ದೇಶ, ವಿದೇಶದಲ್ಲಿ ಏನೇನಾಯ್ತು? ಚಿತ್ರದಲ್ಲಿ ನೋಡಿ...

ಬೆಂಗಳೂರು, ಫೆ. 17: ದೇಶ ಹಾಗೂ ವಿದೇಶಗಳಲ್ಲಿ ಸೋಮವಾರ ನಡೆದ ವಿವಿಧ ಘಟನಾವಳಿಗಳ ಚಿತ್ರ ಸಹಿತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಬಂಧನದಲ್ಲಿದ್ದ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ನೇಪಾಳದ ಪಶುಪತಿನಾಥ ದೇಗುಲದಲ್ಲಿ ಮಹಾಶಿವರಾತ್ರಿ ಪೂಜೆ ಜರುಗಿತು. ನೂತನ ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಮಹಾಶಿವರಾತ್ರಿ ನಿಮಿತ್ತ ಕೋಜಿಕೊಡೆಯ ಶ್ರೀಕಂಠೇಶ್ವರಮ್ ದೇಗುಲದಲ್ಲಿ ತೆಪ್ಪೋತ್ಸವ ಆಯೋಜಿಸಲಾಗಿತ್ತು. [ಪ್ರಮುಖ ಘಟನೆಗಳು]

ಅಸ್ಸಾಂ ರಾಜ್ಯದ ಜೋರ್ಹತ್ ನಗರದಲ್ಲಿ ಹುಲಿ ಮರಿಗಳನ್ನು ರಕ್ಷಿಸಲಾಗಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಗೌರವಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತನಾಡಿದರು.

ಬಿಡುಗಡೆಯ ಸಂಭ್ರಮ

ಬಿಡುಗಡೆಯ ಸಂಭ್ರಮ

ಪಾಕಿಸ್ತಾನವು ಬಂಧಿಸಿದ್ದ ಹಲವು ಭಾರತೀಯರನ್ನು ಬಿಡುಗಡೆ ಮಾಡಿದೆ. ಕುಟುಂಬದವರನ್ನು ಸೇರಲು ಕಾತರಗೊಂಡಿರುವ ಮೀನುಗಾರರು ಅಮೃತಸರದ ಅತ್ತರಿಯಲ್ಲಿ ಕಂಡುಬಂದಿದ್ದು ಹೀಗೆ.

ಬಿಡುಗಡೆಯ ಸಂಭ್ರಮ

ಬಿಡುಗಡೆಯ ಸಂಭ್ರಮ

ಪಾಕಿಸ್ತಾನವು ಬಂಧಿಸಿದ್ದ ಹಲವು ಭಾರತೀಯರನ್ನು ಬಿಡುಗಡೆ ಮಾಡಿದೆ. ಕುಟುಂಬದವರನ್ನು ಸೇರಲು ಕಾತರಗೊಂಡಿರುವ ಮೀನುಗಾರರು ಅಮೃತಸರದ ಅತ್ತರಿಯಲ್ಲಿ ಕಂಡುಬಂದಿದ್ದು ಹೀಗೆ.

ಮಹಾಶಿವರಾತ್ರಿ ಪೂಜೆ

ಮಹಾಶಿವರಾತ್ರಿ ಪೂಜೆ

ಮಹಾಶಿವರಾತ್ರಿ ನಿಮಿತ್ತ ನೇಪಾಳದ ಪಶುಪತಿನಾಥ ದೇಗುಲದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ಭಾರತಕ್ಕೆ ಸ್ವಾಗತ

ಭಾರತಕ್ಕೆ ಸ್ವಾಗತ

ಜರ್ಮನಿಯ ಎಸ್ಲಿಂಜೆನ್ ನಗರದ ಮೇಯರ್ ಜುರ್ಗೆನ್ ಝೀಜರ್ ಅವರನ್ನು ಕೊಯಂಬತ್ತೂರ್‌ನಲ್ಲಿ ಸ್ವಾಗತಿಸಿದ್ದು ಹೀಗೆ.

