India Weather: ಚಂಡಮಾರುತ ಪ್ರಸರಣ ತೀವ್ರತೆ: ಆಗಸ್ಟ್ 2-7ರವರೆಗೆ ಈ ಭಾಗಗಳಲ್ಲಿ ರಣಮಳೆ...Rain Alert
IMD Weather Forecast: ಮುಂಗಾರು ಮಳೆಯನ್ನು ಸೃಷ್ಟಿಯಾಗಿರುವ ಹವಾಮಾನ ವೈಪರೀತ್ಯಗಳು ಮತ್ತಷ್ಟು ತೀವ್ರಗೊಳಿಸುತ್ತಿವೆ. ಒಂದು ವಾರದಿಂದ ಕೊಂಚ ತಣ್ಣಗಾಗಿದ್ದ ಮಳೆ ಮತ್ತೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಮುಂದಿನ ಏಳು ದಿನಗಳ ಪೈಕಿ ಆಗಸ್ಟ್ 2ರಿಂದ 6ರವರೆಗೆ ವಿವಿಧ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಹಾಗೂ ಅತ್ಯಧಿಕ ಜೋರು ಮಳೆ ನಿರೀಕ್ಷೆ ಇದೆ ಎಂದು ಶುಕ್ರವಾರ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರ ಮಟ್ಟದಲ್ಲಿ ಕಡಿಮೆ ಒತ್ತಡದ ಪ್ರದೇಶ, ಬೇರೆ ಕಡೆಗಳಲ್ಲಿ ವಾಯುಭಾರ ಕುಸಿತ ಮತ್ತು ಚಂಡಮಾರುತ ಪರಿಚಲನೆ ಒಟ್ಟಿಗೆ ತೀವ್ರಗೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ದೇಶದ ನಾನಾ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಮತ್ತು ಮಧ್ಯ ಭಾರತದ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಸಂಭವವಿದೆ. ಜುಲೈನಲ್ಲಿ ಮಳೆ ಎದುರಿಸಿದ್ದ ಈಶಾನ್ಯ ಭಾರತದ ರಾಜ್ಯಗಳ ಅತ್ಯಧಿಕ ಮಳೆಗೆ ಸಾಕ್ಷಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಮುಂದಿನ ಏಳು ದಿನಗಳಲ್ಲಿ ಆಗಸ್ಟ್ 04 ಮತ್ತು 06 ರಂದು ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಪೂರ್ವ ಭಾಗ, ರಾಜಸ್ಥಾನದ ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ.
ಈಶಾನ್ಯ ಭಾರತಕ್ಕೆ ಬಿಡುವಿಲ್ಲದ ಭಾರೀ ಮಳೆ
ಈಶಾನ್ಯ ಭಾರತ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ನಾಳೆ ಶನಿವಾರ ಆಗಸ್ಟ್ 02 ರಂದು ಅಸ್ಸಾಂ ಮತ್ತು ಮೇಘಾಲಯದ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಧಿಕ ಮಳೆ ಸಂಭವವಿದೆ. ಇದರೊಂದಿಗೆ ಒಂದು ವಾರದ ಕಾಲ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಗುಡುಗು, ಮಿಂಚು ಮತ್ತು ಧಾರಾಕಾ ಮಳೆ ಆಗಲಿದೆ. ಯೆಲ್ಲೋ ಅಲರ್ಟ್ ನೀಡಲಾಗಿದೆ. ಅರುಣಾಚಲ ಪ್ರದೇಶ ಮತ್ತು ಮೇಘಾಲದಲ್ಲಿ ಈ ಭಾರಿ ಪ್ರವಾಹ ಹಾನಿ ಉಂಟಾಗುವ ಸಾಧ್ಯತೆಗಳು ಇವೆ.
ಮಧ್ಯ ಭಾರತಕ್ಕೆ ಏನಿದೆ ಮುನ್ಸೂಚನೆ
ಆಗಸ್ಟ್ 07ರವರೆಗೆ ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರತ್ಯೇಕ ಭಾರೀ ಮಳೆ ನೀರೀಕ್ಷೆ ಇದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಸಿಕ್ಕಿಂನಲ್ಲಿ ಆಗಸ್ಟ್ 05ರವರೆಗ ಮಳೆ ಆರ್ಭಟ ಕಂಡು ಬರಲಿದೆ. ಆಗಸ್ಟ್ 02 ಮತ್ತು 03ರಂದು ಬಿಹಾರದಲ್ಲಿ ಜನರ ಹೆಚ್ಚಿನ ಮಳೆಗೆ ಸಾಕ್ಷಿಯಾಗಲಿದ್ದಾರೆ. ದೆಹಲಿ ಸೇರಿದಂತೆ ತ್ರಿಪುರ, ಮಣಿಪುರ ಭಾಗಗಳಲ್ಲೂ ಮಬ್ಬು ಕವಿಯಲಿದೆ. ನಿತ್ಯ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ.
ಹವಾಮಾನ ವೈಪರೀತ್ಯಗಳ ಸದ್ಯದ ಲಕ್ಷಣಗಳು
ಸರಾಸರಿ ಸಮುದ್ರ ಮಟ್ಟದಲ್ಲಿ ಸ್ಟ್ರಫ್ ಉಂಟಾಗಿದ್ದು, ಅದು ಗಂಗಾನಗರ, ಹಿಸ್ಸಾರ್, ದೆಹಲಿ, ಗೋರಖ್‌ಪುರ, ಪಾಟ್ನಾ, ಮಾಲ್ಡಾ, ಕ್ಯಾನಿಂಗ್ ಮೂಲಕ ಹಾದುಹೋಗುತ್ತಿದೆ. ನಂತರ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದತ್ತ ಸಾಗಲಿದೆ. ನೈಋತ್ಯ ಉತ್ತರ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಮೇಲಿನ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಅದು ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವಿಸ್ತರಣೆ ಆಗಿದೆ.
ಪಶ್ಚಿಮ ಬಂಗಾಳದ ಉತ್ತರದ ವಿವಿಧ ಭಾಗಗಳಲ್ಲಿ ಮೇಲೂ ಸಹಿತ ವಾಯು ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ. ಪಕ್ಕದ ಬಾಂಗ್ಲಾದೇಶದ ಮೇಲೂ ಈ ವೈಪರೀತ್ಯದ ಪ್ರಭಾವ ಉಂಟಾಗಿದೆ. ಅದ ಸಮುದ್ರ ಮಟ್ಟದಿಂದ ಸುಮಾರು 9.6 ಕಿ.ಮೀ ವರೆಗೆ ವಿಸ್ತರಣೆ ಆಗಿದೆ. ರಾಜಸ್ಥಾನ ಈಶಾನ್ಯ ಭಾಗಗಳ ಮೇಲೆ ಚಂಡಮಾರುತದ ಪರಿಚಲನೆ ಬಿರುಗಾಳಿ ವೇಗ ಪಡೆದುಕೊಂಡಿದ್ದು,ಸಮುದ್ರ ಮಟ್ಟದಿಂದ 3.1 ಕಿ.ಮೀ. ಎತ್ತರದಲ್ಲಿ ಅದರ ಗಾಳಿ ಸುತ್ತುವರಿದಿದೆ. ಇದರಿಂದಾಗಿ ಹರಿಯಾಣ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.












Click it and Unblock the Notifications