Get Updates
Get notified of breaking news, exclusive insights, and must-see stories!

House Rent: ಬೆಂಗಳೂರಲ್ಲಿ ಬದುಕಲು ತಿಂಗಳಿಗೆ ₹60,000 ಸಾಕೆ? ದೇಶದ ಬೇರೆ ನಗರಗಳಲ್ಲಿ ಎಷ್ಟು ಬೇಕು

ನವದೆಹಲಿ: ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ಭಾರತದ ಪ್ರಮುಖ ಮಹಾನಗರಗಳಿಗೆ ಬದುಕು ಕಟ್ಟಿಕೊಳ್ಳಲು ವಲಸೆ ಬರುವವರ ಸಂಖ್ಯೆ ಹೆಚ್ಚು. ಅಲ್ಲಿ ಒಂದು ಸಣ್ಣ ಕುಟುಂಬ ಕನಿಷ್ಠ ಮೂಲ ಸೌಕರ್ಯಗಳಾದ ಮನೆ ಬಾಡಿಗೆ, ನೀರು, ಉದ್ಯೋಗ, ಸಾರಿಗೆ, ವಾಸಸ್ಥಳ, ಆಹಾರ ಮತ್ತಿತರ ಅಗತ್ಯತೆಗಳು ಒಳಗೊಂಡಂತೆ ತಿಂಗಳಿಗೆ ಎಷ್ಟು ಖರ್ಚು ಮಾಡಬೇಕಾಗುತ್ತದೆ?. ದೇಶದ ಇತರ ನಗರಗಳಿಗೆ ಹೋಲಿಸಿದರೆ ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ ಜೀವಿಸಲು ಎಷ್ಟು ಹಣ ಬೇಕು?. ಈ ನಗರ ಎಷ್ಟನೇ ಸ್ಥಾನದಲ್ಲಿದೆ? ಎಂಬ ಮಾಹಿತಿ ಇಲ್ಲಿದೆ.

ದೇಶದ ಮಹಾನಗರಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಸಣ್ಣ ಕುಟುಂಬವು (1BHK ಮನೆ ಸಹಿತ) ವಾಸಿಸಲು ಹತ್ತಾರು ಸಾವಿರ ರೂಪಾಯಿ ವ್ಯಯಿಸಬೇಕಿದೆ. ದುಡಿಮೆ, ಗಳಿಕೆ, ಲಾಭದಲ್ಲಿ ವ್ಯತ್ಯಾಸ ಕಂಡು ಬರಬಹುದು. ಆದರೆ ನಗರಗಳಲ್ಲಿ ಖರ್ಚು ಬಹುತೇಕ ಒಂದೇ ಆಗಿರುತ್ತದೆ. ಅಷ್ಟರ ಮಟ್ಟಿಗೆ ನಗರ ಜೀವನ ದುಬಾರಿ ಆಗಿದೆ. ದೇಶದ ಒಂದಷ್ಟು ನಗರಗಳಲ್ಲಿ ಬುದುಕಲು ಇಂತಿಷ್ಟು ಹಣ ಬೇಕಾಗುತ್ತದೆ ಎಂಬ ಪಟ್ಟಿಯನ್ನುಇಂಡಿಯನ್ ಟೆಕ್ ಗೈಡ್ (@IndianTechGuide) ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಯಾರೆಲ್ಲ ಈಗಾಗಲೇ ಬೆಂಗಳೂರಿನಂಥಹ ನಗರಗಳಲ್ಲಿ ವಾಸಿಸುತ್ತಿದ್ದೀರಿ? ಬೇರೆಡೆ ವಲಸೆ ಹೋಗಲು ಯೋಚಿಸಿದ್ದೀರಿ ಅವರಿಗೆ ಈ ಲೇಖನ ಉಪಯುಕ್ತವಾಗಲಿದೆ.

House Rent amp amp Living Cost How Much Money Do You Need to Live in Major Indian Cities

ಮುಂಬೈನಲ್ಲಿ ಜೀವಿಸಲು ₹75,000 ರೂ.ಬೇಕು!

