Lok Sabha Elections 2024, Opinion Poll: ದಕ್ಷಿಣದ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?
ಮುಂದಿನ ವರ್ಷದ ಮೇ ತಿಂಗಳೊಳಗೆ ಲೋಕಸಭಾ ಚುನಾವಣೆ ನಡೆಯಬೇಕಿದೆ. ಇದಕ್ಕೂ ಮುನ್ನ ಹಲವು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ, ಹಲವಾರು ಮಾಧ್ಯಮಗಳು, ಸಮೀಕ್ಷಾ ಸುದ್ದಿಸಂಸ್ಥೆಗಳು ಸರ್ವೇಯನ್ನು ನಡೆಸುತ್ತಿದೆ.
ಈಗ ಚುನಾವಣೆ ನಡೆದರೆ ಯಾರಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಟೈಮ್ಸ್ ನೌ ಸೇರಿದಂತ ಹಲವಾರು ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಅದರ ಪ್ರಕಾರ, ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪರವಾಗಿ ಸಾರ್ವಜನಿಕರು ಕೈಎತ್ತಿದ್ದಾರೆ. ಸರ್ವೇಯಲ್ಲಿ ಭಾಗವಹಿಸಿದವರು ಮೋದಿ ಈಸ್ ಬೆಸ್ಟ್ ಎನ್ನುತ್ತಿದ್ದಾರೆ.

ಈಗಲೇ ಚುನಾವಣೆ ನಡೆದರೆ ಬಿಜೆಪಿಗೆ ಮತ್ತೆ ಬಹುಮತ ಸಿಗಲಿದೆ, ಆದರೆ, ಕಳೆದ ಬಾರಿ (2019) ಬಂದಷ್ಟು ಸ್ಥಾನಗಳು ಸಿಗುವುದಿಲ್ಲ. ಪ್ರಮುಖವಾಗಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಕೆಲವು ಸೀಟುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಸ್ಮಾಲ್ ಬಾಕ್ಸ್ ಸಂಸ್ಥೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಫಲಿತಾಂಶವನ್ನು ಪ್ರಕಟಿಸಿದೆ. ಗುಜರಾತ್, ದೆಹಲಿ ಮುನ್ಸಿಪಲ್ ಕಾರ್ಪೋರೇಶನ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಅಸೆಂಬ್ಲಿ ಚುನಾವಣೆಯ ಸಮೀಕ್ಷಾ ವರದಿಯನ್ನು ಬಹುತೇಕ ಕರಾರುವಕ್ಕಾಗಿ ಈ ಸಂಸ್ಥೆ ನೀಡಿತ್ತು. ದಕ್ಷಿಣದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಬಹುದು ಎನ್ನುವ ಸರ್ವೇ ವರದಿ ಹೀಗಿದೆ (ತೆಲಂಗಾಣ ರಾಜ್ಯದ ಸಮೀಕ್ಷೆ ಇನ್ನೂ ಪ್ರಕಟವಾಗಿಲ್ಲ)
ರಾಜ್ಯ: ಆಂಧ್ರ ಪ್ರದೇಶ
ಒಟ್ಟು ಲೋಕಸಭಾ ಸ್ಥಾನ: 25
ವೈ.ಎಸ್.ಆರ್ ಕಾಂಗ್ರೆಸ್ : 18
ತೆಲುಗುದೇಶಂ : 07
2019ರ ಫಲಿತಾಂಶ
ವೈ.ಎಸ್.ಆರ್ ಕಾಂಗ್ರೆಸ್ : 22
ತೆಲುಗುದೇಶಂ : 03
--
ರಾಜ್ಯ: ಪುದುಚೇರಿ
ಒಟ್ಟು ಲೋಕಸಭಾ ಸ್ಥಾನ: 01
ಕಾಂಗ್ರೆಸ್ - 01
2019ರ ಫಲಿತಾಂಶ
ಕಾಂಗ್ರೆಸ್ - 01
--
ರಾಜ್ಯ: ಕರ್ನಾಟಕ
ಒಟ್ಟು ಲೋಕಸಭಾ ಸ್ಥಾನ: 28
ಬಿಜೆಪಿ: 15
ಕಾಂಗ್ರೆಸ್ : 12
ಇತರರು : 01
2019ರ ಫಲಿತಾಂಶ
ಬಿಜೆಪಿ: 25
ಕಾಂಗ್ರೆಸ್ : 01
ಇತರರು : 02 (ಪ್ರಜ್ವಲ್ ರೇವಣ್ಣ, ಸುಮಲತಾ)
--
ರಾಜ್ಯ: ತಮಿಳುನಾಡು
ಒಟ್ಟು ಲೋಕಸಭಾ ಸ್ಥಾನ: 39
ಡಿಎಂಕೆ : 36
ಎನ್ಡಿಎ ಮೈತ್ರಿಕೂಟ: 03
2019ರ ಫಲಿತಾಂಶ
ಡಿಎಂಕೆ ಮೈತ್ರಿಕೂಟ : 38
ಎನ್ಡಿಎ ಮೈತ್ರಿಕೂಟ: 01
--
ರಾಜ್ಯ: ಕೇರಳ
ಒಟ್ಟು ಲೋಕಸಭಾ ಸ್ಥಾನ: 20
ಯುಡಿಎಫ್ : 18
ಎಲ್ಡಿಎಫ್ : 02
2019ರ ಫಲಿತಾಂಶ
ಯುಪಿಎ ಮೈತ್ರಿಕೂಟ: 19
ಎಲ್ಡಿಎಫ್ : 01












Click it and Unblock the Notifications