Rain Alert: ಚಂಡಮಾರುತ ಪ್ರಸರಣ! ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ...Cyclone
IMD Cyclone Alert: ಭಾರತಾದ್ಯಂತ ವಿಸ್ತರಣೆ ಆಗಿರುವ ಮುಂಗಾರು ಮಳೆ ಎಲ್ಲಡೆ ಅಬ್ಬರ ಶುರುವಿಟ್ಟುಕೊಂಡಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಮೇಲ್ಮೈನಲ್ಲಿ ಉಂಟಾಗಿದ್ದ ವಾಯುಭಾರತ ಕುಸಿತದ ತೀವ್ರ ಕಡಿಮೆ ಆಗಿದೆ. ಸಮುದ್ರ ಮಟ್ಟಕ್ಕಿಂತ ಅತೀ ಹೆಚ್ಚು ಎತ್ತರದಲ್ಲಿದ್ದ ಬಿರುಗಾಳಿ ಮುಂದೆ ಬಂಗಾಳಕೊಲ್ಲಿಗೆ ಬಂದು ಸೇರಲಿದೆ ಎಂದು ಹೇಳಲಾಗಿತ್ತು. ಅದಕ್ಕು ಮೊದಲೇ ದುರ್ಬಲಕೊಂಡಿದೆ. ಮುಂದಿನ ಮೂರು ದಿನ ವಿವಿಧ ಭಾಗಗಳಲ್ಲಿ ಭಾರಿಯಿಂದ ಅತ್ಯಧಿಕ ಧಾರಾಕಾರ ಮಳೆ ಆಗಲಿದೆ ಎಂದು IMD ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸರಾಸರಿ ಸಮುದ್ರ ಮಟ್ಟದಿಂದಲೂ ಮೇಲಿದ್ದ ಚಂಡಮಾರುತ ಪ್ರಸರಣ ಸೂರತ್‌ಗಢ, ಗ್ವಾಲಿಯರ್, ಕಾಂಟೈಮ್ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಅಲ್ಲಿಂದ ಮುಂದೆ ಆಗ್ನೇಯಕ್ಕೆ ಬಂಗಾಳಕೊಲ್ಲಿಯ ಈಶಾನ್ಯ ಭಾಗದತ್ತ ಬಿರುಗಾಳಿ ಸಾಗಲಿದೆ. ರಾಜ್ಯದ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಾರುತಗಳು ಮತ್ತೆ ಸಕ್ರಿಯವಾಗಿದ್ದು, ಮುಂದಿನ ಮೂರು ದಿನ ಭಾರೀ ಮಳೆ ಆಗಲಿದೆ.

ರಾಜಸ್ಥಾನದ ಪೂರ್ವ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆ ಆಗಲಿದ್ದು, ಜುಲೈ 13ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಅಸ್ಸಾಂ ಮತ್ತು ಮೇಘಾಲಯ, ಛತ್ತೀಸ್‌ಗಢ, ಕರ್ನಾಟಕ ಕರಾವಳಿ, ಗುಜರಾತ್ ಪ್ರದೇಶ, ಕೇರಳ ಮತ್ತು ಮಾಹೆ, ಕೊಂಕಣ ಮತ್ತು ಗೋವಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಭಾರೀ ಮಳೆ ಪ್ರಯುಕ್ತ ಮುಂದಿನ ಎರಡು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ 7 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪಶ್ಚಿಮ ಬಂಗಾಳದ ಗಂಗಾ ನದಿ ತೀರ, ಜಮ್ಮು-ಕಾಶ್ಮೀರ-ಲಡಾಖ್, ಜಾರ್ಖಂಡ್, ಒಡಿಶಾ, ಪಶ್ಚಿಮ ಮಧ್ಯಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನದ ಪ್ರತ್ಯೇಕ ಕಡೆಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ. ಇಲ್ಲಿ ಗಾಳಿಯ ವೇಗ 30-40 ಕಿಲೋ ಮೀಟರ್ ವೇಗದಲ್ಲಿರಲಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ದಕ್ಷಿಣ ಭಾಗದ ವಿವಿಧೆಡೆ ಮುಂಗಾರು ಚುರುಕು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ ಮತ್ತು ಮೇಘಾಲಯ, ಛತ್ತೀಸ್‌ಗಢ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಪೂರ್ವ ಮಧ್ಯಪ್ರದೇಶ, ಗುಜರಾತ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ತಮಿಳುನಾಡು ಪುದುಚೇರಿ ಮತ್ತು ಕಾರೈಕಲ್, ತೆಲಂಗಾಣ ಮತ್ತು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ ಇದೆ.
ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾಗದ ಕೆಲವು ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಮಳೆ ಚುರಕಾಗಿದೆ. ಆಗಾಗ ಬಿಸಿಲಿನ ವಾತಾವರಣ ಕಂಡು ಬಂದರೂ ಸಹಿತ ಮಳೆ ಆಗುವ ಎಲ್ಲ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ತಜ್ಞರು ಶನಿವಾರದ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications