ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳಿ: ಶಿವಸೇನೆಗೆ ಕಾಂಗ್ರೆಸ್ ಸವಾಲು
ಮುಂಬೈ, ಮೇ 31: ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಹೊಂದಿದ್ದೂ ಕಮಲ ಪಕ್ಷವನ್ನು ಟೀಕಿಸುತ್ತಿರುವ ಶಿವಸೇನೆಯನ್ನು ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಉಪಚುನಾವಣೆಯ ಫಲಿತಾಂಶದ ನಂತರ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್, "ಒಂದೊಮ್ಮೆ ಉದ್ಧವ್ ಠಾಕ್ರೆಯವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಉಳಿದಿದ್ದರೆ, ಅವರು ಈ ಮೈತ್ರಿಯಿಂದ ಹೊರಗೆ ಬರಬೇಕು. ನಿಮಗೆ ಅಧಿಕಾರದಲ್ಲಿಯೂ ಇರಬೇಕು, ಜೊತೆಗೆ ನೀವು ವಿಪಕ್ಷಗಳಿಗೂ ಬೆಂಬಲ ನೀಡಲು ಇಚ್ಛಿಸುತ್ತೀರಿ. ನಿಜವಾಗಿಯೂ ನಿಮ್ಮ ಉದ್ದೇಶ ಏನು?" ಎಂದು ಪ್ರಶ್ನಿಸಿದ್ದಾರೆ.

"ನಿಜವಾಗಿಯೂ ಅಷ್ಟೊಂದು ಅಸಮಧಾನ ಹೊಂದಿರುವುದಾದರೆ ಎಲ್ಲಾ ಕಾಲಕ್ಕೂ ಸರಕಾರವನ್ನು ಟೀಕಿಸುತ್ತಾ ಇರುವುದಕ್ಕೆ ಬದಲು ಶಿವಸೇನೆ ನೇರವಾಗಿ ಮೈತ್ರಿಯನ್ನು ಕಡಿದುಕೊಳ್ಳಬೇಕು. ಬಿಜೆಪಿಯವರ ನಿರ್ಧಾರದ ಬಗ್ಗೆ ಅಷ್ಟೊಂದು ಅಸಮಧಾನ ಇರುವುದಾದರೆ ಯಾಕೆ ಇನ್ನೂ ಅವರಿಗೆ ಬೆಂಬಲ ನೀಡುತ್ತಿದ್ದಾರೆ," ಎಂದು ಚವಾಣ್ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.












Click it and Unblock the Notifications