ECI ಜ್ಞಾನೇಶ್ ಕುಮಾರ್‌ಗೆ ಮತ್ತೊಂದು ಸಂಕಷ್ಟ: ಮಲೇಷಿಯಾ ಎಂಜಿನಿಯರ್ ಕೇಸ್; ತನಿಖೆಗೆ ರಾಜ್ಯ ಸರ್ಕಾರ ಆದೇಶ

ECI ಅಡಳಿತ ವೈಖರಿ, ನಿರ್ಧಾರಗಳು ಮತ್ತು SIR ಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಈಗಾಗಲೇ ಸಾಕಷ್ಟು ಆರೋಪಗಳ ಕೇಳಿ ಬಂದಿವೆ. ಇದೀಗ ಮಲೇಷಿಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ತನಿಖೆ ನಡೆಸಲು ಸಜ್ಜಾಗಿದೆ. 2006 ರಲ್ಲಿ ಜ್ಞಾನೇಶ್ ಕೇರಳ ರಾಜ್ಯದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಆಗಿದ್ದರು. ಈ ವೇಳೆ ಅವರ ವಿರುದ್ಧ ದಾಖಲಾಗಿದ್ದ ವಿಜಿಲೆನ್ಸ್ ಪ್ರಕರಣವನ್ನು ಮರು ತನಿಖೆ ಮಾಡಲು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಆದೇಶಿಸಿದ್ದಾರೆ.

ಅಂದು ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಾಕಷ್ಟು ಬಾಹ್ಯ ಒತ್ತಡದಿಂದಾಗಿ ಪ್ರಕರಣವನ್ನು ಹಾಳು ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಮಲಯಿಂಕೀಳು ವೇಣುಗೋಪಾಲ್ ದೂರು ಸಲ್ಲಿಸಿದ್ದಾರೆ. ಅದರ ಕೂಲಂಕುಷವಾಗಿ ಪರಿಶೀಲಿಸಿ ಗೃಹ ಸಚಿವರು ಪ್ರಕರಣದ ಮರು ತನಿಖೆಗೆ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ವಿಜಿಲೆನ್ಸ್ ನಿರ್ದೇಶಕರಿಗೆ ನಿರ್ದೇಶಿಸಲಾಗಿದ್ದು, ಬಾಹ್ಯ ಹಸ್ತಕ್ಷೇಪದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

Gyanesh Kumar

2006 ರಲ್ಲಿ ರಾಜ್ಯದ ಅಂಗಮಾಲಿ-ತಿರುವನಂತಪುರಂ ಎಂಸಿ ರಸ್ತೆಯ ಅಭಿವೃದ್ಧಿ ಗುತ್ತಿಗೆ ಪಡೆಯಲಾಗಿತ್ತು. ಈ ಗುತ್ತಿಗೆಯ ಪಡೆದ ಮಲೇಷಿಯಾ ಕಂಪನಿಯ ಮುಖ್ಯ ಎಂಜಿನಿಯರ್ ಲೀ ಸೀ ಬೀನ್ ಅವರು ಮಲೇಷ್ಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುತ್ತಿಗೆ ಸಂಬಂಧ ಹಣ ಬಿಡುಗಡೆ ಆಗಿರಲಿಲ್ಲ ಎನ್ನಲಾಗಿದೆ. ಈ ಮೊತ್ತಕ್ಕೆ ಸರ್ಕಾರಿ ಅಧಿಕಾರಿಗಳಿಂದ ಬೀನ್ ತೀವ್ರ ಒತ್ತಡ ಎದುರಿಸಿದ್ದರು ಎನ್ನಲಾಗಿದೆ. ಅಂದಿನ ಎಲ್ಲ ಬೆಳವಣಿಗೆ ಕುರಿತು ಸಾಯುವ ಮುನ್ನ ಬಿನ್ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದು, ಆರೋಪಿಸಿದ್ದರು.

