ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಹಲವೆಡೆ ಅಧಿಕ ಮಳೆ: ಒಡಿಶಾದಲ್ಲಿ ರೆಡ್ ಅಲರ್ಟ್, ಕರ್ನಾಟಕದ ಸ್ಥಿತಿಗತಿ ತಿಳಿಯಿರಿ

|
Google Oneindia Kannada News

ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಅನಾಹುತ ಸೃಷ್ಟಿಸಿದ್ದರೆ, ಮತ್ತೊಂದೆಡೆ ಇಂದು ಕೂಡ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಇಂದು ಒಡಿಶಾ ಮತ್ತು ಎಂಪಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಒಡಿಶಾದಲ್ಲಿ ರೆಡ್ ಅಲರ್ಟ್ ಮತ್ತು ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮಯೂರ್‌ಭಂಜ್, ಬಾಲಸೋರ್, ಕಿಯೋಂಜಾರ್, ಕಟಕ್, ಜಾಜ್‌ಪುರ್, ಬಾಲಸೋರ್ ಮತ್ತು ಭದ್ರಕ್, ಗಂಜಾಂ, ಅಂಗುಲ್ ಮತ್ತು ಧೆಂಕನಾಲ್‌ಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಮಳೆ ಅರ್ಭಟ ಜೋರಾಗಿದ್ದು ಹಲವು ಅವಾಂತರವನ್ನು ಸೃಷ್ಟಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲ ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆ ರಾಜ್ಯ ರಾಜಧಾನಿ ಬೆಂಗಳೂರು ತತ್ತರಿಸಿಹೋಗಿದೆ. ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡ ವರದಿಗಳಾಗಿವೆ.ರಸ್ತೆ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ದೇಶದಲ್ಲಿ ಮಳೆಯ ಸ್ಥಿತಿಗತಿ ಬಗ್ಗೆ ನೋಡುವುದಾದರೆ..

ಒಡಿಶಾ: ಮಳೆಯಿಂದಾಗಿ ಪ್ರವಾಹ

ಒಡಿಶಾ: ಮಳೆಯಿಂದಾಗಿ ಪ್ರವಾಹ

ಭಾರೀ ಮಳೆಯಿಂದಾಗಿ ಒಡಿಶಾ ಈಗಾಗಲೇ ಪ್ರವಾಹದ ಹೊಡೆತವನ್ನು ಎದುರಿಸುತ್ತಿದೆ. ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಇದುವರೆಗೆ ಒಂದು ಮಿಲಿಯನ್ ಜನರು ಸಂತ್ರಸ್ತರಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ ಮತ್ತು ಜನರು ಮನೆಯಿಂದ ಹೊರಗೆ ಹೋಗುವಾಗ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ

ಆಗಸ್ಟ್ 31 ರವರೆಗೆ ಮಧ್ಯಪ್ರದೇಶದಲ್ಲಿ ಮಳೆ

ಆಗಸ್ಟ್ 31 ರವರೆಗೆ ಮಧ್ಯಪ್ರದೇಶದಲ್ಲಿ ಮಳೆ

ಒಡಿಶಾ ಮಾತ್ರವಲ್ಲದೆ, ಪ್ರವಾಹದಿಂದ ಬಳಲುತ್ತಿರುವ ಮಧ್ಯಪ್ರದೇಶದಲ್ಲೂ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಣೆ ತಿಳಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಭೋಪಾಲ್, ರೇವಾ, ವಿದಿಶಾ, ಸಾಗರ್, ಭಿಂಡ್, ಮೊರೆನಾ ಮತ್ತು ಶಿಯೋಪುರದಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 31 ರವರೆಗೆ ಎಂಪಿಯಲ್ಲಿ ಮಳೆಯ ಅವಧಿ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇಂದು ಮಳೆ

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇಂದು ಮಳೆ

ಇವುಗಳಲ್ಲದೆ, ಯುಪಿ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದಲ್ಲಿ ಮಳೆಯಾಗಬಹುದು, ಆದರೆ ದೆಹಲಿಯ ಬಗ್ಗೆ ಮಾತನಾಡುವುದಾದರೆ, ಇಂದು ಇಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಇಂದು ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.


ಆದರೆ ದಕ್ಷಿಣದಲ್ಲಿ ಮಳೆ ತೊಂದರೆ ಸೃಷ್ಟಿಸಿವೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದಿಗೂ ಈ ರಾಜ್ಯಗಳಿಗೆ ಇಂದ್ರ ದೇವರು ದಯಪಾಲಿಸಲಿದ್ದಾನೆ.

ಹವಾಮಾನ ಇಲಾಖೆ ಹೇಳಿಕೆ

ಹವಾಮಾನ ಇಲಾಖೆ ಹೇಳಿಕೆ

ಸದ್ಯ ಮುಂಗಾರು ಅಂತಿಮ ಹಂತದಲ್ಲಿದ್ದು, ಕಾಲಕ್ಕೂ ಮುನ್ನವೇ ಅಪ್ಪಳಿಸಿರುವ ಮುಂಗಾರು ಈಗ ಸಮಯಕ್ಕಿಂತ ಮುನ್ನವೇ ವಿದಾಯ ಹೇಳಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಹೇಳಿರುವುದು ಗೊತ್ತಿದೆ. ಇಲಾಖೆಯ ಪ್ರಕಾರ, ನೈರುತ್ಯ ಮಾನ್ಸೂನ್ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿರ್ಗಮಿಸಬಹುದು, ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ 15 ರ ಸುಮಾರಿಗೆ ಮರಳುತ್ತದೆ, ಆದರೆ ಈ ಬಾರಿ ಮುಂಗಾರು ಮುಂಚಿತವಾಗಿ ಹೊರಡಬಹುದು.

English summary
Torrential rains have created disaster in many states of the country. Due to this Red Alert has been announced in Odisha and Orange Alert in Madhya Pradesh. Know the rainfall status of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X