ದೇಶದ್ರೋಹಿಗಳ ಬಗ್ಗೆ ಹನುಮಂತಪ್ಪ ಪತ್ನಿ ಹೇಳಿದ್ದೇನು?
ನಾಗಪುರ. ಫೆಬ್ರವರಿ, 26: ಜವಾಹರಲಾಲ್ ನೆಹರು ವಿವಿ ಪ್ರಕರಣದ ಕುರಿತು ಸಿಯಾಚಿನ್ ಹೀರೋ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಕೊಪ್ಪದ್ ಮಾತನಾಡಿದ್ದಾರೆ.
ದೇಶದ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು ದೇಶ ದ್ರೋಹಿಗಳೇ, ಅದರಲ್ಲಿ ಯಾವ ಅನುಮಾನವೂ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಪುಣೆ ವಿಶ್ವವಿದ್ಯಾಲಯದ ಉಪ ಕುಲಪತಿ ವಾಸುದೇವ್ ಗಾಡೆ ಅವರು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮತ್ತು ತಾಯಿಗೆ ಹಮ್ಮಿಕೊಂಡಿದ್ದ ಗೌರವ ವಂದನೆ ಕಾರ್ಯಕ್ರಮದ ಬಳಿಕ ಮಹಾದೇವಿ ಮಾತನಾಡಿದರು.[ಹುತಾತ್ಮ ಯೋಧ ಹನುಮಂತಪ್ಪಗೆ ನುಡಿನಮನ]

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿ ನೀಡುವ ಸೈನಿಕರಿಗೆ ಗೌರವ ನೀಡದ ಇಂಥವರಿಂದ ಏನನ್ನೂ ನಿರೀಕ್ಷ ಮಾಡಲು ಸಾಧ್ಯವಿಲ್ಲ. ನನ್ನ ಗಂಡನಿಗೆ ಪೊಲೀಸ್ ಕೆಲಸ ಸಿಕ್ಕಿತ್ತು. ಆದರೂ ಅವರು ಸೈನ್ಯಕ್ಕೆ ಸೇರಿದರು. ನನಗೆ ಗಂಡು ಮಕ್ಕಳಿಲ್ಲ. ಇದ್ದರೆ ಅವರನ್ನು ಸೇನೆಗೆ ಸೇರಿಸುತ್ತಿದ್ದೆ ಎಂದು ಮಹಾದೇವಿ ಹೇಳಿದರು.[ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]
ಯುವಕರು ದೇಶದ ಒಳಿತಿಗೆ ಬೇಕಾಗುವ ಕೆಲಸ ಮಾಡಬೇಕು. ಇಂಥ ಘೋಷಣೆಗಳು ಬಿರುಕು ಸೃಷ್ಟಿ ಮಾಡುತ್ತವೆ ವಿನಃ ಬೆಳವನಿಗೆ ಸಾಧಿಸಲು ಕಾರಣವಾಗುವುದಿಲ್ಲ ಎಂದು ಹನುಮಂತಪ್ಪ ಅವರ ಪತ್ನಿ ಹೇಳಿದರು.












Click it and Unblock the Notifications