ದ್ವೇಷದ ಭಾಷಣ: ದೆಹಲಿಯ ಹಿಂದೂ ಮುಹಾಪಂಚಾಯತ್‌ನ ಮುಖಂಡರಿಗೆ ತಡೆ
ನವದೆಹಲಿ, ಆಗಸ್ಟ್ 21: ಕಳೆದ ತಿಂಗಳು ಹರಿಯಾಣದ ನುಹ್‌ನಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ವಿರೋಧಿಸಿ ಭಾನುವಾರ ನವದೆಹಲಿಯಲ್ಲಿ ಹಿಂದೂ ಸೇನಾ ಮಹಾಪಂಚಾಯತ್ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 'ದ್ವೇಷ ಭಾಷಣ' ಮಾಡಿದ ಕಾರಣಕ್ಕೆ ಪೊಲೀಸರಿಂದ ಅನುಮತಿ ಪಡೆಯದೆ ನಡೆಯುತ್ತಿದ್ದ ಮಹಾಪಂಚಾಯತ್ ಅನ್ನು ಸ್ಥಗಿತಗೊಳಿಸಲಾಗಿದೆ.
ಹಿಂದೂ ಸೇನಾ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ವಿವಾದಿತ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ ಅವರು 40-50 ಬೆಂಬಲಿಗರೊಂದಿಗೆ ಭಾನುವಾರ ಬೆಳಿಗ್ಗೆ ಜಂತರ್ ಮಂತರ್ ತಲುಪಿದ್ದರು. ಯತಿ ನರಸಿಂಹಾನಂದರು ಸಭೆಯನ್ನು ಉದ್ದೇಶಿಸಿ ಮಾತಡಿದ್ದು, ಹಿಂದೂಗಳಿಗೆ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ. ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವಾಗ ನಿಮ್ಮ ಜನಸಂಖ್ಯೆಯು ಕಡಿಮೆಯಾಗುತ್ತಾ ಹೋದರೆ, ಈ ದೇಶದಲ್ಲಿ ಸಾವಿರ ವರ್ಷಗಳ ಹಿಂದೆ ಸಂಭವಿಸಿದ್ದು, ಮತ್ತೆ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಈ ವೇಳೆ ದೆಹಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಗುಂಪನ್ನು ಚದುರಿಸಿದ ಕಾರಣ ವಿವಾದಾತ್ಮಕ ಬೋಧಕನ ದ್ವೇಷದ ಭಾಷಣವನ್ನು ತ್ವರಿತವಾಗಿ ಮುಚ್ಚಲಾಯಿತು. ದೆಹಲಿ ಪೊಲೀಸರು ಪ್ರಸ್ತುತ ವೀಡಿಯೊದ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಯತಿ ನರಸಿಂಹಾನಂದ ಸರಸ್ವತಿ ಅವರಿಗೆ ಪೊಲೀಸ್ ಕೇಸುಗಳು ಹೊಸದೇನಲ್ಲ. ಅವರ ವಿವಾದಾತ್ಮಕ ಹೇಳಿಕೆಗಳು ಅವರನ್ನು ಈ ಹಿಂದೆಯೂ ಕಾನೂನು ಸಂಕಷ್ಟಕ್ಕೆ ಸಿಲುಕಿಸಿತ್ತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರಮ್ ಸಂಸದ್‌ನಲ್ಲಿ ನರಸಿಂಹಾನಂದರ ವಿರುದ್ಧ ಮತ್ತೊಂದು ದ್ವೇಷ ಭಾಷಣದ ಆರೋಪವೂ ಕೇಳಿ ಬಂದಿತ್ತು.












Click it and Unblock the Notifications