Holiday: ಜೂನ್ 6, 7ರಂದು ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ
Holiday: ಈ ವರ್ಷದ ಆರಂಭದಿಂದಲೂ ಶಾಲಾ-ಕಾಲೇಜುಗಳಿಗೆ ಅಷ್ಟೇ ಅಲ್ಲದೆ ಬ್ಯಾಂಕ್‌ಗಳಿಗೆ ಹಲವೆಡೆ ಸಾಲು ರಜೆಗಳೇ ಸಿಕ್ಕಿವೆ. ಹಾಗೆಯೇ ಇದೀಗ ಇದೇ ಜೂನ್ 6 & 7ರಂದು ಸಹ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ವರ್ಷದ ಆರಂಭದಿಂದ ಇಲ್ಲಿವರೆಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೊತೆಗೆ ಬೇಸಿಗೆ ರಜೆಯನ್ನು ಕೂಡ ನೀಡಲಾಗಿತ್ತು. ಆದರೆ, ಇದೀಗ ಈ ರಜೆಯೂ ಮುಕ್ತಯವಾಗಿ ರಾಜ್ಯದಲ್ಲಿ ಶಾಲೆಗಳು ಮತ್ತೆ ಪುನರಾರಂಭ ಆಗಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ಇದೀಗ ಬೇಸಿಗೆ ರಜೆಗಳು ಆರಂಭವಾಗಿವೆ.

ದೇಶದ ಹಲವೆಡೆ ಶಾಲಾ-ಕಾಲೇಜುಗಳು ಸೇರಿದಂತೆ ಬ್ಯಾಂಕ್‌ಗಳಿಗೆ ವರ್ಷದ ಆರಂಭದಿಂದ ಇಲ್ಲಿಯವರೆಗೂ ಸ್ಥಳೀಯ ಹಬ್ಬಗಳು ಸೇರಿದಂತೆ ಹಲವು ಕಾರಣಗಳಿಂದ ಸಾಲು ರಜೆಗಳನ್ನೇ ಘೋಷಿಸಲಾಗಿದ್ದು, ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಬಡಿಸಿದಂತಾಗಿದೆ. ಹಾಗೆಯೇ ಇದೀಗ ಜೂನ್ 6 ಹಾಗೂ 7ರಂದು ಬಕ್ರಿದ್ ಹಬ್ಬ ಹಿನ್ನೆಲೆ ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಪ್ರತಿ ತಿಂಗಳಿನಂತೆ ಜೂನ್ ತಿಂಗಳಿನಲ್ಲಿ ಹಬ್ಬಗಳ ಹಿನ್ನೆಲೆ ರಜೆಗಳು ಬರಲಿವೆ. ಬಕ್ರಿದ್ ಹಬ್ಬ ಹಿನ್ನೆಲೆ ಜೂನ್ 6ರಂದು ಕೆಲವೆಡೆ ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಿದರೆ, ಜೂನ್ 7ರಂದು ದೇಶದ ಬಹುತೇಕ ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಈ ದಿನದಂದು ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಆಂಧ್ರಪ್ರದೇಶ, ತೆಲಂಗಾಣ, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ನವದೆಹಲಿ, ಕೋಹಿನ್‌ಪುರ್, ಪಣಜಿ, ಪಾಟ್ನಾ, ರಾಯಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* ಜೂನ್ 6, 2025 ರಂದು ಬಕ್ರೀದ್ ಇರುವುದರಿಂದ ಈ ದಿನ ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಬಕ್ರಿದ್ 7ರಂದು ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಸಹ ಅಗರ್ತಲಾ, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಆಂಧ್ರಪ್ರದೇಶ, ತೆಲಂಗಾಣ, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ನವದೆಹಲಿ, ಕೋಹಿನ್‌ಪುರ್, ಪಣಜಿ, ಪಾಟ್ನಾ, ರಾಯಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* ಜೂನ್ 11ರಂದು ಸಂತ ಗುರು ಕಬೀರ್ ಜಯಂತಿ ಹಿನ್ನೆಲೆ ಗ್ಯಾಂಗ್ಟಾಕ್ ಮತ್ತು ಶಿಮ್ಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಜೂನ್ 27 ರಂದು ರಥಯಾತ್ರೆ /ಕಾಂಗ್ ಹಿನ್ನೆಲೆ ಭುವನೇಶ್ವರ ಮತ್ತು ಇಂಫಾಲ್‌ನಲ್ಲಿ ಬ್ಯಾಕ್‌ಗಳಿಗೆ ರಜೆ ಇರುತ್ತದೆ.
* ಜೂನ್ 30 ರಂದು ರೆಮ್ನಾ ಹಬ್ಬ ಹಿನ್ನೆಲೆ ಐಜ್ವಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಜೊತೆಗೆ ಜೂನ್ 14 ಮತ್ತು 28ರಂದು ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ.
* 5 ಭಾನುವಾರಗಳು ಬುರುವುದರಿಂದ ಈ 5 ಭಾನುವಾರಗಳಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಮೇಲೆ ತಿಳಿಸಲಾಗಿರುವ ರಜಾ ದಿನಗಳು ರಾಜ್ಯಗಳಿಗೆ ಅನುಗುಣವಾಗಿ ಇರುತ್ತವೆ.












Click it and Unblock the Notifications