ದೇಶದ ಅತ್ಯಂತ ದುಬಾರಿ ನಗರ ಎಂದೆ ಖ್ಯಾತವಾಗಿರುವ ಭಾರತದ ವಾಣಿಜ್ಯ ನಗರಿ ಮುಂಬೈ ನಲ್ಲಿ 1ಕೊಠಡಿ ಇರುವ ಬಾಡಿಗೆ ಮನಗೆ (1BHK) ಮನೆಯ ಸರಾಸರಿ ಬಾಡಿಗೆ ಸುಮಾರು 45,000 ರೂಪಾಯಿ ಇದೆ. ಅದರನ್ನು ಹೊರತು ಪಡಿಸಿದರೆ ನೀರು, ವಿದ್ಯುತ್, ಆಹಾರ, ಸಾರಿಗೆ ಮತ್ತಿತರ ದೈನಂದಿನ ಖರ್ಚುಗಳಿಗೆ ಪ್ರತ್ಯೇಕವಾಗಿ ಸುಮಾರು 30,000 ರೂಪಾಯಿ ಬೇಕಾಗುತ್ತದೆ. ಈ ನಗರದಲ್ಲಿ ಒಂದು ತಿಂಗಳಿಗೆ ಜೀವಿಸಲು ಸುಮಾರು ₹75,000 ರೂಪಾಯಿ ವ್ಯಯಿಸಬೇಕಿದೆ. ಇದೆಲ್ಲವು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸವಾಲಾಗಿದೆ. ಅದೆಷ್ಟೊ ಜನರು ನಿಭಾಯಿಸಲಾಗದೇ ಆರ್ಥಿಕ ಒತ್ತಡ ಎದುರಿಸುತ್ತಿದ್ದಾರೆ.

ಬೆಂಗಳೂರಿಗೆ ಎರಡನೇ ಸ್ಥಾನ

ಐಟಿ ನಗರಿ, ರಾಜ್ಯ ರಾಜಧಾನಿ ಬೆಂಗಳೂರಲ್ಲಿ ವ್ಯವಸ್ಥಿತ 1BHK ಮನೆಯ ಬಾಡಿಗೆಯಲ್ಲಿರಲು ಮಾಸಿಕ ಸರಾಸರಿ 32,000 ರೂಪಾಯಿ ಪಾವತಿಸಬೇಕು. ಅದರೊಂದಿಗೆ ಇತರ ವೆಚ್ಚಗಳಿಗೆ (ಊಟ, ನೀರು, ವಿದ್ಯುತ್, ಸಾರಿಗೆ, ಆರೋಗ್ಯ, ಬಟ್ಟೆ, ಇತರೆ) ಅಂದಾಜು 28,000 ರೂಪಾಯಿ ಬೇಕಾಗುತ್ತದೆ. ಈ ಮೂಲಕ ಒಂದು ಸಣ್ಣ ಕುಟುಂಬ ಅಗತ್ಯ ಬೇಡಿಕೆಗಳ ಈಡೇರಿಕೆ ಜೊತೆಗೆ ಬದುಕಿದೆರೆ ತಿಂಗಳಿಗೆ ಒಟ್ಟು 60,000 ರೂಪಾಯಿ ವ್ಯಯಿಸಬೇಕಿದೆ. ಬೆಂಗಳುರು ಮುಂಬೈಗಿಂತ ಕಡಿಮೆ ಇದ್ದರೂ ಸಹಿತ ವರ್ಷದಿಂದ ವರ್ಷಕ್ಕೆ ಇಲ್ಲಿನ ಭೂಮಿ, ಮನೆ ಬಾಡಿಗೆ, ಆಹಾರ, ಜೀವನ ಶೈಲಿನಯಲ್ಲಿ ಮಹತ್ವದ ಬೆಳವಣಿಗೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಮೆಟ್ರೋ ವಿಸ್ತರಣೆ ಆಗುತ್ತಿದೆ. ಈ ಕಾರಣಕ್ಕೂ ಸಹ ಭೂಮಿ ಆಸ್ತಿ, ಮನೆ ಬಾಡಿಗೆ ಹೆಚ್ಚಾಗುತ್ತಿದೆ. ವೈಟ್‌ಫಿಲ್ಡ್ ನಲ್ಲಿ 1000 ಚದರ ಅಡಿ ವಿಸ್ತೀರ್ಣದ 2ಬಿಎಚ್‌ಕೆ ಫ್ಲಾಟ್ ಬಾಡಿಗೆ 2023ರಲ್ಲಿ ಶೇಕಡಾ 30ರಷ್ಟು ಏರಿಕೆ ಆಗಿದೆ. ಇದೇ ವೇಳೇ ಸರ್ಜಾರಪುರದಲ್ಲಿ ಶೇ.27ರಷ್ಟು ಹೆಚ್ಚಾಗಿತ್ತು. ಐಟಿ ಕಾರಿಡಾರ್ ಮೆಟ್ರೋ ಬಳಿಕ ಮನೆ ಬಾಡಿಗೆ ಹೊರತಾಗಿ ಇತರ ಪ್ರದೇಶಗಳಲ್ಲೂ ಮನೆ ಬಾಡಿಗೆ ದರ ಕನಿಷ್ಟ ಮಟ್ಟದಲ್ಲಿ ಹೆಚ್ಚಾಗಿವೆ. 12,000 ರೂ. 1ಬಿಎಚ್‌ಕೆ ಮನೆಗಳು ಇದೀಗ 15,000-18,000 ರೂ.ಗೆ ಹೆಚ್ಚಾಗಿದೆ.

ದೆಹಲಿಯಲ್ಲಿ ತಿಂಗಳಿಗೆ ಎಷ್ಟು ಬೇಕು?

ಇನ್ನೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಗರದಲ್ಲಿ 1ಬಿಎಚ್‌ಕೆ ಬಾಡಿಗೆ ಅಂದಾಜು 30,000 ರೂ.ಇದೆ. ಇಲ್ಲಿನ ಇತರ ಅಗತ್ಯತೆಗಳಿಗೆ ಬೇಕಾಗುವ ಸುಮಾರು 27,000 ರೂ. ಹಿಡಿದು ಒಟ್ಟು ಇಲ್ಲಿ 57,000 ರೂಪಾಯಿ ಖರ್ಚು ಬರುತ್ತದೆ. ಇಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿಸಿದ್ದರು ಸಹಿತ ಅದಕ್ಕೆ ತಕ್ಕಂತೆ ಮಾಸಿಕ ಜೀವಿಸುವ ಖರ್ಚು ಹೆಚ್ಚಿದೆ. ಮುಖ್ಯವಾಗಿ ಇಲ್ಲಿದೆ ಪದೇ ಪದೆ ಹಾಳಾಗವು ವಾಯು ಗುಣಮಟ್ಟ, ತೀವ್ರ ಚಳಿ ಹಾಗೂ ಶಾಖದ ಅಲೆಗೆ ಜನರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹೀಗಾಗಿ ಆರೋಗ್ಯ ವಿಮೆ, ಆಸ್ಪತ್ರೆ ಖರ್ಚಿಗೆಂದು ಒಂದಷ್ಟು ಹಣ ವ್ಯಯಿಸಬೇಕಾದ ಅನಿವಾರ್ಯತೆಯು ಇದೆ.

ಬೆಂಗಳೂರು ನಂತರ ಐಟಿ ಕ್ಷೇತ್ರದಲ್ಲಿ ಮುಂದಿರುವ ಶಿಕ್ಷಣ ಕೇಂದ್ರವೂ ಆದ ಪುಣೆಯಲ್ಲಿ 1ಬಿಎಚ್‌ಕೆ ಮನೆಯಲ್ಲಿರಲು ಒಂದು ಸಣ್ಣ ಕುಟುಂಬ ಮಾಸಿಕ ಅಂದಾಜು 26,000 ರೂ.ಬಾಡಿಗೆ ಕಟ್ಟಬೇಕಾಗುತ್ತದೆ. ಇತರ ಖರ್ಚು (₹25,000) ಸೇರಿ ತಿಂಗಳಿಗೆ ಒಟ್ಟು ಸುಮಾರು 51,000 ರೂ. ಬೇಕಾಗುತ್ತದೆ. ಇತರ ಮೆಟ್ರೋ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಪುಣೆಯಲ್ಲಿ ಬದುಕುವುದು ಕೊಂಚ ಕಡಿಮೆ ಹಣ ಬೇಕಾಗುತ್ತದೆ.

ಹೈದರಾಬಾದ್ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಮಧ್ಯಮ ವರ್ಗದ ಕುಟುಂಬ ಜೀವಿಸಲು ಮೇಲಿನ ನಗರಗಳಿಗಿಂತ ಕಡಿಮೆ ಹಣ ಬೇಕಾಗುತ್ತದೆ. ಹೈದರಾಬಾದ್‌ನಲ್ಲಿ ಮನೆ ಬಾಡಿಗೆಗೆ 23,000 ರೂಪಾಯಿ ಹಾಗೂ ಇತರ ವೆಚ್ಚ 24,000 ರೂ. ಸೇರಿ ತಿಂಗಳಿಗೆ 47,000 ತೆಗೆದಿಡಬೇಕಾಗುತ್ತದೆ. ಇದರ ಹೊರತಾಗಿ ನೀವು ಗಳಿಸುವ ಆದಾಯದಲ್ಲಿ ಮಿಕ್ಕರೆ ಹಣ ಉಳಿತಾಯ ಮಾಡಬಹುದು. ಭವಿಷ್ಯದ ದೃಷ್ಟಿಯಿಂದ ಹೂಡಿಕೆ, ವಿವಾಹ, ಬೃಹತ್ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಕೊಲ್ಕತ್ತಾದಲ್ಲೂ ಮನಗೆ ಬಾಡಿಯಲ್ಲಿರಲು ನೀವು ತಿಂಗಳಿಗೆ 18,000 ರೂಪಾಯಿ ಪಾವತಿಸಬೇಕು. ಅದರೊಂದಿಗೆ 22,000 ರೂಪಾಯಿ ಇತರ ಜೀವನ ವೆಚ್ಚ ಸೇರಿ ಒಟ್ಟು ಸರಾಸರಿ ಮಾಸಿಕ 47,000 ರೂಪಾಯಿ ಖರ್ಚಾಗುತ್ತದೆ. ಇದೇ ಕೊಲ್ಕತ್ತಾದಲ್ಲಿ ತಿಂಗಳಿಗೆ 47,000 ರೂ.ಗಿಂತಲೂ ಕಡಿಮೆ ಖರ್ಚು ಬರುವ ಕೆಲವು ಪ್ರದೇಶಗಳು ಇವೆ. ಅಲ್ಲಿ ಅಂದಾಜು ತಿಂಗಳಿಗೆ 47,000 ರೂ. ಇದ್ದರೆ ಅರಾಮಾಗಿ ಜೀವಿಸಬಹುದಾಗಿದೆ.

ಈ ಮೇಲಿನ ಅಂಕಿ ಸಂಖ್ಯೆಗಳು ನೋಡಿದರೆ ಇದು ಮಧ್ಯಮ ವರ್ಗದವರನ್ನು ನೋಡಿಕೊಂಡು ಮಾಡಿದ ಲೆಕ್ಕಾಚಾರವಾಗಿದೆ. ಕಡು ಬಡವರು, ಸ್ಲಂಗಳಲ್ಲಿ ಬುದಕುವವರು ಈ ನಗರಗಳಲ್ಲಿದ್ದಾರೆ. ಉದ್ಯಮಿಗಳು, ರಾಜಕಾರಣಿಗಳು ಹಾಗೂ ಇತರ ವ್ಯಕ್ತಿಗಳು/ಕುಟುಂಬಗಳು ಜೀವಿಸುತ್ತಿದ್ದು, ಅವರ ಮಾಸಿಕ ಖರ್ಚಿನ ಲೆಕ್ಕ ಹಾಕಿದರೆ ಗಗನಕ್ಕೇರುತ್ತದೆ. ಅವರವರ ಉದ್ಯೋಗ ಆಯ್ಕೆ, ಸಂಬಳ, ಕುಟುಂಬದ ಅಗತ್ಯಗಳು ಅವರವರ ಮಾಸಿಕ ಖರ್ಚನ್ನು ನಿರ್ಧರಿಸುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+