ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Himachal Pradesh Elections: ಈ ಎರಡು ಪ್ರದೇಶಗಳತ್ತ ಎಲ್ಲರ ಚಿತ್ತ

|
Google Oneindia Kannada News

ಶಿಮ್ಲಾ ನವೆಂಬರ್ 12: ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚನೆಗೆ ಕಾಂಗ್ರಾ ಹಾಗೂ ಮಂಡಿ ಎರಡು ನಿರ್ಣಾಯಕ ಪಾತ್ರ ವಹಿಸುವುದರಿಂದ ಇವೆರೆಡನ್ನು ರಾಜಕೀಯವಾಗಿ ಮಹತ್ವದ ಪ್ರದೇಶಗಳು ಎಂದು ಪರಿಗಣಿಸಲಾಗಿದೆ. ಕಾಂಗ್ರಾ ಜಿಲ್ಲೆ 15 ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿ ಜಯ ಸಾಧಿಸಿದರೆ ಬಹುತೇಕ ಚುನಾವಣೆ ಗೆದ್ದಂತೆ ಎಂದು ನಂಬಲಾಗುತ್ತದೆ. ಹೀಗಾಗಿ ಕಾಂಗ್ರಾ ಹಾಗೂ ಮಂಡಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾತ್ರವಲ್ಲದೆ ಈ ಎರಡು ಪ್ರಬಲ ಪಕ್ಷಗಳ ನಡುವೆ ಆಮ್ ಆದ್ಮಿ ಕೂಡ ಸೇರಿಕೊಂಡಿದೆ. ಪ್ರಧಾನಿ ಮೋದಿ ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದರೆ ಕಾಂಗ್ರೆಸ್‌ನ ಇನ್ನುಳಿದ ನಾಯಕರು ಹಿಮಾಚಲ ಚುನಾವಣೆಗೆ ಬಿರುಸಿನ ತಯಾರಿ ಮಾಡಿದ್ದಾರೆ. ಹಿಮಾಚಲ ಮಂದಿ ಯಾರಿಗೆ ಅಧಿಕಾರ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ 134 ಆಪ್ ಅಭ್ಯರ್ಥಿಗಳ ಪಟ್ಟಿ ಪ್ರಕಟದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ 134 ಆಪ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಆದರೆ ಬಂಡಾಯ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಎರಡನ್ನೂ ದೃತಿಗೆಡಿಸಿದೆ. ಎರಡೂ ಪಾಳಯಗಳ ಉನ್ನತ ನಾಯಕರ ಭಿನ್ನಾಭಿಪ್ರಾಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರಾವು 15 ಕ್ಷೇತ್ರಗಳನ್ನು ಒಳಗೊಂಡಿದೆ - ಧರ್ಮಶಾಲಾ, ಕಂಗ್ರಾ, ಶಹಪುರ್, ನಗ್ರೋಟಾ, ಪಾಲಂಪುರ್, ಬೈಜನಾಥ್, ಸುಲ್ಲಾ, ಜೈಸಿಂಗ್‌ಪುರ್, ಡೆಹ್ರಾ, ಜವಾಲಾಮುಖಿ, ಜಸ್ವಾನ್-ಕೋಟ್ಲಾ, ನೂರ್‌ಪುರ್, ಇಂದೋರಾ, ಜವಾಲಿ ಮತ್ತು ಫತೇಪುರ್.

Himachal Pradesh Assembly Elections: Kangra and Mandi are important Two key seats

ಕಾಂಗ್ರಾ

ಈ ಜಿಲ್ಲೆಯು 2017 ರಲ್ಲಿ ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿತ್ತು. ಇಲ್ಲಿನ 15 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿತ್ತು. ಇದರೊಂದಿಗೆ 68 ಸದಸ್ಯರ ಅಸೆಂಬ್ಲಿಯಲ್ಲಿ 44 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಚುನಾವಣೆಯಲ್ಲಿ ಗೆದ್ದಿತು. 15 ಕ್ಷೇತ್ರಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ರಜಪೂತರು (ಶೇ 34) ಹೆಚ್ಚಿನ ಸಂಖ್ಯೆಯ ಮತದಾರರನ್ನು ಹೊಂದಿದ್ದಾರೆ, ನಂತರದ ಸ್ಥಾನದಲ್ಲಿ ಒಬಿಸಿ (ಶೇ. 32), ಎಸ್‌ಸಿ/ಎಸ್‌ಟಿ (ಶೇ. 20) ಮತ್ತು ಬ್ರಾಹ್ಮಣರು (ಶೇ. 18) ಇದ್ದಾರೆ.

ಮಂಡಿ

ಇದು ರಾಜ್ಯದ ಎರಡನೇ ಪ್ರಮುಖ ಸ್ಥಾನವಾಗಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ತವರು ಕ್ಷೇತ್ರವಾದ ಮಂಡಿ ಈ ವರ್ಷ ಬಿಜೆಪಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಎನ್ನಲಾಗುತ್ತಿದೆ. ಮಂಡಿ ಜಿಲ್ಲೆ 10 ಕ್ಷೇತ್ರಗಳನ್ನು ಒಳಗೊಂಡಿದ್ದು, 2017ರ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳನ್ನು ಗೆದ್ದಿದೆ. ಹಿಮಾಚಲ ಪ್ರದೇಶದಲ್ಲಿ ಇಂದು (ನವೆಂಬರ್ 12) ಮತದಾನ ನಡೆಯುತ್ತಿದ್ದು ಮತ್ತು ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

English summary
Kangra and Mandi are considered politically important regions as they play a crucial role in the formation of the government in Himachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X