ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕ ಮಳೆ ಪುಣೆಯ ಜನ ತತ್ತರ: ಇತ್ತ ಗೋವಾದಲ್ಲಿ ಪ್ರವಾಸಿಗರ ರಕ್ಷಣೆಗೆ ಸಿಎಂ ಮೆಚ್ಚುಗೆ

|
Google Oneindia Kannada News

ಮಹಾರಾಷ್ಟ್ರದ ಪುಣೆ ನಗರದಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು ಅಪಾರ ಹಾನಿಯನ್ನುಂಟುಮಾಡಿದೆ. ನಗರದ ಶಿವಾಜಿ ನಗರ ಪ್ರದೇಶವೊಂದರಲ್ಲೇ ಕೇವಲ ಒಂದೆರಡು ಗಂಟೆಗಳಲ್ಲಿ ಸುಮಾರು 81 ಮಿ.ಮೀ ಮಳೆಯಾಗಿದೆ. ಹಡಪ್ಸರ್, ಮಾರ್ಕೆಟ್ ಯಾರ್ಡ್, ಸಿನ್ಹಗಡ್ ರಸ್ತೆ, ಎನ್‌ಐಬಿಎಂ, ಬಿಟಿ ಕವಡೆ ರಸ್ತೆ ಮತ್ತು ಕಟ್ರಾಜ್‌ನಂತಹ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ.

ಅಗ್ನಿಶಾಮಕ ದಳದ ಪ್ರಕಾರ, ಹಲವಾರು ಪ್ರದೇಶಗಳಿಗೆ ನೀರು ನುಗ್ಗಿದೆ. ಪಾರ್ವತಿ ಪ್ರದೇಶದಲ್ಲಿ ಗೋಡೆ ಕುಸಿದಿದೆ ಹಲವರಿಗೆ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲ ತಗ್ಗು ಪ್ರದೇಶಗಳಲ್ಲಿ ವಾಹನಗಳು ಮಳೆ ನೀರಿನಲ್ಲಿ ಮುಳುಗಿವೆ. ವಾಸ್ತವವಾಗಿ ರೈಲು ನಿಲ್ದಾಣವೂ ಹಠಾತ್ ಪ್ರವಾಹವನ್ನು ಅನುಭವಿಸುತ್ತಿದೆ.

ಈ ವಿದ್ಯಮಾನವನ್ನು ವಿವರಿಸಿದ ಭಾರತೀಯ ಹವಾಮಾನ ಇಲಾಖೆಯ ಡಾ.ಅನುಪಮ್ ಕಶ್ಯಪಿ ಅವರು, "ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಎರಡೂ ಕಡೆಯಿಂದ ತೇವಾಂಶದ ಒಳನುಗ್ಗುವಿಕೆ, ಮಧ್ಯಪ್ರದೇಶದ ಮೇಲೆ ಕಡಿಮೆ ಒತ್ತಡದ ವ್ಯವಸ್ಥೆಯಿಂದ ಮಳೆಯಾಗುತ್ತಿದೆ. ಈ ಮೋಡಗಳ ಎತ್ತರ 11 ಕಿ.ಮೀ ಮತ್ತು ಸುತ್ತಳತೆ 5 ರಿಂದ 8 ಕಿ.ಮೀ ಎಂದು ಹೇಳಲಾಗಿದೆ. ಜುನ್ನಾರ್ ಪ್ರದೇಶದಲ್ಲಿ ಒಂದು ಮೋಡ ರೂಪುಗೊಂಡಿದೆ'' ಎಂದು ಹೇಳಿದರು.

ಜನ ಜೀವನ ಅಸ್ತವ್ಯಸ್ತ

ಜನ ಜೀವನ ಅಸ್ತವ್ಯಸ್ತ

ಸೋಮವಾರ ಸಂಜೆಯಿಂದ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ನಾಲ್ಕು ಜಿಲ್ಲೆಗಳ ಹತ್ತು ಪ್ರದೇಶಗಳಲ್ಲಿ 65 ಮಿಲಿಮೀಟರ್‌ಗೂ ಅಧಿಕ ಮಳೆಯಾಗಿದೆ. ಬೀಡ್ ಜಿಲ್ಲೆಯ ಮಜಲಗಾಂವ್‌ನಲ್ಲಿರುವ ಗಂಗಾಮಸ್ಲಾ ವೃತ್ತದಲ್ಲಿ ಭಾನುವಾರ 79.75 ಮಿಲಿಮೀಟರ್ ಮಳೆಯಾಗಿದ್ದು, ಔರಂಗಾಬಾದ್‌ನ ಪಿರ್ಬವಾಡದಲ್ಲಿ 70.75 ಮಿಮೀ ಮಳೆಯಾಗಿದೆ.

ಪುಣೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?

ಪುಣೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?

