ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಂಪರ್ ಘೋಷಣೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರಾಹುಲ್ ಗಾಂಧಿ ಕೈಗೊಳ್ಳಲಿರುವ ಪ್ರಮುಖ ತೀರ್ಮಾನಗಳ ಬಗ್ಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಟ್ವೀಟ್ ಮಾಡಿದ್ದಾರೆ. ಅವರು ಮೂರು ಟ್ವೀಟ್ ಮಾಡಿದ್ದು, ಅವುಗಳೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ.
.@RahulGandhi made three important announcements today :
— P. Chidambaram (@PChidambaram_IN) 13 March 2019
1. Congress will pass the Women's Reservation Bill reserving 33% of seats for women in Parliament and State Legislatures in the first session of the 17th Lok Sabha.
* ಕಾಂಗ್ರೆಸ್ ನಿಂದ ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಲಾಗುವುದು. ಸಂಸತ್ ಹಾಗೂ ರಾಜ್ಯ ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇಕಡಾ ಮೂವತ್ಮೂರರಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆ ಮಂಡಿಸಲಾಗುತ್ತದೆ.
* ಕೇಂದ್ರ ಸರಕಾರಿ, ಕೇಂದ್ರ ಸರಕಾರಿ ಸಂಸ್ಥೆಗಳು ಹಾಗೂ ಕೇಂದ್ರದ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಶೇಕಡಾ ಮೂವತ್ಮೂರರಷ್ಟು ಹುದ್ದೆ/ಉದ್ಯೋಗವನ್ನು ಮಹಿಳೆಯರಿಗೆ ಅಂತಲೇ ಕಾಂಗ್ರೆಸ್ ಮೀಸಲಿಡಲಿದೆ.

* 2023-2024ರ ಹೊತ್ತಿಗೆ ಜಿಡಿಪಿಯ ಶೇಕಡಾ 6ರಷ್ಟನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುವಷ್ಟು ಹೆಚ್ಚಿಸುವ ಗುರಿ ಇದ್ದು, ಮೊದಲ ಬಜೆಟ್ ನಿಂದಲೇ ವಾರ್ಷಿಕ ಗುರಿಯನ್ನು ಹಾಕಿಕೊಳ್ಳಲಾಗುವುದು.
ಏಪ್ರಿಲ್ ಹನ್ನೊಂದರಿಂದ ಲೋಕಸಭಾ ಚುನಾವಣೆ ಆರಂಭ ಆಗಲಿದ್ದು, ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮೇ ಇಪ್ಪತ್ಮೂರರಂದು ಫಲಿತಾಂಶ ಪ್ರಕಟ ಅಗಲಿದೆ.












Click it and Unblock the Notifications