Imran Khan: ಪಾಕಿಸ್ತಾನ ನೆಲದಲ್ಲಿ ಮತ್ತೆ ಕಿಚ್ಚು ಹಚ್ಚಲು ಸಜ್ಜಾದ ಇಮ್ರಾನ್ ಖಾನ್ ಬೆಂಬಲಿಗರು?
ಪಾಕಿಸ್ತಾನದ ನೆಲದಲ್ಲಿ ನೆಮ್ಮದಿ ಅನ್ನೋದೆ ಇಲ್ಲ, ಕ್ಷಣಕ್ಷಣಕ್ಕೂ ಅಲ್ಲಿ ಏನಾದರೂ ಒಂದು ನಡೆಯುತ್ತೆ. ಒಂದು ಕಡೆ ಉಗ್ರರು ಕಂಡ ಕಂಡ ಜಾಗದಲ್ಲಿ ಬಾಂಬ್ ಇಡುತ್ತಾರೆ, ಇದೆಲ್ಲಾ ಸಾಲದು ಅಂತಾ ರಾಜಕೀಯ ಪ್ರತಿಭಟನೆಗಳು ಶುರುವಾದರೆ ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಾರೆ. ಈ ಮೂಲಕ ಪಾಕಿಸ್ತಾನ ಯಾವುದಾದರೂ ಒಂದು ವಿಚಾರಕ್ಕೆ ಪದೇ ಪದೇ ಹೊತ್ತಿ ಹೊತ್ತಿ ಉರಿಯುತ್ತದೆ. ಹೀಗಿದ್ದಾಗ ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಬೆಂಬಲಿಗರ ಬೆಂಡೆತ್ತಿ ಬ್ರೇಕ್ ಹಾಕಿದ್ದ ಪಾಕಿಸ್ತಾನ ಮಿಲಿಟರಿಗೆ, ಮತ್ತೊಂದು ಚಾಲೆಂಜ್ ಎದುರಾಗಿದೆ!
ಭ್ರಷ್ಟಾಚಾರ ಸೇರಿ, 145ಕ್ಕೂ ಹೆಚ್ಚು ಕೇಸ್‌ಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್‌ರ ಜೀವನ ಕಂಟಕಕ್ಕೆ ಸಿಲುಕಿದೆ. ಹೀಗಾಗಿ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುತ್ತಿರುವ, ಇಮ್ರಾನ್ ಖಾನ್ ಅವರನ್ನ ಹೊರಗೆ ಬಿಡಿ ಅಂತಾ ಅವರ ಅಭಿಮಾನಿಗಳು ಇದೀಗ ಹೋರಾಟ ಆರಂಭ ಮಾಡಿದ್ದು ಕಳೆದ ವಾರ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆದರೆ, ಹಿಂಸಾಚಾರ ನಿಯಂತ್ರಿಸಲು ಪಾಕಿಸ್ತಾನ ಸೇನೆ & ಪೊಲೀಸರು ಆಗ ಯಶಸ್ವಿ ಕೂಡ ಆಗಿದ್ದರು.

ಮತ್ತೆ ಕಿಚ್ಚು ಹಚ್ಚಲು ಸಿದ್ಧತೆ?
ಅದರಲ್ಲೂ, ಕಳೆದ ವಾರ ಪಾಕಿಸ್ತಾನದಲ್ಲಿ ಕಿಚ್ಚು ಹೊತ್ತಿಸಿದ್ದ ಇಮ್ರಾನ್ ಖಾನ್ ಬೆಂಬಲಿಗರು ಪಾಕಿಸ್ತಾನ ಸರ್ಕಾರವನ್ನೇ ನಡುಗಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿ ಮಾಡಿದ್ದು, ಪಾಕಿಸ್ತಾನದ ನೆಲದಲ್ಲಿ ಮತ್ತೆ ಕಿಚ್ಚು ಹಚ್ಚಲು ಸಜ್ಜಾಗಿದ್ದಾರಾ ಇಮ್ರಾನ್ ಖಾನ್ ಬೆಂಬಲಿಗರು? ಅನ್ನೋ ಪ್ರಶ್ನೆ ಮೂಡಿಸಿದೆ. ಹಾಗೇ ಪಾಕಿಸ್ತಾನದ ಸರ್ಕಾರ ಈಗ ನಡುಗುವ ವಾತಾವರಣ ನಿರ್ಮಾಣ ಆಗಿದೆ, ಯಾಕೆ ಗೊತ್ತಾ?












Click it and Unblock the Notifications