High Alert: ಜೋಶಿಮಠದಂತೆ ಮುಳುಗುತ್ತಿವೆ ಇತರ 5 ಸ್ಥಳಗಳು
'ಜೋಶಿಮಠ ಮುಳುಗುತ್ತಿದೆ' ಎಂಬುದು ಕಳೆದೊಂದು ವಾರದಿಂದ ಸದ್ದು ಮಾಡುತ್ತಿರುವ ಶೀರ್ಷಿಕೆ. ಬದರಿನಾಥ ಧಾಮಕ್ಕೆ ಹೋಗುವ ಮಾರ್ಗದಲ್ಲಿರುವ ಈ ಪವಿತ್ರ ಪಟ್ಟಣದಲ್ಲಿ 678 ಕಟ್ಟಡಗಳು ಅಸುರಕ್ಷಿತವೆಂದು ಗುರುತಿಸಲಾಗಿದ್ದು, 82 ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಅನೇಕ ತಜ್ಞರು ಜೋಶಿಮಠದ ಹಳೆಯ ವರದಿಗಳನ್ನು ಎತ್ತಿ ತೋರಿಸಿದ್ದಾರೆ. ಈ ಸ್ಥಿತಿಗೆ ಹೆಚ್ಚುತ್ತಿರುವ ಮನೆಗಳು ಮತ್ತು ಹೋಟೆಲ್‌ಗಳ ಹೊರೆ ಮತ್ತು ತಪೋವನ ವಿಷ್ಣುಘಡ ಎನ್‌ಟಿಪಿಸಿ ಹೈಡಲ್ ಯೋಜನೆ ಸೇರಿದಂತೆ ಮಾನವ ನಿರ್ಮಿತ ಅಂಶಗಳನ್ನು ಸ್ಥಳೀಯರು ದೂಷಿಸುತ್ತಾರೆ.
ಆದರೆ ಜೋಶಿಮಠ ಮಾತ್ರ ಅಲ್ಲ. ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲಿ ಇದೇ ರೀತಿಯ ಹೆಚ್ಚಿನ ಅನಾಹುತಗಳು ನಡೆಯುತ್ತಿವೆ. ಪೌರಿ, ಬಾಗೇಶ್ವರ್, ಉತ್ತರಕಾಶಿ, ತೆಹ್ರಿ ಗರ್ವಾಲ್ ಮತ್ತು ರುದ್ರಪ್ರಯಾಗಗಳಲ್ಲಿನ ಸ್ಥಳೀಯರು ಜೋಶಿಮಠದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ತೆಹ್ರಿಯಲ್ಲಿ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಜೋಶಿಮಠದಂತೆ ತೆಹ್ರಿ ಜಿಲ್ಲೆ ಕೂಡ ಮುಳುಗುವ ಆತಂಕ ನಿವಾಸಿಗಳಲ್ಲಿ ಮನೆ ಮಾಡಿದೆ. ನರೇಂದ್ರನಗರ ಕ್ಷೇತ್ರದ ಅಟಾಲಿ ಗ್ರಾಮದ ಮೂಲಕ ಹಾದು ಹೋಗುವ ರಿಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ಸ್ಥಳೀಯ ಜನರ ಕಷ್ಟವನ್ನು ಹೆಚ್ಚಿಸಿದೆ. ಅಟಾಳಿಯ ಒಂದು ತುದಿಯಲ್ಲಿ ಭಾರೀ ಭೂಕುಸಿತದಿಂದಾಗಿ, ಹತ್ತಾರು ಮನೆಗಳು ಬಿರುಕು ಬಿಟ್ಟಿವೆ. ಆದರೆ ಗ್ರಾಮದ ಇನ್ನೊಂದು ತುದಿಯಲ್ಲಿ, ಸುರಂಗದ ಸ್ಫೋಟದ ಕೆಲಸವು ಮನೆಗಳಲ್ಲಿಯೂ ದೊಡ್ಡ ಬಿರುಕುಗಳನ್ನು ಉಂಟುಮಾಡಿದೆ. ಹಗಲು ಮತ್ತು ರಾತ್ರಿ ಸುರಂಗದಲ್ಲಿ ಬ್ಲಾಸ್ಟಿಂಗ್ ಮಾಡಿದಾಗ ಮನೆ ನಡುಗುತ್ತದೆ ಎನ್ನುತ್ತಾರೆ ಅಟಾಲಿಯ ನಿವಾಸಿ ಹರೀಶ್ ಸಿಂಗ್. ಕೆಲವು ಸಂತ್ರಸ್ತ ಕುಟುಂಬಗಳು ರಾತ್ರೋ ರಾತ್ರಿ ಮಕ್ಕಳೊಂದಿಗೆ ಮನೆ ತೊರೆದಿವೆ.
ಹೀಗಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ತೆಹ್ರಿ ಮತ್ತು ಎಸ್‌ಡಿಎಂ ನರೇಂದ್ರನಗರ ಅವರು ಎಲ್ಲಾ ಸಂತ್ರಸ್ತ ಕುಟುಂಬಗಳೊಂದಿಗೆ ಸಭೆ ನಡೆಸಿದರು. ಆಡಳಿತ ಮಂಡಳಿ ಆರು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದರೂ ಸಮರ್ಪಕ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದೀಗ ಅಟಾಳಿ ಗ್ರಾಮದಿಂದ ಗ್ರಾಮಸ್ಥರು ತಮ್ಮ ಪುನರ್ವಸತಿಗೆ ಒತ್ತಾಯಿಸುತ್ತಿದ್ದಾರೆ. ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ಯೋಜನೆಯಿಂದ ಅಟಾಳಿ, ಗುಲಾರ್, ವ್ಯಸಿ, ಕೌಡಿಯಾಲ ಮತ್ತು ಮಲೆಠಾ ಗ್ರಾಮಗಳು ಸಹ ಬಾಧಿತವಾಗಿವೆ ಎನ್ನುವ ಆರೋಪ ಕೇಳಿ ಬಂದಿದೆ.

ಪೌರಿಯಲ್ಲೂ ಮನೆಗಳಲ್ಲಿ ಬಿರುಕು
ಪ್ರಸ್ತುತ ನಡೆಯುತ್ತಿರುವ ರೈಲ್ವೆ ಯೋಜನೆಯಿಂದಾಗಿ ಪೌರಿಯಲ್ಲಿರುವ ತಮ್ಮ ಮನೆಗಳಲ್ಲಿ ಬಿರುಕುಗಳು ಉಂಟಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ಶ್ರೀನಗರದ ಹೆಡಲ್ ಮೊಹಲ್ಲಾ, ಆಶಿಶ್ ವಿಹಾರ್ ಮತ್ತು ನರ್ಸರಿ ರಸ್ತೆ, ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗದ ಸುರಂಗ ನಿರ್ಮಾಣ ಕಾಮಗಾರಿಯಿಂದಾಗಿ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೆಡಲ್ ಮೊಹಲ್ಲಾದ ನಿವಾಸಿ ಶಾಂತಾದೇವಿ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಮಾರ್ಗಕ್ಕಾಗಿ ಹಗಲು ರಾತ್ರಿ ಬ್ಲಾಸ್ಟಿಂಗ್ ನಡೆಸುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಉಂಟಾಗುವ ಕಂಪನದಿಂದಾಗಿ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ ಎಂದು ಆಶಿಶ್ ವಿಹಾರ್ ನಿವಾಸಿ ಪಿಎಲ್ ಆರ್ಯ ದೂರಿದ್ದಾರೆ. ಸರಕಾರ ಶೀಘ್ರ ನಿರ್ಧಾರ ಕೈಗೊಂಡು ತಮ್ಮ ಮನೆಗಳಿಗೆ ಹಾನಿಯಾಗದಂತೆ ಕೆಲಸ ಮಾಡಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಬಾಗೇಶ್ವರದಲ್ಲಿ ಅಪಾಯದ ಭೀತಿ
ಬಾಗೇಶ್ವರದ ಕಾಪ್‌ಕೋಟ್‌ನ ಖಾರಬಗಡ ಗ್ರಾಮ ಅಪಾಯದ ಭೀತಿಯಲ್ಲಿದೆ. ಈ ಗ್ರಾಮದ ಸ್ವಲ್ಪ ಮೇಲ್ಭಾಗದಲ್ಲಿ ಜಲವಿದ್ಯುತ್ ಯೋಜನೆಯ ಸುರಂಗದ ಮೇಲಿನ ಬೆಟ್ಟದಲ್ಲಿ ಹೊಂಡ ನಿರ್ಮಿಸಲಾಗಿದ್ದು, ಹಲವೆಡೆ ನೀರು ಸೋರಿಕೆಯಾಗುತ್ತಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಪ್‌ಕೋಟ್‌ನಲ್ಲಿಯೂ ಭೂಕುಸಿತ ವರದಿಯಾಗಿದೆ. ಈ ಗ್ರಾಮದಲ್ಲಿ ಸುಮಾರು 60 ಕುಟುಂಬಗಳು ವಾಸವಾಗಿವೆ.
ಸುರಂಗದಿಂದ ನೀರು ಸೋರುವ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ಆದರೆ ಸ್ವಲ್ಪ ದಿನಗಳಿಂದ ಸುರಂಗ ರೂಪುಗೊಳ್ಳಲು ಪ್ರಾರಂಭಿಸಿದೆ ಎಂದು ಖಾರಬಗಡ ನಿವಾಸಿ ಹಯಾತ್ ಸಿಂಗ್ ಹೇಳುತ್ತಾರೆ. ಖಾರಬಗಡ ಗ್ರಾಮದ ಮೇಲೆ ಸುರಂಗವಿದ್ದು ಕೆಳಗೆ ರೇವತಿ ನದಿ ಹರಿಯುತ್ತದೆ.

ಅಪಾಯದ ತಾಣಗಳಲ್ಲಿ ಸೇರಿದ ಉತ್ತರಕಾಶಿ
ಉತ್ತರಕಾಶಿಯ ಮಾಸ್ತಡಿ ಮತ್ತು ಭಟವಾಡಿ ಗ್ರಾಮಗಳು ಅಪಾಯದ ತಾಣಗಳಲ್ಲಿ ಸೇರಿವೆ. ಜೋಶಿಮಠ ಘಟನೆ ಮಾಸ್ತಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. 1991 ರಲ್ಲಿ ಸಂಭವಿಸಿದ ಭೂಕಂಪನದಿಂದ ಈ ಪ್ರದೇಶದ ಮನೆಗಳ ಕಟ್ಟಡಗಳಲ್ಲಿ ಬಿರುಕು ಬಿಟ್ಟಿತು. ಆಗ ಉತ್ತರಕಾಶಿ ಜಿಲ್ಲೆಯೆಲ್ಲ ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು.
1991ರಲ್ಲಿ ಭೂಕಂಪನದ ನಂತರ ಮಾಸ್ತಾಡಿ ಭೂಕುಸಿತಕ್ಕೆ ತುತ್ತಾಯಿತು. 1995 ಮತ್ತು 1996ರಲ್ಲಿ ಮನೆಗಳ ಒಳಗಿನಿಂದ ನೀರು ಬರಲಾರಂಭಿಸಿತು. ಅದು ಈಗಲೂ ಮುಂದುವರಿದಿದೆ. ಸದ್ಯ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ ದೂರದಲ್ಲಿ ಗ್ರಾಮ ನಿಧಾನವಾಗಿ ಮುಳುಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಈಗಾಗಲೇ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿವೆ ಎಂದು ನಿವಾಸಿಗಳು ದೂರಿದ್ದಾರೆ. ಆ ಸಮಯದಲ್ಲಿ, ಆಡಳಿತವು ಗ್ರಾಮದ ಭೂವೈಜ್ಞಾನಿಕ ಸಮೀಕ್ಷೆಯನ್ನು ಸಹ ನಡೆಸಿತು. ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಮಾತನಾಡಿ, ಮಾಸ್ತಾಡಿ ಗ್ರಾಮದ ಭೂವೈಜ್ಞಾನಿಕ ಸಮೀಕ್ಷೆಯನ್ನು ಮತ್ತೊಮ್ಮೆ ಮಾಡಲಾಗುವುದು. ಅದರ ನಂತರವೇ ಪುನರ್ವಸತಿ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಅವರು ಹೇಳುತ್ತಾರೆ.
ಭಟವಾಡಿ ಗ್ರಾಮದ ಭೌಗೋಳಿಕ ಸ್ಥಳವು ಜೋಶಿಮಠವನ್ನು ಹೋಲುತ್ತದೆ. ಏಕೆಂದರೆ ಭಾಗೀರಥಿ ಅದರ ಕೆಳಗೆ ಹರಿಯುತ್ತದೆ ಮತ್ತು ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸ್ವಲ್ಪ ಮೇಲಿದೆ. 2010 ರಲ್ಲಿ, ಭಾಗೀರಥಿಯ ಸವೆತವು 49 ಮನೆಗಳನ್ನು ನಾಶ ಮಾಡಿತು. ಸುರಕ್ಷಿತವಾಗಿದ್ದ ಕಟ್ಟಡಗಳು ಅಸುರಕ್ಷಿತವಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಬಿರುಕು ಹೆಚ್ಚಾಗುತ್ತಿದೆ.
ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವು 2010 ರಲ್ಲಿ ನದಿಯಲ್ಲಿ ಮುಳುಗಿತ್ತು, ಮತ್ತು ಸಂತ್ರಸ್ತ 49 ಕುಟುಂಬಗಳನ್ನು ಆಡಳಿತತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಿತು. ತಲಾ 2 ಲಕ್ಷ ಪರಿಹಾರವನ್ನು ನೀಡಿತು. ಭೂವಿಜ್ಞಾನಿಗಳಿಂದ ಪ್ರಾಥಮಿಕ ಮತ್ತು ವಿವರವಾದ ಸಮೀಕ್ಷೆಯ ನಂತರ, ಆಡಳಿತ 49 ಕುಟುಂಬಗಳಿಗೆ ಶಾಶ್ವತ ಪುನರ್ವಸತಿಗೆ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಒಟ್ಟು 26 ಗ್ರಾಮಗಳನ್ನು ಅತಿ ಸೂಕ್ಷ್ಮ ಗ್ರಾಮಗಳೆಂದು ಗುರುತಿಸಲಾಗಿದೆ. ಅವುಗಳೆಂದರೆ ಭಟ್ವಾಡಿ, ಅಸ್ತಲ್, ಉದ್ರಿ, ಧನೇತಿ, ಸೌದ್, ಕಾಮದ್, ಥಂಡಿ, ಸಿರಿ, ಧಾರಕೋಟ್, ಕ್ಯಾರ್ಕ್, ಬರ್ಸು, ಕುಜ್ಜನ್, ಪಿಲಾಂಗ್, ಜೋಡವ್, ಹುರ್ರಿ, ಧಸ್ದಾ, ದಾಂಡಲ್ಕ, ಅಗುಡ, ಭಂಕೋಲಿ, ಸೇಕು, ವೀರಪುರ, ಬಡೇತಿ, ಕಂಸಿ, ಬಡಿಯಾ ಕಾಫ್ನಾಲ್ ಮತ್ತು ಕೊರ್ನಾ. ಇವುಗಳಲ್ಲಿ ಮೊದಲ ಒಂಬತ್ತು ಗ್ರಾಮಗಳ ವಿವರವಾದ ಸಮೀಕ್ಷೆಯನ್ನು ಭೂವಿಜ್ಞಾನಿಗಳು ಮಾತ್ರ ಮಾಡಿದ್ದಾರೆ.

ರೈಲ್ವೆ ಸುರಂಗ ಮಾರ್ಗ ಕಾಮಗಾರಿಯ ಆತಂಕದಲ್ಲಿ ರುದ್ರಪ್ರಯಾಗ
ರುದ್ರಪ್ರಯಾಗದ ಮರೋಡ ಗ್ರಾಮವು ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ನಿರ್ಮಾಣದ ಸಂಕಷ್ಟವನ್ನು ಎದುರಿಸುತ್ತಿದೆ. ಗ್ರಾಮದಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಕೆಲವು ಮನೆಗಳು ನೆಲಸಮವಾಗಿದ್ದು, ಹಲವು ಮನೆಗಳು ನಾಶವಾಗುವ ಹಂತದಲ್ಲಿವೆ. ಇನ್ನೂ ಪರಿಹಾರ ಸಿಗದ ಸಂತ್ರಸ್ತ ಕುಟುಂಬಗಳು ಪಾಳು ಬಿದ್ದ ಮನೆಗಳಲ್ಲಿಯೇ ವಾಸ ಮಾಡುತ್ತಿವೆ. ಕೂಡಲೇ ಗ್ರಾಮಸ್ಥರನ್ನು ಇಲ್ಲಿಂದ ಸ್ಥಳಾಂತರಿಸದಿದ್ದರೆ ದೊಡ್ಡ ದುರಂತ ಸಂಭವಿಸಬಹುದು.
ಆದರೆ ಇತ್ತ ರೈಲ್ವೆ ಸುರಂಗ ಕಾಮಗಾರಿ ಭರದಿಂದ ಸಾಗುತ್ತಿದೆ. ಪರ್ವತಗಳಲ್ಲಿ ಭೂಕುಸಿತದ ಸಾಧ್ಯತೆಗಳು ಹೆಚ್ಚಾಗಿದ್ದು ರೈಲು ಮಾರ್ಗ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಸುರಂಗಗಳ ನಿರ್ಮಾಣದಿಂದಾಗಿ ಗ್ರಾಮದ ಮನೆಗಳಲ್ಲಿ ಬೃಹತ್ ಬಿರುಕುಗಳು ಕಾಣೀಸಿಕೊಂಡಿವೆ.
ಗ್ರಾಮದ ಮಹಿಳೆಯರು ಅಸಹಾಯಕರಾಗಿ ಸರಕಾರವನ್ನು ದೂರುತ್ತಾರೆ. ಮರೋಡ ಗ್ರಾಮದಲ್ಲಿ ಒಂದು ಕಾಲದಲ್ಲಿ 35ರಿಂದ 40 ಕುಟುಂಬಗಳಿದ್ದರೆ ಈಗ 15ರಿಂದ 20 ಕುಟುಂಬಗಳು ಮಾತ್ರ ಉಳಿದಿವೆ.
ಮರೋಡ ಗ್ರಾಮದ ನಿರಾಶ್ರಿತ ಕುಟುಂಬಗಳಿಗೆ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದ್ದಾರೆ. ಸದ್ಯ ಅವರಿಗೆ ತಗಡಿನ ಶೆಡ್‌ಗಳನ್ನು ನಿರ್ಮಿಸಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ, ಈ ಶೆಡ್‌ಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲ ಎಂಬುದು ಜನರ ಆರೋಪವಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications