ದೆಹಲಿಯಲ್ಲಿ ಸಾರ್ವಜನಿಕರಿಗೆ ಸ್ಪುಟ್ನಿಕ್ ವಿ ಲಸಿಕೆ ಆರಂಭ
ನವದೆಹಲಿ, ಜೂನ್ 28: ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿರುವ "ಸ್ಪುಟ್ನಿಕ್ ವಿ" ಲಸಿಕೆಯನ್ನು ಗುರುಗ್ರಾಮದ ಫೋರ್ಟಿಸ್ ಸಂಶೋಧನಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ನೀಡಲು ಆರಂಭಿಸಲಾಗಿದೆ.
ರಷ್ಯಾ ಮೂಲದ ಈ ಲಸಿಕೆಯನ್ನು ಇಲ್ಲಿನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ವಿತರಣೆ ಮಾಡುತ್ತಿದ್ದು, ಇಂದಿನಿಂದ ದೆಹಲಿಯಲ್ಲಿ ಇದನ್ನು ಸಾರ್ವಜನಿಕರಿಗೆ ನೀಡಲು ಆರಂಭಿಸಲಾಗಿದೆ. ಶೀಘ್ರವೇ ಇತರೆ ನಗರಗಳಲ್ಲಿಯೂ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ.

ಏಪ್ರಿಲ್‌ನಲ್ಲಿ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಗೆ ಅನುಮೋದನೆ ದೊರೆತಿತ್ತು. ಈ ಮೂಲಕ ದೇಶದಲ್ಲಿ ಅನುಮೋದನೆ ಪಡೆದುಕೊಂಡ ಮೂರನೇ ಲಸಿಕೆ ಇದಾಗಿತ್ತು. ಸರ್ಕಾರ ಸ್ಪುಟ್ನಿಕ್ ಲಸಿಕೆಯ ಎರಡು ಡೋಸ್‌ಗೆ 1145 ಗರಿಷ್ಠ ಬೆಲೆ ನಿಗದಿಗೊಳಿಸಿದ್ದು, ಇದರಲ್ಲಿ ಆಸ್ಪತ್ರೆ ಶುಲ್ಕವೂ ಸೇರಿದೆ.
ಡೆಲ್ಟಾ ರೂಪಾಂತರಕ್ಕೆ ಸ್ಪುಟ್ನಿಕ್ ಲಸಿಕೆ ಬೇರೆಲ್ಲಾ ಲಸಿಕೆಗಳಿಗಿಂತ ಪರಿಣಾಮಕಾರಿಯಾಗಿದೆ ಎಂದು ಗಮಾಲೆಯಾ ಇನ್‌ಸ್ಟಿಟ್ಯೂಟ್ ಅಧ್ಯಯನ ತಿಳಿಸಿತ್ತು. ಕೊರೊನಾ ಸೋಂಕಿನ ವಿರುದ್ಧ ರಷ್ಯಾ ಮೂಲದ ಸ್ಫುಟ್ನಿಕ್ ವಿ ಲಸಿಕೆಯ ದಕ್ಷತೆ ಹಾಗೂ ಲಸಿಕೆ ನೀಡಿದ ನಂತರದ ಪರಿಣಾಮಗಳ ಕುರಿತು ಅರ್ಜೆಂಟಿನಾದ ಬ್ಯೂನೊಸ್ ಏರ್ಸ್ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿದ್ದು, ಈ ಲಸಿಕೆ ಇತರೆ ಎಲ್ಲಾ ಲಸಿಕೆಗಳಿಗಿಂತಲೂ ಸುರಕ್ಷಿತ ಎಂದು ವರದಿ ನೀಡಿತ್ತು.
28 ನಗರಗಳಿಗೆ ಈ ಲಸಿಕೆ ಶೀಘ್ರವಾಗಿಯೇ ಲಭ್ಯವಾಗುವುದು ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ತಿಳಿಸಿದೆ.












Click it and Unblock the Notifications