ತ್ರಿಶೂಲ ಮತ್ತು ಕ್ರಾಸ್ ನಡುವೆ ಒಂದನ್ನು ಆಯ್ದುಕೊಳ್ಳಿ: ಎನ್ ಬಿಸಿಸಿ
ಕೋಹಿಮಾ, ಮಾರ್ಚ್ 03: 'ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ತ್ರಿಶೂಲ ಮತ್ತು ಕ್ರಾಸ್ ನಡುವಲ್ಲಿ ಒಂದನ್ನು ಆರಿಸಿಕೊಳ್ಳಿ' ಎಂದು ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್(ಎನ್ ಬಿಸಿಸಿ) ಬಹಿರಂಗ ಪತ್ರವೊಂದನ್ನು ಬರೆದಿದೆ.
ಕೇವಲ ಹಣಕ್ಕಾಗಿ ಕ್ರೈಸ್ತನ ತತ್ವಗಳನ್ನು ನಂಬಬೇಡಿ. ಅಭಿವೃದ್ಧಿಗೆ ಬೆಲೆ ಕೊಡಿ. ಕಳೆ ಕೆಲವು ವರ್ಷಗಳಿಂದ ದೇಶದಲ್ಲಿ ಆರ್ ಎಸ್ ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ) ಮತ್ತು ಬಿಜೆಪಿ(ಭಾರತೀಯ ಜನತಾ ಪಕ್ಷ) ಯಿಂದಾಗಿ ಹಿಂದುತ್ವದ ಅಲೆ ಹೆಚ್ಚಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಎನ್ ಬಿಸಿಸಿ ಹೇಳಿದೆ.

ಭಾರತದಲ್ಲಿ ಕ್ರೈಸ್ತಮತವನ್ನು ನಾಶ ಮಾಡಲು ಹೊರಟವರ ಹಿಂದೆ ನಾಗಾ ರಾಜಕಾರಣಿಗಳು ಓಡುತ್ತಿರುವುದು ಖೇದಕರ. 2015-17ರಲ್ಲಿ ಕ್ರೈಸ್ತ ಮಿಶಿನರಿಗಳ ಮೇಲೆ ಎಷ್ಟೆಲ್ಲ ಹಲ್ಲೆಗಳು ನದೆದವು ಎಂಬುದು ನಿಮಗೆ ಗೊತ್ತಿದೆ. ಬೈಬಲ್ ಅನ್ನು ಸಾರ್ವಜನಿಕವಾಗಿ ಸುಟ್ಟಿದ್ದೂ ನಿಮಗೆ ತಿಳಿದಿದೆ. ಆದ್ದರಿಂದ ಪ್ರಚಾರದ ಬೊಗಳೆ ಮಾತುಗಳಿಗೆ ಬೆಲೆ ನೀಡದೆ, ನಿಮ್ಮ ಅಭಿವೃದ್ಧಿಯ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸುವವರ ಬಗ್ಗೆ ಯೋಚಿಸಿ' ಎಂದು ಎನ್ ಬಿಸಿಸಿ ಹೇಳಿದೆ.












Click it and Unblock the Notifications