ಸಿಪಿಐ ಪ್ರತಿಭಟನೆ

ಸಿಪಿಐ ಪ್ರತಿಭಟನೆ

ಹಿರಿಯ ಸಿಪಿಐ ನಾಯಕ ಗೋವಿಂದ ಪರ್ನಾರೆ ಅವರನ್ನು ಕೊಲ್ಲಾಪುರದಲ್ಲಿ ಹತ್ಯೆಗೈದಿರುವುದನ್ನು ಪ್ರತಿಭಟಿಸಿ ಪಕ್ಷದ ಕಾರ್ಯಕರ್ತರು ಮಹಾರಾಷ್ಟ್ರ ಗೃಹ ಸಚಿವ ರಾಮ್ ಶಿಂಧೆ ಅವರ ಕಾರು ತಡೆದರು.

ಐಎಎಸ್‌ ಅಧಿಕಾರಿಗಳಿಗೆ ಕಿವಿಮಾತು

ಐಎಎಸ್‌ ಅಧಿಕಾರಿಗಳಿಗೆ ಕಿವಿಮಾತು

ನವದೆಹಲಿಯಲ್ಲಿ ನೂತನ ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ತೆಪ್ಪೋತ್ಸವ

ತೆಪ್ಪೋತ್ಸವ

ಮಹಾಶಿವರಾತ್ರಿ ನಿಮಿತ್ತ ಕೋಜಿಕೊಡೆಯ ಶ್ರೀಕಂಠೇಶ್ವರಮ್ ದೇಗುಲದಲ್ಲಿ ತೆಪ್ಪೋತ್ಸವ ಆಯೋಜಿಸಲಾಗಿತ್ತು.

ಹುಲಿ ಮರಿಗೆ ರಕ್ಷಣೆ

ಹುಲಿ ಮರಿಗೆ ರಕ್ಷಣೆ

ಅಸ್ಸಾಂ ರಾಜ್ಯದ ಜೋರ್ಹತ್ ನಗರದಲ್ಲಿ ರಕ್ಷಿಸಲ್ಪಟ್ಟಿರುವ ಹುಲಿ ಮರಿಗಳು.

ಹಾಲಿ, ಮಾಜಿ ಮಾತುಕತೆ

ಹಾಲಿ, ಮಾಜಿ ಮಾತುಕತೆ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಗೌರವಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತನಾಡಿದರು.

ನೆಲ್ಸನ್ ಮಂಡೇಲಾ ಪ್ರತಿಕೃತಿ

ನೆಲ್ಸನ್ ಮಂಡೇಲಾ ಪ್ರತಿಕೃತಿ

ಬ್ರೆಜಿಲ್‌ನ ರಿಯೋ ಡಿ ಜನೈರೋ ನಗರದಲ್ಲಿ ಆಯೋಜಿಸಿದ್ದ ಜಾತ್ರೆಯಲ್ಲಿ ನೆಲ್ಸನ್ ಮಂಡೇಲಾ ಅವರ ಪ್ರತಿಕೃತಿ ರಚಿಸಲಾಗಿತ್ತು.

ದಾಳಿ ನಡೆಸಿದ್ದು ಹೀಗೆ

ದಾಳಿ ನಡೆಸಿದ್ದು ಹೀಗೆ

ಇಸ್ಲಾಮಿಕ್ ಸ್ಟೇಟ್ ವಿರುದ್ಧ ಈಜಿಪ್ತ್ ರಕ್ಷಣಾ ಸಚಿವಾಲಯ ನಡೆಸುತ್ತಿರುವ ದಾಳಿಯ ಕುರಿತು ತೆಗೆದ ವಿಡಿಯೋ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಔತಣಕೂಟ

ಔತಣಕೂಟ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಾಗ.

ಆರ್.ಆರ್. ಪಾಟೀಲ್ ನಿಧನಕ್ಕೆ ಶ್ರದ್ಧಾಂಜಲಿ

ಆರ್.ಆರ್. ಪಾಟೀಲ್ ನಿಧನಕ್ಕೆ ಶ್ರದ್ಧಾಂಜಲಿ

ಮುಂಬೈನ ಎನ್‌ಸಿಪಿ ಕಚೇರಿಯಲ್ಲಿ ಆರ್.ಆರ್. ಪಾಟೀಲ್ ನಿಧನಕ್ಕೆ ಪಕ್ಷದ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+