಸ್ತಾಪಿಸಿ ಕಾನೂನು ಸಚಿವಾಲಯಕ್ಕೆ ಅದನ್ನು ರವಾನಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'> ಕಾನೂನು ಸಚಿವ ಕಿರಣ್ ರಿಜಿಜುಗೆ ಬರೆದ ಪತ್ರದಲ್ಲಿ, ಮುಖ್ಯ ಚುನಾವಣಾ ಆಯುಕ್ತರು ನಗದು ದೇಣಿಗೆಯನ್ನು ಶೇಕಡಾ 20 ಅಥವಾ 20 ಕೋಟಿಗೆ ಮಿತಿಗೊಳಿಸಲು ಪ್ರಸ್ತಾಪಿಸಿದೆ. ಇದು ಅಲ್ಲದೇ ಚುನಾವಣಾ ನಿಧಿಯನ್ನು ಕಪ್ಪುಹಣದಿಂದ ಮುಕ್ತಗೊಳಿಸಲು ಚುನಾವಣಾ ಆಯೋಗವು ಅನಾಮಧೇಯ ರಾಜಕೀಯ ದೇಣಿಗೆಯನ್ನು 20,000 ರೂಪಾಯಿಯಿಂದ 2,000 ರೂಪಾಯಿಗೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. id='are-slot-2' class='oiad oi-axt oiadv'>

ಚುನಾವಣಾ ಆಯುಕ್ತರು ಬರೆದ ಪತ್ರದಲ್ಲಿ ತಿದ್ದುಪಡಿ ಉಲ್ಲೇಖ
ಜನರ ಪ್ರಾತಿನಿಧ್ಯ (ಆರ್‌ಪಿ) ಕಾಯಿದೆಗೆ ತಿದ್ದುಪಡಿಗಳನ್ನು ಕೇಂದ್ರ ಚುನಾವಣಾ ಆಯುಕ್ತರು ಬರೆದಿರುವ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ. ಈ ಪ್ರಸ್ತಾವನೆಯ ಪ್ರಕಾರ, ರಾಜಕೀಯ ಪಕ್ಷಗಳು 2,000 ರೂಪಾಯಿಗಿಂತ ಕಡಿಮೆ ಹಣವನ್ನು ಸ್ವೀಕರಿಸಿದ ಬಗ್ಗೆ ವರದಿ ಮಾಡುವ ಅಗತ್ಯವಿಲ್ಲ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ರಾಜಕೀಯ ಪಕ್ಷಗಳು 20,000 ರೂಪಾಯಿಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿರಬೇಕು.

ದೇಶದಲ್ಲಿ 253ಕ್ಕೂ ಹೆಚ್ಚು ಪಕ್ಷಗಳು ನಿಷ್ಕ್ರಿಯ?
ಕೇಂದ್ರ ಚುನಾವಣಾ ಸಮಿತಿಯು ಇತ್ತೀಚೆಗೆ ಚಾಲ್ತಿಯಲ್ಲಿ ಇಲ್ಲದಿರುವ 284 ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳನ್ನು (RUPPs) ಪಟ್ಟಿಯಿಂದ ತೆಗೆದುಹಾಕಿತು. ಈ ಹಿನ್ನೆಲೆ ಅವುಗಳಲ್ಲಿ 253ಕ್ಕೂ ಹೆಚ್ಚು ಪಕ್ಷಗಳು ನಿಷ್ಕ್ರಿಯವಾಗಿವೆ ಎಂದು ಘೋಷಿಸಲಾಗಿದ್ದು, ಶಿಸ್ತು ಕ್ರಮವನ್ನು ಜಾರಿಗೊಳಿಸಲಾಗಿತ್ತು. ಇದೇ ತಿಂಗಳ ಆರಂಭದಲ್ಲಿ ಆದಾಯ ತೆರಿಗೆ ಇಲಾಖೆಯು ಕೆಲವು ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳು (RUPP) ಮತ್ತು ಅವರ ಸಂಶಯಾಸ್ಪದ ಹಣಕಾಸು ವಹಿವಾಟುಗಳ ವಿರುದ್ಧ ಪ್ಯಾನ್-ಇಂಡಿಯಾ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಅನೇಕ ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಿತ್ತು.

