IMD Weather Forecast: ಗುಡುಗು ಮಿಂಚು ಸಹಿತ ಈ ಭಾಗಗಳಲ್ಲಿ ಭಾರೀ ಮಳೆ, ಉಳಿದೆಡೆ ಒಣಹವೆ
ಬೆಂಗಳೂರು, ನವೆಂಬರ್ 01: ಕರ್ನಾಟಕ ಸೇರಿದಂತೆ ನೆರೆಯ ದಕ್ಷಿಣದ ರಾಜ್ಯಗಳಲ್ಲಿ ಹಿಂಗಾರು ಮಳೆ ಅಬ್ಬರಿ ಕಡಿಮೆಯಾಗಿದೆ. ಸೈಕ್ಲೋನ್ ಪ್ರಭಾವ ಪೂರ್ಣ ತಗ್ಗಿದ ಬೆನ್ನಲ್ಲೆ ವಿವಿಧೆಡೆ ನಿರ್ಮಾಣವಾಗಿರುವ ವೈಪರೀತ್ಯಗಳ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಹಾರದ ನೈಋತ್ಯ ಭಾಗ, ಪಕ್ಕದ ಜಾರ್ಖಂಡ್ ಮೇಲೆ ಕಡಿಮೆ ಒತ್ತಡದ ಪ್ರದೇಶವು ನವೆಂಬರ್ 01 ರಂದು ಬೆಳಗ್ಗೆ ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ. ಇದು ಪಶ್ಚಿಮ ಬಂಗಾಳ ಮತ್ತು ನೆರೆಹೊರೆ ಪ್ರದೇಶದ ಮೇಲಿನಿಂದ ಬೇರೆ ಭಾಗದತ್ತ ಚಲಿಸಲಿದೆ. ಈ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ ವರೆಗೆ ವಿಸ್ತರಿಸಿದೆ. ಇದು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆ.

ಅರಬ್ಬಿ ಸಮುದ್ರ ಪೂರ್ವ-ಮಧ್ಯ ಭಾಗದಿಂದ ಈಶಾನ್ಯಕ್ಕೆ ಚಲಿಸುವ ವೈಪರೀತ್ಯವೊಂದು ಸೃಷ್ಟಿಯಾಗಿದೆ. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ ವರೆಗೆ ವಿಸ್ತರಿಸಿದೆ. ಇದು ದಕ್ಷಿಣ ಗುಜರಾತ್ ಮತ್ತು ಪಕ್ಕದ ಉತ್ತರ ಮಹಾರಾಷ್ಟ್ರ ಕರಾವಳಿಗಳ ಕಡೆಗೆ ಪೂರ್ವ-ಈಶಾನ್ಯಕ್ಕೆ ಚಲಿಸಬಹುದ. ಮುಂದಿನ 24 ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ನಂತರ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಇದರಿಂದ ಅಷ್ಟಾಗಿ ಮಳೆ ತೊಂದರೆ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಎಲ್ಲೆಲ್ಲಿ ಭಾರೀ ಮಳೆ ನಿರೀಕ್ಷೆ?
ದಕ್ಷಿಣ ಮ್ಯಾನ್ಮಾರ್ ಕರಾವಳಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಉತ್ತರ ಅಂಡಮಾನ್ ಸಮುದ್ರದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ವಾಯು ಚಂಡಮಾರುತದ ಪರಿಚಲನೆ ವಿಸ್ತರಿಸಿದೆ. ಅದರ ಪ್ರಭಾವದಿಂದ ಮುಂದಿನ 48 ಗಂಟೆಗಳಲ್ಲಿ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಲಿದೆ. ನವೆಂಬರ್ 03ರಂದು ರಾತ್ರಿಯಿಂದ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಹೊಸ ವೈಪರೀತ್ಯಗಳು ಸೃಷ್ಟಿಯಾಗಿ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಬಿಹಾರ, ಗುಜರಾತ್ ರಾಜ್ಯ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಉಪ ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮತ್ತು ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಗಂಗಾ ಪಶ್ಚಿಮ ಬಂಗಾಳ, ಗುಜರಾತ್ ರಾಜ್ಯ ಮತ್ತು ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ಮುಂದಿನ ಮೂರು ದಿನಗಳು ಗುಡುಗು ಮಿಂಚು ಸಹಿ ಭಾರೀ ಮಳೆ ಆಗಲಿದೆ.
ಗುಜರಾತ್, ಉತ್ತರ ಕೊಂಕಣ ಕರಾವಳಿ ಮತ್ತು ಪಕ್ಕದ ಸಮುದ್ರ ಪ್ರದೇಶಗಳಲ್ಲಿ, ಪೂರ್ವ ಮಧ್ಯ, ಈಶಾನ್ಯ ಅರಬ್ಬಿ ಸಮುದ್ರ, ಅಂಡಮಾನ್ ಸಮುದ್ರದ ಹಲವು ಭಾಗಗಳಲ್ಲಿ ಗಂಟೆಗೆ ಗರಿಷ್ಠ 55 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆ ಇದೆ.
ಕರ್ನಾಟಕ, ಕೇರಳ, ತಮಿಳುನಾಡು, ಓಡಿಶಾ, ಆಂಧ್ರಪ್ರದೇಶ, ತೆಲಂಗಾಣ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದ ಮಳೆ ಅಬ್ಬರ ಕಡಿಮೆಯಾಗಿದೆ. ಇಲ್ಲೆಲ್ಲ ಒಣಹವೆ ಮುಂದುವರಿಯಲಿದೆ. ಉಳಿದಂತೆ ವಾಯುವ್ಯ ಭಾಗಗ, ಮಧ್ಯ ಭಾಗದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇದೆ.












Click it and Unblock the Notifications