ಉಕ್ಕಿನ ಮನುಷ್ಯ ಪಟೇಲ್ ಗಾಗಿ ಏಕತಾ ಓಟ
ವಡೋದರಾ, ಡಿ.15: ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬೃಹತ್ ಉಕ್ಕಿನ ಪ್ರತಿಮೆ ನಿರ್ಮಾಣಕ್ಕೆ ಗುಜರಾರ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಏಕತಾ ಯಾತ್ರೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯತಿಥಿ ಪ್ರಯುಕ್ತ ಗುಜರಾತಿನ ವಡೋದರಾದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಏಕತಾ ಯಾತ್ರೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ನರೇಂದ್ರಮೋದಿ ಅವರು ಹಸಿರು ನಿಶಾನೆ ತೋರಿದರು.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪಟೇಲ್ ಅಭಿಮಾನಿಗಳು ಏಕತಾ ಯಾತ್ರೆಯಲ್ಲಿ ಪಾಲ್ಗೊಂಡು ಪ್ರತಿಮೆ ನಿರ್ಮಾಣಕ್ಕೆ ಕಂಕಣಬದ್ಧರಾಗಿರುವುದಾಗಿ ಪಣ ತೊಟ್ಟರು. 2014 ಜನವರಿ 26 ರೊಳಗೆ ಜಗತ್ತಿನಲ್ಲೇ ಅತೀ ಎತ್ತರದ ಅಂದರೆ ಸುಮಾರು 182 ಮೀಟರ್ ಎತ್ತರದ ಪಟೇಲ್ ಪ್ರತಿಮೆ ನಿರ್ಮಾಣಕ್ಕಾಗಿ ಇಂದು ದೇಶದ ವಿವಿಧೆಡೆ ಒಂದು ಸಾವಿರ ಸ್ಥಳಗಳಲ್ಲಿ ಈ ಏಕತಾ ಯಾತ್ರೆ ಕೈಗೊಳ್ಳಲಾಗಿದೆ.
ಸುಮಾರು 50 ಲಕ್ಷ ಕಾರ್ಯಕರ್ತರು ಭಾಗವಹಿಸಬಹುದೆಂದು ಅಂದಾಜಿಸಲಾಗಿದೆ. ಗುಜರಾತ್‌ನಲ್ಲೇ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಿದ್ದರಿಂದ ಏಕತಾ ಯಾತ್ರೆ ಯಶಸ್ವಿ ಎಂದೇ ಹೇಳಲಾಗಿದೆ. ಜಾತಿ, ಮತ, ಪಂಥ, ಧರ್ಮಗಳನ್ನು ಬದಿಗೊತ್ತಿ ಏಕತೆಗಾಗಿ ಓಟ ನಡೆಸಲಾಗಿದೆ.
MT .@AmitShahTweetMuslim volunteers distributing water @ #Runforunity in MumbaiShowing Support for @narendramodi jipic.twitter.com/jTKdDgv4SU
— Arvind Joshi (@arvind_joshi) December 15, 2013 ಏಕತಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನರೇಂದ್ರಮೋದಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪಟೇಲ್ ಅವರು ತಮ್ಮ ಜೀವನದುದ್ದಕ್ಕೂ ದೇಶವು ಒಗ್ಗಟ್ಟಿನಿಂದಿರಬೇಕೆಂದು ಶ್ರಮಿಸಿದ್ದರು. ಅವರ ಪುಣ್ಯತಿಥಿ ದಿನದಂದು ಏಕತಾ ಯಾತ್ರೆ ಕೈಗೊಂಡಿರುವುದು ಅವರ ಕನಸನ್ನು ನನಸು ಮಾಡಲಿದೆ ಎಂದು ಹೇಳಿದರು.

ಪಟೇಲ್ ಕಲಿಸಿಕೊಟ್ಟ ಪಾಠ
ಸ್ವರಾಜ್ಯ ಮತ್ತು ರೈತರು ಎಂಬುದನ್ನು ಮನಗಂಡಿದ್ದ ಪಟೇಲ್ ಅವರು ಜೀವನದುದ್ದಕ್ಕೂ ಏಕಾಗ್ರತೆ ನಮಗೆ ಕಲಿಸಿಕೊಟ್ಟ ಪಾಠವಾಗಿದೆ. ಅವರ ಕನಸುಗಳನ್ನು ಪ್ರತಿಯೊಬ್ಬ ಭಾರತೀಯನೂ ಈಡೇರಿಸಲು ಮುಂದಾಗಬೇಕು.

ವಡೋದರಾದಲ್ಲಿ
ಒಂದು ವೇಳೆ ಪಟೇಲ್ ಬದುಕಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತೆಂದು ಮೋದಿ ಅಭಿಪ್ರಾಯಪಟ್ಟರು. ಏಕತಾ ಯಾತ್ರೆ ಪ್ರಯುಕ್ತ ವಡೋದರಾದಲ್ಲಿ 5 ಕಿ.ಮೀ.ವರೆಗೂ ಇದು ಜರುಗಿತು.

ಮುನ್ನೆಚ್ಚರಿಕೆ ಕ್ರಮ
ಮುನ್ನೆಚ್ಚರಿಕೆ ಕ್ರಮವಾಗಿ ಎರಡೂವರೆ ಸಾವಿರ ಪೊಲೀಸರು ಐದು ಕಂಪೆನಿ ಪ್ಯಾರಾ ಮಿಲಿಟರಿ ಸೇರಿದಂತೆ ಭದ್ರತೆ ಒದಗಿಸಲಾಗಿತ್ತು.

