ಹಿಮಾಚಲ ಪ್ರದೇಶ ಚುನಾವಣಾ ಅಖಾಡದಲ್ಲಿ ಶತಕೋಟ್ಯಾಧಿಪತಿ ಸೌದಿ ಉದ್ಯಮಿ

By: ಚೆನ್ನಬಸವೇಶ್ವರ್
Subscribe to Oneindia Kannada

ಶಿಮ್ಲಾ, ನವೆಂಬರ್ 2: ಮತದಾನದ ದಿನಾಂಕ ಸಮೀಪಿಸುತ್ತಿರುವಂತೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಅಖಾಡ ರಂಗೇರುತ್ತಿದೆ. ಇಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಕೆಸರೆರಚಾಟದ ಮಧ್ಯೆಯೂ ಒಂದಷ್ಟು ವಿಚಾರಗಳು ಜನರ ಗಮನ ಸೆಳೆಯುತ್ತಿವೆ.

ಹಲವು ದಾಖಲೆಗಳನ್ನು ಸೃಷ್ಟಿಸಲಿದೆ ಹಿಮಾಚಲ ಪ್ರದೇಶ ಚುನಾವಣೆ

ವಿಧಾನಸಭೆ ಚುನಾವಣೆಗೆ ಶತಕೋಟ್ಯಾಧಿಪತಿ ಉದ್ಯಮಿಯೊಬ್ಬರು ಸ್ಪರ್ಧಿಸಿದ್ದು ಜನರ ಕುತೂಹಲದ ಕಣ್ಣಿಗೆ ಆಹಾರವಾಗಿದ್ದಾರೆ. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಪ್ರಕಾಶ್ ರಾಣಾ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

 Himachal Pradesh elections: Billionaire files nomination as independent candidate

ಪ್ರಕಾಶ್ ರಾಣಾ ಹುಟ್ಟು ಶ್ರೀಮಂತರಾಗಿದ್ದು ವಜ್ರದ ವ್ಯಾಪಾರ ಸೇರಿದಂತೆ ಹಲವು ಕಂಪನಿಗಳ ಒಡೆಯರಾಗಿದ್ದಾರೆ. ಚುನಾವಣೆಗೆ ಆರು ತಿಂಗಳು ಇರುವಾಗಲೇ ಭಾರತಕ್ಕೆ ಬಂದಿರುವ ರಾಣಾ ಮಂಡಿ ಜಿಲ್ಲಯ ಜೋಗಿಂದರ್ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವರ ಚುನಾವಣಾ ಗುರುತಾಗಿದ್ದು, ಸಿಲಿಂಡರ್ ತೋರಿಸಿ ಮತಯಾಚನೆಯಲ್ಲಿ ತೊಡಗಿಸಿದ್ದಾರೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ

ತಮ್ಮ ಚುನಾವಣಾ ಸ್ಪರ್ಧೆಯ ಸಂಬಂಧ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ರಾಣಾ, ಜನರ ಸೇವೆ ಮಾಡಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ನನ್ನ ಲಾಭಾಂಶದಲ್ಲಿ ಪ್ರತೀ ವರ್ಷ ಶೇ.10 ರಷ್ಟು ಹಣವನ್ನು ಜನರ ಕಲ್ಯಾಣಕ್ಕಾಗಿ ಉಪಯೋಗಿಸಿದ್ದೇನೆ. ಈಗ ಜನ ಸೇವೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.

ಇದೇ ನವೆಂಬರ್ 9ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ. ಶಿಮ್ಲಾ, ನವೆಂಬರ್ 2: ಮತದಾನದ ದಿನಾಂಕ ಸಮೀಪಿಸುತ್ತಿರುವಂತೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಅಖಾಡ ರಂಗೇರುತ್ತಿದೆ. ಇಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಕೆಸರೆರಚಾಟದ ಮಧ್ಯೆಯೂ ಒಂದಷ್ಟು ವಿಚಾರಗಳು ಜನರ ಗಮನ ಸೆಳೆಯುತ್ತಿವೆ.

 Himachal Pradesh elections: Billionaire files nomination as independent candidate

ವಿಧಾನಸಭೆ ಚುನಾವಣೆಗೆ ಶತಕೋಟ್ಯಾಧಿಪತಿ ಉದ್ಯಮಿಯೊಬ್ಬರು ಸ್ಪರ್ಧಿಸಿದ್ದು ಜನರ ಕುತೂಹಲದ ಕಣ್ಣಿಗೆ ಆಹಾರವಾಗಿದ್ದಾರೆ. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಪ್ರಕಾಶ್ ರಾಣಾ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಕಾಶ್ ರಾಣಾ ಹುಟ್ಟು ಶ್ರೀಮಂತರಾಗಿದ್ದು ವಜ್ರದ ವ್ಯಾಪಾರ ಸೇರಿದಂತೆ ಹಲವು ಕಂಪನಿಗಳ ಒಡೆಯರಾಗಿದ್ದಾರೆ. ಚುನಾವಣೆಗೆ ಆರು ತಿಂಗಳು ಇರುವಾಗಲೇ ಭಾರತಕ್ಕೆ ಬಂದಿರುವ ರಾಣಾ ಮಂಡಿ ಜಿಲ್ಲಯ ಜೋಗಿಂದರ್ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವರ ಚುನಾವಣಾ ಗುರುತಾಗಿದ್ದು, ಸಿಲಿಂಡರ್ ತೋರಿಸಿ ಮತಯಾಚನೆಯಲ್ಲಿ ತೊಡಗಿಸಿದ್ದಾರೆ.

ತಮ್ಮ ಚುನಾವಣಾ ಸ್ಪರ್ಧೆಯ ಸಂಬಂಧ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ರಾಣಾ, ಜನರ ಸೇವೆ ಮಾಡಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ನನ್ನ ಲಾಭಾಂಶದಲ್ಲಿ ಪ್ರತೀ ವರ್ಷ ಶೇ.10 ರಷ್ಟು ಹಣವನ್ನು ಜನರ ಕಲ್ಯಾಣಕ್ಕಾಗಿ ಉಪಯೋಗಿಸಿದ್ದೇನೆ. ಈಗ ಜನ ಸೇವೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.

ಇದೇ ನವೆಂಬರ್ 9ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A billionaire, who now lives in Saudi Arabia, has filed nomination as an independent candidate in the upcoming Himachal Pradesh assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