ಬಿಲ್ ನೀಡದೇ ತಡೆ ಹಿದಿದಿದ್ದ ಆರೋಪ

ಪ್ರಕರಣ ದಾಖಲಿಸಿಕೊಂಡ ಬಳಿಕ ಆತ್ಮಹತ್ಯೆ ಪತ್ರದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆದಿತ್ತು. ಅಂದಿನ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿತಾಗುದ್ದ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ರಸ್ತೆ ನಿರ್ಮಾಣ ವಿಳಂಬವಾಗಿ ಬಿಲ್ ತಡೆಹಿಡಿಯಲಾಗಿತ್ತು. ಸರ್ಕಾರಕ್ಕೆ ಅವರು ಪರಿಹಾರವನ್ನು ಕೋರಿದ್ದರು. ತೀವ್ರ ಒತ್ತಡ ತಾಳಲಾರದೇ ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ,ದೂರು ಸಾಬೀತಾದ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದರು. ಅಂದು ಪ್ರಕರಣದ ತನಿಖೆಯನ್ನು ಅರ್ಧಕ್ಕೆ ಕೈಬಿಡಲಾಗಿತ್ತು. ಇದೀಗ ಆ ತನಿಖೆಯು ಮುಂದುವರಿಯಲಿದೆ. ಅವರಿಗೆ ಮುಖ್ಯ ಚುನಾವಣಾ ಆಯುಕ್ತರ ರಕ್ಷಣೆ ಸಿಗುವುದಿಲ್ಲ. ತನಿಖೆಗೆ ಯಾವುದೇ ಅಡ್ಡಿಯಿಲ್ಲ ಎಂದು ಕಾನೂನು ಸಲಹೆ ಬಂದ ಬಳಿಕವೇ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ವಿವರಿಸಿದರು.

ಆತ್ಮಹತ್ಯೆ ಪತ್ರದಲ್ಲೇನಿದೆ?

ಆತ್ಮಹತ್ಯೆ ಪತ್ರದಲ್ಲಿ ಜ್ಞಾನೇಶ್ ಹೆಸರು ಮಾತ್ರವೇ ಇಲ್ಲ, ರಾಜ್ಯದಲ್ಲಿ ಬಿಲ್‌ಗಳನ್ನು ಬದಲಾಯಿಸಲು ಹಣ ಪಾವತಿಸುವಂತಹ (ಲಂಚ, ಕಮಿಷನ್‌) ವಿಷಯಗಳು ಇವೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆತ್ಮಹತ್ಯೆ ಪತ್ರವನ್ನು ಖುದ್ದು ನಾನು ನೋಡಿಲ್ಲ. ಆದರೆ ಮಾಧ್ಯಮಗಳ ವರದಿಯಿಂದ ತಿಳಿದುಕೊಂಡಿದ್ದೇನೆ. ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಇದ್ದು, ಗುತ್ತಿಗೆ ಬಿಲ್‌ ತಡೆಹಿಡಿಯಲಾಗಿದೆ. ಸಕಾಲಕ್ಕೆ ಬಿಲ್‌ಗಳ ಪಾವತಿ ಆಗದ ಹಿನ್ನೆಲೆಯಲ್ಲಿ ನಾನು ಆತ್ಮಹತ್ಯಗೆ ಶರಣಾಗುತ್ತಿದ್ದೇನೆ ಎಂದು ತಿಳಿಸಲಾಗಿದೆ. ಇದೆಲ್ಲ ವಿಷಯಗಳನ್ನು ಮರು ತನಿಖೆಗೆ ವಿಜಿಲೆನ್ಸ್‌ಗೆ ಕೇಳಲಾಗಿದೆ. ಒಮ್ಮೆ ದೂರು ಬಂದರೆ, ವಿಜಿಲೆನ್ಸ್ ಸಚಿವನಾಗಿ, ಅದನ್ನು ತನಿಖೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರಕರಣವನ್ನು ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅವರ ರಾಜೀನಾಮೆಗೆ ಕಾಂಗ್ರೆಸ್, ಎಎಪಿ, ಸಿಜೆಪಿ ಸೇರಿದಂತೆ ಕೇಂದ್ರ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಬಿಜೆಪಿ ಈ ಬಗ್ಗೆ ಒಂದಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದೆ. ಆದರೆ ಈವರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇನ್ನೂವರೆಗೂ ಪ್ರತಿಕ್ರಿಯಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+