ವಿಡಿಯೋ ವೈರಲಾಯ್ತು, ಹಾರ್ದಿಕ್ ಆತಂಕ ನಿಜವಾಯ್ತು

ಅಹಮದಾಬಾದ್, ನವೆಂಬರ್ 13: ಗುಜರಾತ್ ವಿಧಾನಸಭೆಗೂ ಮುನ್ನ ನನ್ನ ತೇಜೋವಧೆಗೆ ಬಿಜೆಪಿ ನಕಲಿ ಸೆಕ್ಸ್ ಸಿಡಿ ಬಳಸಿಕೊಳ್ಳಬಹುದು ಎಂದು ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅನುಮಾನ ವ್ಯಕ್ತಪಡಿಸಿದ್ದು ನಿಜವಾಗಿದೆ. ಹಾರ್ದಿಕ್ ಅವರನ್ನು ಹೋಲುವ ವಿಡಿಯೋ ವೈರಲಾಗಿದೆ.

"ಬಿಜೆಪಿ ತಿರುಚಿದ ಸೆಕ್ಸ್ ಸಿಡಿಯನ್ನು ತಯಾರಿಸಿದೆ. ಚುನಾವಣೆಗೂ ಮುನ್ನ ಈ ಸಿಡಿ ಬಿಡುಗಡೆಯಾಗಬಹುದು. ಬಿಜೆಪಿಯಿಂದ ಮತ್ತೇನನ್ನು ನಿರೀಕ್ಷಿಸಬಹುದು? ಹಾಗಾಗಿ ಸ್ವಲ್ಪ ತಡೆದುಕೊಳ್ಳಿ, ನೋಡಿ, ಎಂಜಾಯ್ ಮಾಡಿ," ಎಂದು ಹಾರ್ದಿಕ್ ಪಟೇಲ್ ಅವರು ನವೆಂಬರ್ ಮೊದಲ ವಾರದಲ್ಲಿ ಹೇಳಿದ್ದರು. ಅದರಂತೆ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

Gujarat Elections 2017 : Hardik Patel's video went viral

ಬಿಜೆಪಿ ಅನೈತಿಕ ದಾರಿ ಹಿಡಿದು ಸುಮಾರು ಸಮಯವಾಗಿದೆ. ನಕಲಿ ಸಿಡಿ ಜತೆಗೆ ಚುನಾವಣೆಗೂ ಮುನ್ನ ಕೋಮು ಭಾವನೆ ಕೆರಳಿಸುವುದಲ್ಲದೆ ಗಲಭೆಯನ್ನೂ ಹುಟ್ಟು ಹಾಕಬಹುದು ಎಂದು ಹಾರ್ದಿಕ್ ಎಚ್ಚರಿಸಿದ್ದರು.

ಈಗ ವಿಡಿಯೋ ವೈರಲ್ ಆಗಿರುವುದಕ್ಕೆ ಪ್ರತಿಕ್ರಿಯಿಸಿರುವ ಹಾರ್ದಿಕ್ ಪಟೇಲ್, ಇಂಥ ಕೀಳುಮಟ್ಟದ ರಾಜಕೀಯ ಹಾಗೂ ವಿಡಿಯೋ ಮೂಲಕ ಗುಜರಾತಿನ ಮಹಿಳೆಯನ್ನು ಬಿಜೆಪಿ ಅವಮಾನಿಸುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+