IAF: ಭಾರತೀಯ ವಾಯುಸೇನೆ ವಾಹನ ಮೇಲೆ ಉಗ್ರರ ಗುಂಡಿನ ದಾಳಿ: ಗಾಯಗೊಂಡ ಯೋಧರು
ನವದೆಹಲಿ, ಮೇ 04: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶನಿವಾರ ವಾಯು ಸೇನಾ ವಾಹನಗಳ ಮೇಲೆ ಭಯೋತ್ಪಾಕರಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಐವರು ಸೇನಾ ಯೋಧರ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದಲ್ಲಿ ಇಂಡಿಯನ್ ಏರ್ ಪೋರ್ಸ್ ಯೋಧರು ಒಟ್ಟು ಎರಡು ವಾಹನಗಳು ಬರುತ್ತಿದ್ದವು. ಈ ವೇಳೆ ಒಂದು ವಾಹನದ ಮೇಲೆ ಏಕಾಎಕಿ ಗುಂಡಿ ಮಳೆಗರೆದ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಗಾಯಗೊಂಡಿದ್ದಾರೆ.

ದಾಳಿಗೆ ಸಿಲುಕಿದ ಐವರನ್ನು ಸ್ಥಳೀಯ ಉಧಮ್‌ಪುರದ ಕಮಾಂಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ
ಸದ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಬೀಡು ಬಿಟ್ಟಿದ್ದು, ಸುರನ್‌ಕೋಟೆ ಪ್ರದೇಶದಲ್ಲಿ ಇನ್ನಿತರ ಯೋಧರಿಂದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮುಂದುವರಿದೆ. ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಭದ್ರತಾ ಪಡೆಗಳ ಮೂಲಗಳು ಮಾಹಿತಿ ನೀಡಿದೆ.

ಇನ್ನೂ ಈ ಕುರಿತು ಇಂಡಿಯ್ನ ಏರ್‌ಫೋರ್ಸ್ (IAF) ದಾಳಿಗೆ ಒಳಗಾದ ಬೆಂಗಾವಲು ಪಡೆಗೆ ಭದ್ರತೆ ನೀಡಲಾಗಿದೆ. ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ಉಗ್ರಗಾಮಿಗಳು ಪೂಂಚ್ ಜಿಲ್ಲೆಯ ಶಾಸಿತಾರ್ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳೀಯ ಸೇನಾ ಘಟಕಗಳಿಂದ ಪ್ರಸ್ತುತ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಬೆಂಗಾವಲು ಪಡೆಗೆ ಭದ್ರತೆ ನಿಯೋಜಿಸಲಾಗಿದೆ, ತನಿಖೆ ಕೈಗೊಳ್ಳಲಾಗಿದೆ ಎಂದು ಐಎಎಫ್ ಅಧಿಕಾರಿಗಳು ಮಾಹಿತಿ ನೀಡಿದರು.
ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹಿಂದಿನ ಭಾರತೀಯ ಸೇನೆಯ ಮೇಲೆ ಇದೇ ಸ್ಥಳದಲ್ಲಿ ಸರಣಿ ಭಯೋತ್ಪಾದಕ ದಾಳಿ ಆಗಿತ್ತು. ಈ ವರ್ಷ ಸಶಸ್ತ್ರ ಪಡೆಗಳ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ದಾಳಿ ನಂತರ ಬೆಂಗಾವಲಿನ ವಾಹನದ ಮೇಲೆ ಒಂದು ಡಜನ್‌ಗೂ ಹೆಚ್ಚು ಗುಂಡಿನ ದಾಳಿಯ ರಂಧ್ರಗಳು (ಫೈರಿಂಗ್ ಮಾರ್ಕ್)ಕಂಡು ಬಂದಿವೆ.












Click it and Unblock the Notifications