ಜಲ್ನಾ ಜಿಲ್ಲೆಯಲ್ಲಿ ರಾಜೂರು 65.75 ಮಿ.ಮೀ, ಕೇದಾರಖೇಡ 66 ಮಿ.ಮೀ, ಜಾಫ್ರಾಬಾದ್ 65.25 ಮಿ.ಮೀ, ಕುಂಭರ್ಝರಿ 65.75 ಮಿ.ಮೀ, ತೆಂಭೂರ್ಣಿ 66 ಮಿ.ಮೀ ಮತ್ತು ರಾಮನಗರ 65.25 ಮಿ.ಮೀ ಮಳೆಯಾಗಿದೆ. ಬೀಡಿನಲ್ಲಿ, ಗಂಗಾಮಸ್ಲಾ ಹೊರತುಪಡಿಸಿ, ನಂದೂರ್‌ಘಾಟ್‌ನಲ್ಲಿ ಕ್ರಮವಾಗಿ 66.50 ಮಿಮೀ (66.50 ಮಿಮೀ) (66.50 ಮಿಮೀ) ಮಳೆ ದಾಖಲಾಗಿದೆ. ಉಸ್ಮಾನಾಬಾದ್‌ನ ಕೇಶೆಗಾಂವ್ ವೃತ್ತದಲ್ಲಿ ಭಾನುವಾರ 66.25 ಮಿಮೀ ಮಳೆಯಾಗಿದೆ. ಮೆಟ್ ಆಫೀಸ್ ಪ್ರಕಾರ, ಪುಣೆ ನಗರದಲ್ಲಿ ಪ್ರಸ್ತುತ ಮೋಡ ಕವಿದ ವಾತಾವರಣದಲ್ಲಿದೆ.

ಗೋವಾದಲ್ಲಿ ಪ್ರವಾಹಕ್ಕೆ ಸಿಲುಕಿದ ಪ್ರವಾಸಿಗರು

ಗೋವಾದಲ್ಲಿ ಪ್ರವಾಹಕ್ಕೆ ಸಿಲುಕಿದ ಪ್ರವಾಸಿಗರು

ಶುಕ್ರವಾರ ಸಂಜೆಯಿಂದ ನೆರೆಯ ಗೋವಾದಲ್ಲಿ ಎಡೆಬಿಡದೆ ಮಳೆ ಸುರಿದಿದೆ. ಗೋವಾದಲ್ಲಿ ಅಧಿಕ ಮಳೆಯ ನಂತರ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದಾಗಿ ಮಾಂಡೋವಿ ನದಿಯ ಮೇಲಿನ ಸಣ್ಣ ಸೇತುವೆ ಕೊಚ್ಚಿಹೋಗಿದೆ. ಇದರಿಂದ ಕನಿಷ್ಠ 40 ಪ್ರವಾಸಿಗರು ದೂಧಸಾಗರ್ ಜಲಪಾತದ ಬಳಿ ಸಿಲುಕಿಕೊಂಡರು. ಎಲ್ಲಾ ಪ್ರವಾಸಿಗರನ್ನು ರಾಜ್ಯ ಸರ್ಕಾರ ನೇಮಿಸಿದ ಜೀವರಕ್ಷಕರು ಸಿಲುಕಿಕೊಂಡವರನ್ನು ರಕ್ಷಿಸಿದ್ದಾರೆ. ಸೇತುವೆಯ ಕೊಚ್ಚಿ ಹೋದ ಬಳಿಕ ಹರಿಯುವ ನೀರಿನ ಮೂಲಕ ನದಿಯನ್ನು ದಾಟಲು ಜೀವರಕ್ಷಕರಿಗೆ ಸಾಧ್ಯವಾಗಲಿಲ್ಲ. ಆದರೂ ಸತತ ಪ್ರಯತ್ನದಿಂದಾಗಿ ಜೀವರಕ್ಷಕರು ಅವರನ್ನು ಸ್ಥಳಾಂತರಿಸಿದರು. ರಕ್ಷಣಾ ಕಾರ್ಯಾಚರಣೆಗಾಗಿ ಜೀವರಕ್ಷಕರನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶ್ಲಾಘಿಸಿದ್ದಾರೆ.

ಪ್ರವಾಸಿಗರ ರಕ್ಷಣೆಗೆ ಸಿಎಂ ಮೆಚ್ಚುಗೆ

ಪ್ರವಾಸಿಗರ ರಕ್ಷಣೆಗೆ ಸಿಎಂ ಮೆಚ್ಚುಗೆ

ಗೋವಾ-ಕರ್ನಾಟಕ ಗಡಿಯಲ್ಲಿರುವ ಸುಂದರವಾದ ದೂಧಸಾಗರ್ ಜಲಪಾತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಈ ಬಾಋಇ ಅಧಿಕ ಮಳೆಯಿಂದಾಗಿ ಮಳೆಗಾಲದ ಆರಂಭದಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ ಈ ವಾರದ ಆರಂಭದಲ್ಲಿ ಪ್ರವಾಸಿಗರಿಗೆ ಇದನ್ನು ತೆರೆಯಲಾಯಿತು. ಅದಾಗಿಯೂ ಇಲ್ಲಿ ಪ್ರವಾಸಿಗರು ಸಿಲುಕಿಕೊಂಡ ಘಟನೆ ಬಳಿಕ ಮತ್ತೆ ಜಲಪಾತಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಲಾಗಿದೆ. ಪ್ರವಾಸಿಗರನ್ನು ರಕ್ಷಿಸಿದ ಜೀವರಕ್ಷಕ ಸಂಸ್ಥೆಯನ್ನು ಸಿಎಂ ಸಾವಂತ್ ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಅಧಿಕ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾದ ಸೇತುವೆಯನ್ನು ದಾಟಲು ಹೋಗಿ ದೂಧ್ ಸಾಗರ್ ಜಲಪಾತದಲ್ಲಿ ಸಿಲುಕಿಕೊಂಡಿದ್ದ ಸುಮಾರು 40 ಪ್ರವಾಸಿಗರನ್ನು ರಿವರ್ ಲೈಫ್ ಸೇವರ್ಸ್ ರಕ್ಷಿಸಿದೆ'' ಎಂದಿದ್ದಾರೆ.

English summary
Heavy rains and floods in Maharashtra and Goa have disrupted life. CM appreciated the rescue of 40 tourists in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X