Rain Alert: ಚಂಡಮಾರುತ ಪ್ರಸರಣ ತೀವ್ರ: ಸೆಪ್ಟಂಬರ್ 24ರವರೆಗೆ ರಣಮಳೆ ಎಚ್ಚರಿಕೆ

IMD Weather Forecast: ಹವಾಮಾನ ವೈಪರೀತ್ಯವು ಮುಂದುವರಿದಿದೆ. ಇದರ ಪರಿಣಾಮವಾಗಿ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಮುಂದುವರಿಯಲಿದೆ. ಸೆಪ್ಟಂಬರ್ 24ರವರೆಗೆ ಅನೇಕ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ದೇಶದ ಹಲವೆಡೆ ವಾಯು ಚಂಡಮಾರುತವು ಪ್ರಸರಣ ಮುಂದುವರಿದಿದೆ.

ಮಧ್ಯ ಬಿಹಾರದ ಮೇಲಿನ ಮೇಲಿನ ವಾಯು ಚಂಡಮಾರುತವು ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ವರೆಗೆ ವಿಸ್ತರಿಸಿದೆ. ಅದೇ ರೀತಿ ಮರಾಠವಾಡದ ಸುತ್ತಮುತ್ತ ಸಹ ಸಮುದ್ರ ಮಟ್ಟದಿಂದ 1.5 ಮತ್ತು 3.1 ಕಿ.ಮೀ ಎತ್ತರದಲ್ಲಿದೆ.

IMD Prediction Heavy Rain Alert in Many States for Next 5 Days Due Cyconic Circulation

ಮಹಾರಾಷ್ಟ್ರ ದಕ್ಷಿಣದಿಂದ ಪಶ್ಚಿಮ ಮಧ್ಯ ಮತ್ತು ನೈಋತ್ಯ ಬಂಗಾಳ ಕೊಲ್ಲಿಯವರೆಗೆ ತೆಲಂಗಾಣ ಹಾಗೂ ರಾಯಲಸೀಮಾದ ಮೇಲೆ ಚಂಡಮಾರುತದ ಪ್ರಸರಣದ ಬಿರುಗಾಳಿ ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್‌ ಸುತ್ತುವರಿದಿದೆ.

ಈಶಾನ್ಯ ಅಸ್ಸಾಂ ಮತ್ತು ನೆರೆಹೊರೆಗಳ ಮೇಲೆ ಮೇಲ್ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಬಿರುಗಾಳಿ ಬೀಸುವಿಕೆ ತೀವ್ರತೆ ಹೆಚ್ಚಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಇದೆ. ಅಷ್ಟು ಮಾತ್ರವಲ್ಲದೇ ಬಂಗಾಳ ಕೊಲ್ಲಿಯವರೆಗೆ ಪೂರ್ವ ವಿದರ್ಭ, ತೆಲಂಗಾಣ ಮತ್ತು ದಕ್ಷಿಣ ಕರಾವಳಿ ಆಂಧ್ರ ಪ್ರದೇಶದಾದ್ಯಂತ ವಾಯುಭಾರ ಕುಸಿತ ಸೃಷ್ಟಿಯಾಗಿದೆ.

ಸೆಪ್ಟಂಬರ್ 24ರವರೆಗೆ ಭಾರೀ ಮಳೆ ಮುನ್ಸೂಚನೆ

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮುಂದಿನ ದಿನಗಳಲ್ಲಿ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಮತ್ತು ಮಧ್ಯ ಭಾರತದಲ್ಲಿ ಸೆಪ್ಟೆಂಬರ್ 18 ಮತ್ತು 19ರಂದು ಮಧ್ಯಪ್ರದೇಶ, ಅಂಡಮಾನ್-ನಿಕೋಬಾರ್ ದ್ವೀಪಗಳು, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ.

ಸೆಪ್ಟಂಬರ್ 20ರವರೆಗೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶದಲ್ಲಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆ ಆಗಲಿದೆ. ಸೆಪ್ಟಂಬರ್ 24ರವರೆಗೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ 19 ರಿಂದ 24ರವರೆಗೆ ಮಳೆಯ ಮುನ್ಸೂಚನೆ ಇದೆ. ವಾಯುವ್ಯ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ 18 ಮತ್ತು 19ರಂದು ಮಳೆಯ ನಿರೀಕ್ಷೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದ ಆಂಧ್ರಪ್ರದೇಶ ಕರಾವಳಿ, ಯಾಣಂ ಮತ್ತು ರಾಯಲಸೀಮಾ ಭಾಗಗಳಲ್ಲಿ ಮುಂದಿನ 05 ದಿನಗಳ ಕಾಲ ಬಲವಾದ ಗಾಳಿಗಳು ಬೀಸುವ ಸಾಧ್ಯತೆ ಇದೆ. ಪಶ್ಚಿಮ ಭಾರತದಲ್ಲಿ ಕೊಂಕಣ ಮತ್ತು ಮಧ್ಯ ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಸೆಪ್ಟಂಬರ್ 19ರಂದು ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+