ವಿವಿಧೆಡೆ ಏಕತಾ ಯಾತ್ರೆ
ದೇಶದ ವಿವಿಧೆಡೆ ಏಕತಾ ಯಾತ್ರೆಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಮುಖ್ಯಮಂತ್ರಿಗಳಾದ ವಸುಂಧರಾ ರಾಜೇ, ಶಿವರಾಜ್‌ಸಿಂಗ್ ಚೌಹಾಣ್, ರಮಣ್‌ಸಿಂಗ್ ಸೇರಿದಂತೆ ಅನೇಕರು ಚಾಲನೆ ನೀಡಿದರು.

ಬೆಂಗಳೂರಿನಲ್ಲಿ
ಬಿಜೆಪಿ ಪಕ್ಷದ ಮಾಳವಿಕಾ ಅವಿನಾಶ್, ನಟ ಗಣೇಶ್ ಜತೆ ಮಾಜಿ ಗೃಹ ಸಚಿವ ಆರ್ ಅಶೋಕ್ ಅವರು ಏಕತೆಗಾಗಿ ಓಟದಲ್ಲಿ ಪಾಲ್ಗೊಂಡರು

ಕೇರಳದಲ್ಲಿ
ಕೇರಳದಲ್ಲಿ ವಿಶೇಷವಾಗಿ ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಕರ್ನಾಟಕದಲ್ಲಿ
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲರ ಪುಣ್ಯತಿಥಿ ಅಂಗವಾಗಿ ಸರ್ದಾರ್ ಪಟೇಲ್ ಲೋಹ ಸಂಗ್ರಹ ಸಮಿತಿ ದೇಶಾದ್ಯಂತ ಹಮ್ಮಿಕೊಂಡಿರುವ ಏಕತಾ ಓಟ ಭಾನುವಾರ ಕರ್ನಾಟಕದ 31 ಕಡೆ ನಡೆಸಲಾಯಿತು

ಬೆಂಗಳೂರಿನಲ್ಲಿ
ಬೆಂಗಳೂರಿನಲ್ಲಿ ರಾಜ್ಯದ ಪ್ರಧಾನ ಏಕತಾ ಓಟ ಫ್ರೀಡಂ ಪಾರ್ಕ್ನಿಂದ ಕೆ.ಆರ್. ವೃತ್ತದವರೆಗೆ ನಡೆಯಲಿದೆ. ಇದೇ ರೀತಿ ರಾಜ್ಯದ ವಿವಿಧೆಡೆಗಳಲ್ಲಿಯೂ ಓಟ ನಡೆಸಲಾಯಿತು

ವಡೋದರಾದಲ್ಲಿ
ವಡೋದರಾದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಷಣ

ಬೆಂಗಳೂರಿನಲ್ಲಿ
ಬೆಂಗಳೂರಿನ ಏಕತಾ ಓಟ ಚಿತ್ರ

ವಡೋದರಾದಲ್ಲಿ
ವಡೋದರಾದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏಕತಾ ಓಟಕ್ಕೆ ಚಾಲನೆ ನೀಡಿದರು. ಸಮಾರಂಭದ ಚಿತ್ರಗಳು

ಸಮಾರಂಭದ ಚಿತ್ರಗಳು
ವಡೋದರಾದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏಕತಾ ಓಟಕ್ಕೆ ಚಾಲನೆ ನೀಡಿದರು. ಸಮಾರಂಭದ ಚಿತ್ರಗಳು

ವಡೋದರಾದಲ್ಲಿ
ವಡೋದರಾದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏಕತಾ ಓಟಕ್ಕೆ ಚಾಲನೆ ನೀಡಿದರು.

ವಡೋದರಾದಲ್ಲಿ
ವಡೋದರಾದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏಕತಾ ಓಟಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಮೋದಿ
ವಡೋದರಾದ ವೇದಿಕೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ಜನ ಸಾಗರ
ವಡೋದರಾದಲ್ಲಿ ಕ್ಕಂಡು ಬಂದ ಜನಸಾಗರ

ವಡೋದರಾದಲ್ಲಿ
ವಡೋದರಾದಲ್ಲಿ ಕಂಡು ಬಂದ ಜನಸಾಗರ

ವಡೋದರಾದಲ್ಲಿ
ವಡೋದರಾದಲ್ಲಿ ಕಂಡು ಬಂದ ಜನಸಾಗರ

ವಿವಿಧೆಡೆಗಳಲ್ಲಿಯೂ ಓಟ
ದೇಶಾದ್ಯಂತ ಹಮ್ಮಿಕೊಂಡಿರುವ ಏಕತಾ ಓಟ

ವಿವಿಧೆಡೆಗಳಲ್ಲಿ ಓಟ
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲರ ಪುಣ್ಯತಿಥಿ ಅಂಗವಾಗಿ ಸರ್ದಾರ್ ಪಟೇಲ್ ಲೋಹ ಸಂಗ್ರಹ ಸಮಿತಿ ದೇಶಾದ್ಯಂತ ಹಮ್ಮಿಕೊಂಡಿರುವ ಏಕತಾ ಓಟ












Click it and Unblock the Notifications