Himachal Pradesh Election Result 2022: "ಮ್ಯಾಜಿಕ್" ನಂಬರ್‌ನಲ್ಲಿ ಕಾಂಗ್ರೆಸ್ ಮೋಡಿ
ಶಿಮ್ಲ, ಡಿಸೆಂಬರ್, 08: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಸ್ವಲ್ಪ ಹೊತ್ತಿನ ಹಿಂದೆ ಕಾಂಗ್ರೆಸ್ ಪಕ್ಷವು ಮ್ಯಾಜಿಕ್ ನಂಬರ್‌ನಲ್ಲಿ ಬಿಜೆಪಿ 33, ಕಾಂಗ್ರೆಸ್ 31 ಇತ್ತು. 12:10ರ ಸುಮಾರಿಗೆ ಬಿಜೆಪಿ 27ಸ್ಥಾನ, ಕಾಂಗ್ರೆಸ್ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಮ್ಯಾಜಿಕ್ ನಂಬರ್‌ನಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತಲೇ ಇದೆ.
ಮೊದಲ ಫಲಿತಾಂಶದಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಸೆರಾಜ್ ಕ್ಷೇತ್ರದಿಂದ 24,300 ಮತಗಳ ಅಂತರದಿಂದ ಗೆಲುವು ಸಾಧಿಸಿದದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಠಾಕೂರ್ 33,256 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚೇತ್ ರಾಮ್ 8,956 ಮತಗಳನ್ನು ಗಳಿಸಿದ್ದಾರೆ. ಇನ್ನು ಸುಂದರ್ ನಗರದಲ್ಲಿ ಬಿಜೆಪಿಯ ರಾಕೇಶ್ ಕುಮಾರ್ ಅವರು ಕಾಂಗ್ರೆಸ್‌ನ ಸೋಹನ್ ಲಾಲ್ ಅವರನ್ನು 8,125 ಮತಗಳಿಂದ ಸೋಲಿಸಿದ್ದಾರೆ. ಒಟ್ಟು ಶಿಮ್ಲಾ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಿಂದ ತಿಳಿದುಬಂದಿದೆ.
Recommended Video

ಮ್ಯಾಜಿಕ್ ನಂಬರ್‌ನಲ್ಲಿ ಕಾಂಗ್ರೆಸ್ ಮೋಡಿ
ಬಹುತೇಕ ಎಕ್ಸಿಟ್ ಪೋಲ್‌ಗಳು ಸ್ಪರ್ಧೆಯ ಭವಿಷ್ಯವನ್ನು ನುಡಿದಿದ್ದು, ಬಿಜೆಪಿಯು ಕಾಂಗ್ರೆಸ್‌ಗಿಂತ ಸ್ವಲ್ಪಮಟ್ಟಿನ ಹಿಡಿತ ಸಾಧಿಸಿದೆ ಎಂದಿದ್ದವು. ಆದರೆ ಇದೀಗ ಕ್ಷೇತ್ರಗಳ ಮ್ಯಾಜಿಕ್ ನಂಬರ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವ ಮೂಲಕ ಕುತೂಹಲ ಕೆರಳಿಸಿದೆ. ಬೆಳಗ್ಗೆ 8 ಗಂಟೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮತಗಳ ಅಂತರದಲ್ಲಿ ಹಾವು, ಏಣಿ ಆಟ ಮುಂದುವರೆದಿದೆ. ಆದರೂ ಕೂಡ ಇದರ ನಡುವೆಯೇ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದೆ. ಹೀಗೆ ಮತ ಎಣಿಕೆಯ ಹಾವು, ಏಣಿಯ ಆಟ ಕ್ಷಣ ಕ್ಷಣಕ್ಕೂ ರಣರೋಚಕ ತಿರುವನ್ನು ಪಡೆಯುತ್ತಿದೆ.












Click it and Unblock the Notifications