ಚುನಾವಣಾ ಆಯೋಗದ ಶಿಫಾರಸ್ಸು ಹೇಳುವುದೇನು?
ಕೇಂದ್ರ ಚುನಾವಣಾ ಆಯೋಗದ ಇತ್ತೀಚಿನ ಶಿಫಾರಸಿನ ಮೇರೆಗೆ ಇಲಾಖೆಯು ಚಟುವಟಿಕೆಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆೆ. ಭೌತಿಕ ಪರಿಶೀಲನೆಯ ಸಮಯದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದ ನಂತರದಲ್ಲಿ ಕನಿಷ್ಠ 198 ಘಟಕಗಳನ್ನು RUPP ಪಟ್ಟಿಯಿಂದ ತೆಗೆದುಹಾಕಿದೆ. ವಿತ್ತೀಯ ಕೊಡುಗೆಗಳ ಸಲ್ಲಿಕೆಗೆ ಸಂಬಂಧಿಸಿದ ನಿಯಮಗಳು ಮತ್ತು ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಅವರ ವಿಳಾಸ ಮತ್ತು ಪದಾಧಿಕಾರಿಗಳ ಹೆಸರನ್ನು ನವೀಕರಿಸಲು ವಿಫಲವಾದ ಕಾರಣಕ್ಕಾಗಿ RUPP ಎಂದು ವರ್ಗೀಕರಿಸಲಾಗಿದೆ. ಹೀಗೆ ವರ್ಗೀಕರಿಸಿದ 2,100ಕ್ಕೂ ಹೆಚ್ಚು ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಸಮಿತಿಯು ತಿಳಿಸಿದೆ.

ಸಾಮಾನ್ಯ ಚಿಹ್ನೆಯ ಸವಲತ್ತು ಹೇಗೆ?
ಒಂದು ರಾಜ್ಯದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ಅಭ್ಯರ್ಥಿಗಳಲ್ಲಿ ಕನಿಷ್ಠ ಐದು ಪ್ರತಿಶತದಷ್ಟು ಅಭ್ಯರ್ಥಿಗಳನ್ನು ಹಾಕುವ ಒಪ್ಪಂದದ ಆಧಾರದ ಮೇಲೆ ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳಿಗೆ (RUPP) ಸಾಮಾನ್ಯ ಚಿಹ್ನೆಯ ಸವಲತ್ತು ನೀಡಲಾಗಿದೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಅಂತಹ ಪಕ್ಷಗಳು ಚುನಾವಣೆಗೆ ಸ್ಪರ್ಧಿಸದೆ ಸ್ವೀಕಾರಾರ್ಹ ಅರ್ಹತೆಗಳ ಲಾಭವನ್ನು ಪಡೆಯುವ ಮೂಲಕ ಲಭ್ಯವಿರುವ ಚುನಾವಣಾ ಪೂರ್ವ ರಾಜಕೀಯ ಜಾಗವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಇದು ನಿಜವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳನ್ನು ಗುಂಪುಗೂಡಿಸುತ್ತದೆ. ಜೊತೆಗೆ ಮತದಾರರಿಗೆ ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.
"ಆರ್‌ಪಿ ಕಾಯಿದೆಯ ಸೆಕ್ಷನ್ 29ಎ ಅಡಿಯಲ್ಲಿ ಶಾಸನಬದ್ಧ ಅಗತ್ಯತೆಗಳ ಪ್ರಕಾರ, ಪ್ರತಿ ರಾಜಕೀಯ ಪಕ್ಷವು ತನ್ನ ಹೆಸರು, ಮುಖ್ಯ ಕಚೇರಿ, ಕಛೇರಿ, ವಿಳಾಸ, ಪ್ಯಾನ್‌ನಲ್ಲಿನ ಯಾವುದೇ ಬದಲಾವಣೆಯನ್ನು ಆಯೋಗಕ್ಕೆ ವಿಳಂಬವಿಲ್ಲದೆ ತಿಳಿಸಬೇಕು. ಸಂಬಂಧಪಟ್ಟ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮುಖ್ಯ ಚುನಾವಣಾ ಅಧಿಕಾರಿಗಳು ನಡೆಸಿದ ಭೌತಿಕ ಪರಿಶೀಲನೆಯ ನಂತರ 86 ಪಕ್ಷಗಳುಗಳು ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದಿದೆ. ಸಂಬಂಧಪಟ್ಟ ಪಕ್ಷಗಳ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾದ ಅಂಚೆ ಪ್ರಾಧಿಕಾರದಿಂದ ತಲುಪಿಸದ ನೋಟಿಸ್‌ಗಳ ವರದಿಯನ್ನು ಆಧರಿಸಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications