ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಸುದ್ದಿ: ಯಾವ ಕಂಪನಿಯ ಕೊರೊನಾ ಲಸಿಕೆಗೆ ಎಷ್ಟು ಬೆಲೆ?

|
Google Oneindia Kannada News

ನವದೆಹಲಿ, ಜನವರಿ.13: ಭಾರತದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ತುರ್ತು ಬಳಕೆಗೆ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಎರಡು ದೇಶೀಯ ಲಸಿಕೆಗಳ ಜೊತೆಗೆ ಇತರೆ ನಾಲ್ಕು ಲಸಿಕೆಗಳು ಶೀಘ್ರದಲ್ಲೇ ಬಳಕೆಗೆ ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.

ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಉತ್ಪಾದಿಸಲಾದ ಕೊವಿಶೀಲ್ಡ್ ಲಸಿಕೆಯನ್ನು ಹಲವು ರಾಜ್ಯಗಳಿಗೆ ಈಗಾಗಲೇ ರವಾನಿಸಲಾಗಿದೆ. ಜನವರಿ.16ರಿಂದ ಕೊವಿಶೀಲ್ಡ್ ಲಸಿಕೆ ವಿತರಣೆ ಅಭಿಯಾನ ಆರಂಭಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

1,000 ರೂ.ಗೆ ಒಂದು ಡೋಸ್ ಕೊರೊನಾವೈರಸ್ ಲಸಿಕೆ!1,000 ರೂ.ಗೆ ಒಂದು ಡೋಸ್ ಕೊರೊನಾವೈರಸ್ ಲಸಿಕೆ!

ದೇಶದ 13 ಕಡೆಗಳಿಗೆ 54.72 ಲಕ್ಷ ಕೊವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕಳುಹಿಸಿ ಕೊಟ್ಟಿದೆ. ಮೊದಲ ಹಂತದಲ್ಲಿ 10 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅದರ್ ಪೂನಾವಲ್ಲಾ ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಲಭ್ಯವಿರುವ ಕೊರೊನಾವೈರಸ್ ಲಸಿಕೆಯ ಬೆಲೆ ಎಷ್ಟಿದೆ ಎನ್ನುವುದರ ಕುರಿತು ಮಾಹಿತಿ ಇದೀಗ ಬಹಿರಂಗವಾಗಿದೆ. ಯಾವ ಕಂಪನಿಯ ಲಸಿಕೆಗೆ ಎಷ್ಟು ದರ ನಿಗದಿಗೊಳಿಸಲಾಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.

ಕೇಂದ್ರಕ್ಕೆ ಉಚಿತವಾಗಿ ಕೊವ್ಯಾಕ್ಸಿನ್ ಲಸಿಕೆ ನೀಡಿದ ಸಂಸ್ಥೆ

ಕೇಂದ್ರಕ್ಕೆ ಉಚಿತವಾಗಿ ಕೊವ್ಯಾಕ್ಸಿನ್ ಲಸಿಕೆ ನೀಡಿದ ಸಂಸ್ಥೆ

ದೇಶಾದ್ಯಂತ ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭಿಸುವುದಕ್ಕಾಗಿ ಮೊದಲ ಹಂತದಲ್ಲಿ 55 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತ್ ಬಯೋಟೆಕ್ ಸಂಸ್ಥೆಯು 16.5 ಲಕ್ಷ ಕೊವ್ಯಾಕ್ಸಿನ್ ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ಒಪ್ಪಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಎಷ್ಟು ಬೆಲೆ?

ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಎಷ್ಟು ಬೆಲೆ?

ಭಾರತ್ ಬಯೋಟೆಕ್ ಸಂಸ್ಥೆಯಿಂದ 55 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಖರೀದಿಸಲಾಗುತ್ತಿದೆ. ಈ ಪೈಕಿ 38.5 ಲಕ್ಷ ಡೋಸ್ ಲಸಿಕೆಗೆ ಮಾತ್ರ ಕೇಂದ್ರ ಸರ್ಕಾರವು ಹಣ ಪಾವತಿಸಲಿದ್ದು, ಒಂದು ಡೋಸ್ ಲಸಿಕೆಗೆ ತೆರಿಗೆಯನ್ನು ಹೊರತುಪಡಿಸಿ 295 ರೂಪಾಯಿ ಆಗುತ್ತದೆ. ಇನ್ನು, ಸಂಸ್ಥೆಯು 16.5 ಲಕ್ಷ ಕೊವ್ಯಾಕ್ಸಿನ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಒಂದು ಡೋಸ್ ಲಸಿಕೆಗೆ 206 ರೂಪಾಯಿ ನೀಡದಂತೆ ಆಗುತ್ತದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

ಸರ್ಕಾರ ಕೊವಿಶೀಲ್ಡ್ ಲಸಿಕೆಗೆ ನೀಡುತ್ತಿರುವ ಹಣವೆಷ್ಟು?

ಸರ್ಕಾರ ಕೊವಿಶೀಲ್ಡ್ ಲಸಿಕೆಗೆ ನೀಡುತ್ತಿರುವ ಹಣವೆಷ್ಟು?

ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಉತ್ಪಾಸಿರುತ್ತಿರುವ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ ಕೇಂದ್ರ ಸರ್ಕಾರ 200 ರೂಪಾಯಿ ನೀಡಬೇಕಿದೆ. 10 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ನೀಡುವುದಾಗಿ ಸಂಸ್ಥೆ ಈಗಾಗಲೇ ಸ್ಪಷ್ಟಪಡಿಸಿದೆ. ಇದನ್ನು ಹೊರತುಪಡಿಸಿದಂತೆ ಖಾಸಗಿ ಮಾರುಕಟ್ಟೆಯಲ್ಲಿ ಒಂದು ಡೋಸ್ ಲಸಿಕೆ ಪಡೆಯುವುದಕ್ಕೆ 1,000 ರೂಪಾಯಿ ನೀಡಬೇಕಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಓ ಅದರ್ ಪೂನಾವಲ್ಲಾ ತಿಳಿಸಿದ್ದಾರೆ.

ಒಂದು ಡೋಸ್ ಲಸಿಕೆಗೆ ನಿಗದಿಗೊಳಿಸಿದ ದರವೆಷ್ಟು?

ಒಂದು ಡೋಸ್ ಲಸಿಕೆಗೆ ನಿಗದಿಗೊಳಿಸಿದ ದರವೆಷ್ಟು?

ಲಸಿಕೆ ಹೆಸರು ಲಸಿಕೆ ದರ(1 ಡೋಸ್ ಗೆ)
ಕೊವಿಶೀಲ್ಡ್ ಮೊದಲ 10 ಕೋಟಿ ಡೋಸ್ ಲಸಿಕೆಗೆ 200 ರೂ. (ಖಾಸಗಿ ಮಾರುಕಟ್ಟೆಯಲ್ಲಿ 1000 ರೂ.)
ಕೊವ್ಯಾಕ್ಸಿನ್ 206 ರೂ.
ಫೈಜರ್-ಬಯೋಟೆಕ್ 1431 ರೂ.
ಮಾಡರ್ನಾ 2348 ರಿಂದ 2715 ರೂ.
ಸಿನೋಫಾರ್ಮ್ 5650 ರೂ.
ಸಿನೊವ್ಯಾಕ್ ಬಯೋಟೆಕ್ 1027 ರೂ.
ನೊವಾವ್ಯಾಕ್ಸ್ 1,114 ರೂ.
ಗಮಲೆಯಾ ಸೆಂಟರ್ 734 ರೂ. ಗಿಂತ ಕಡಿಮೆ
ಜಾನ್ಸನ್ ಆಂಡ್ ಜಾನ್ಸನ್ 734 ರೂ.

English summary
Here Is What One Dose Of Various Coronavirus Vaccines Will Cost In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X