ಬಾಲಿ ಪ್ರವಾಸದಲ್ಲಿ ಹೈದರಾಬಾದ್‌ ಯೂಟ್ಯೂಬರ್ ಮನ ಕದ್ದ ಜರ್ಮನ್ ಬೆಡಗಿ : ಜೋಡಿ ವಿಡಿಯೋ ಕೊಂಡಾಡಿದ ನೆಟ್ಟಿಗರು

ಭಾರತೀಯ ಯೂಟ್ಯೂಬರ್ ಅಭಿ ಹನಿ ಎಂದೇ ಜನಪ್ರಿಯರಾಗಿರುವ ಅಭಿನವ್ ರೆಡ್ಡಿ ಮತ್ತು ಜರ್ಮನ್ ಪ್ರವಾಸಿ ಸಫೀರಾ ನಡುವಿನ ಪ್ರೇಮ ಕತೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಬಾಲಿ ಪ್ರವಾಸದ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಮುಂದುವರೆದು ಪ್ರೀತಿಯಾಗಿ ಇದೀಗ ಮದುವೆಯ ಹೊಸ್ತಿಲಲಿ ತಂದು ನಿಲ್ಲಿಸಿದೆ.

ಈ ಜೋಡಿ ಮೊದಲು ಭೇಟಿಯಾಗಿದ್ದು ಇಂಡೋನೇಷ್ಯಾದ ದ್ವೀಪದಲ್ಲಿ. ಪ್ರಯಾಣ, ಸಾಹಸ ಮತ್ತು ಮಾತುಕತೆಯಿಂದ ಆರಂಭವಾದ ಬಂಧ ಪ್ರೀತಿಗೆ ತಿರುಗಿದೆ. ಸ್ನೇಹದಿಂದ ಶುರುವಾದ ಇವರಿಬ್ಬರ ಸಂಬಂಧ ಇದೀಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಈ ಮಧ್ಯೆ, ಸಫೀರಾ ಅಭಿನವ್‌ ರೆಡ್ಡಿಯನ್ನು ಜರ್ಮನಿಯಲ್ಲಿರುವ ತನ್ನ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಇವರಿಬ್ಬರು ಜೊತೆಯಾಗಿ ಮಾಡಿರುವ ಪ್ರಯಾಣದ ವಿಡಿಯೋಗಳು ವೈರಲ್‌ ಆಗುತ್ತಿವೆ.

Hyderabad youtuber Abhinav reddy and greman lady safira love story goes viral on social media

ಜೀವಮಾನದ ಬದ್ಧತೆಯಾಗಿ ಬದಲಾದ ಸ್ನೇಹ

ಬಾಲಿಯಿಂದ ಮನೆಗೆ ವಾಪಾಸಾದ ಮೇಲೂ ಅಭಿನವ್ ಮತ್ತು ಸಫೀರಾ ಸಂಪರ್ಕದಲ್ಲಿದ್ದರು. ಈ ಮೂಲಕ ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಕ್ರಮೇಣ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿರುವ ವಿಡಿಯೋದ ಪ್ರಕಾರ ಇವರಿಬ್ಬರ ನಿಶ್ಚಿತಾರ್ಥ ಆಗಿದೆ ಎಂದು ಹೇಳಲಾಗ್ತಿದೆ.

ಪ್ರಯಾಣದ ಸಮಯದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಕೆಲವು ವ್ಯಕ್ತಿಗಳು ಜೀವನದಲ್ಲಿ ಎಷ್ಟು ಮುಖ್ಯವಾಗುತ್ತಾರೆ, ಯಾವ ರೀತಿಯಲ್ಲಿ ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತಾರೆ ಎನ್ನುವುದಕ್ಕೆ ಇವರಿಬ್ಬರ ಸಂಬಂಧವೇ ಸಾಕ್ಷಿ.

ಸಫೀರಾ ಅವರ ಊರಿನಲ್ಲಿ ಕಳೆದ ಸಮಯವನ್ನು ಅವಿಸ್ಮರಣೀಯ ಎಂದು ಅಭಿನವ್‌ ಹೇಳಿದ್ದಾರೆ. ಬಾಲಿಯಲ್ಲಿ ಸಫೀರಾ ಅವರನ್ನು ಅನಿರೀಕ್ಷಿತವಾಗಿ ಭೇಟಿಯಾದದ್ದು ಅವರ ಜೀವನದ ಅತ್ಯಂತ ಸ್ಮರಣೀಯ ಪ್ರವಾಸಗಳಲ್ಲಿ ಒಂದು ಎಂದಿದ್ದಾರೆ. ಸಫೀರಾ ತನ್ನೂರಿನ ಕಾಡು, ಸ್ವಚ್ಛವಾದ ಸರೋವರಗಳು ಮತ್ತು ರಮಣೀಯ ದೃಶ್ಯಗಳನ್ನು ತೋರಿಸುತ್ತಾ ತನ್ನ ಬಾಲ್ಯದ ನೆನಪುಗಳನ್ನು ಅಭಿನವ್‌ ಜೊತೆ ಹಂಚಿಕೊಂಡಿದ್ದಾರೆ. ಈ ಜೋಡಿ ಪ್ರಕೃತಿ ಮಡಿಲಲ್ಲಿ ವಾಕ್‌ ಮಾಡುವುದು, ಹಳ್ಳಿಯ ಸರೋವರಗಳಲ್ಲಿ ಈಜುವುದು, ದೋಣಿಗಳನ್ನು ಓಡಿಸುವುದು ಮತ್ತು ಸಫೀರಾಳ ಹಳೆಯ ಶಾಲೆ ಮತ್ತು ಬಾಲ್ಯದ ನೆಚ್ಚಿನ ತಾಣಗಳಿಗೆ ಭೇಟಿ ಹೀಗೆ ಸುಂದರ ಕ್ಷಣಗಳನ್ನು ಜೊತೆಯಾಗಿ ಕಳೆದಿದ್ದಾರೆ.

ಸಫೀರಾ ಮನೆಯ ಟೂರ್‌

ಇನ್ನು ಸಫೀರಾ ಕುಟುಂಬದ ಮನೆಯಂತೂ ಅದ್ಬುತವಾಗಿದೆ. ವಿಶಾಲವಾದ ಮರದ ಮನೆ ಇದಾಗಿದೆ. ಇದನ್ನು ಅವರ ತಂದೆ ನಿರ್ಮಿಸಿರುವುದಂತೆ. ಸಫೀರಾ ರೆಡ್ಡಿಗೆ ತನ್ನ ಬಾಲ್ಯದ ಮಲಗುವ ಕೋಣೆ, ಕುಟುಂಬದ ಉದ್ಯಾನ, ಮರದ ಮನೆ, ನೆಲಮಾಳಿಗೆ ಮತ್ತು ಮನೆಯಲ್ಲಿ ಬಳಸುವ ಸಾಂಪ್ರದಾಯಿಕ ತಾಪನ ವ್ಯವಸ್ಥೆಯನ್ನು ತೋರಿಸಿದ್ದಾರೆ. ಮನೆಯ ಹಳ್ಳಿಗಾಡಿನ ಒಳಾಂಗಣಗಳು, ಮರದ ವಾಸ್ತುಶಿಲ್ಪ ಮತ್ತು ಹಳೆಯ ಶೈಲಿಯ ಒಲೆ ರೆಡ್ಡಿಯನ್ನು ಆಕರ್ಷಿಸಿದೆ.

ಇವರಿಬ್ಬರು ಜೊತೆಯಾಗಿ ಮಾಡಿದ ಜರ್ಮನಿ ಪ್ರವಾಸ ಆ ದೇಶದ ಬಗ್ಗೆ ತಿಳಿದುಕೊಳ್ಳುವುದಷ್ಟಕ್ಕೇ ಸೀಮಿತವಾಗಿ ಇರಲಿಲ್ಲ. ಭೇಟಿಯ ಉದ್ದಕ್ಕೂ, ಈ ಜೋಡಿ ಬಾಲ್ಯದ ನೆನಪುಗಳು, ಶಿಕ್ಷಣ, ಸಂಬಂಧಗಳು, ಆತ್ಮವಿಶ್ವಾಸ, ಪೋಷಕರ ಬಗ್ಗೆ ಮತ್ತು ಭಾರತ ಮತ್ತು ಜರ್ಮನಿ ನಡುವಿನ ಸಾಂಸ್ಕೃತಿಕ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದಾರೆ.

ಬಾಲಿಯಲ್ಲಿ ಅಪರಿಚಿತರೊಂದಿಗಿನ ಮಾತುಕತೆ ತನ್ನ ಜೀವನದ ಹಾದಿಯನ್ನು ಹೇಗೆ ಸಂಪೂರ್ಣವಾಗಿ ಬದಲಾಯಿಸಿತು ಎಂಬುದರ ಬಗ್ಗೆಯೂ ವಿವರಿಸಿದ್ದಾರೆ. ಪ್ರವಾಸ ಮುಗಿಯುವ ಮೊದಲು, ಭವಿಷ್ಯದಲ್ಲಿ ಭಾರತಕ್ಕೆ ಭೇಟಿ ನೀಡಲು ಸಫೀರಾ ಅವರನ್ನು ರೆಡ್ಡಿ ಆಹ್ವಾನಿಸಿದ್ದಾರೆ.

ಇನ್ನು ಈ ಜರ್ಮನ್‌ ಹುಡುಗಿಯ ಹಳ್ಳಿಗೆ ಭೇಟಿ ನೀಡಿರುವುದು ತನ್ನ ಜೀವನದ ಅತ್ಯುತ್ತಮ ನೆನಪು ಎಂದು ಅಭಿನವ್‌ ಹೇಳಿದ್ದಾರೆ. ಜರ್ಮನ್‌ ಭೇಟಿಯ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇವರಿಬ್ಬರ ಕೆಮಿಸ್ಟ್ರಿಯನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+