ಡೈಲಿ ಹಂಟ್ ನಲ್ಲಿ ಇಂದು ಗುಜರಾತ್, ಹಿಮಾಚಲ ಫಲಿತಾಂಶ ಲೈವ್
ಬೆಂಗಳೂರು, ಡಿಸೆಂಬರ್ 18: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನತೆ ಮತ್ತು ರಾಜಕಾರಣಿಗಳು ಮಾತ್ರವಲ್ಲ, ಇಡೀ ದೇಶದ ನಾಗರಿಕರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಮಹತ್ವದ ದಿನ ಬಂದೇ ಬಿಟ್ಟಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಇಂದು ಬೆಳಿಗ್ಗೆಯಿಂದಲೇ ಪ್ರಕಟಿಸಲಾಗುತ್ತಿದೆ. ಯಾರಿಗೆ ಗೆಲುವು, ಯಾರು ಮಣ್ಣು ಮುಕ್ಕಲಿದ್ದಾರೆ? ಕ್ಷಣಕ್ಷಣದ ಮಾಹಿತಿಯನ್ನು ನಾವು ಡೈಲಿ ಹಂಟ್ ಮೂಲಕ ನಿಮಗೆ ನೀಡಲಿದ್ದೇವೆ.

ಬೆಳಿಗ್ಗೆ 8 ಗಂಟೆಯಿಂದಲೇ ಫಲಿತಾಂಶಗಳು ಹೊರಬೀಳಲಿವೆ. ಲೈವ್ ಅಪ್ಡೇಟ್ ಗಾಗಿ ಮತ್ತು ತ್ವರಿತ ಮಾಹಿತಿಗಾಗಿ ಡೈಲಿ ಹಂಟ್ (ಒನ್ಇಂಡಿಯಾ) ತಾಣವನ್ನು ನೋಡುತ್ತಿರಿ. ಲೈವ್ ಅಪ್ಡೇಟ್ ಮಾತ್ರವಲ್ಲ, ಸುದ್ದಿ ವಿಶ್ಲೇಷಣೆ, ಲೇಟೆಸ್ಟ್ ಟ್ರೆಂಡ್ ಗಳನ್ನೂ ನಿಮಗೆ ನೀಡಲಿದ್ದೇವೆ. ತಾಜಾ ಮಾಹಿತಿಗಾಗಿ, ಅಂಕಿಸಂಖ್ಯೆಗಾಗಿ ನೋಡುತ್ತಿರಿ.
ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಕ್ಷೇತ್ರಗಳಿಗಾಗಿ ಡಿಸೆಂಬರ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಗುಜರಾತ್ ನಲ್ಲಿ 182 ಕ್ಷೇತ್ರಗಳಿಗಾಗಿ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಡಿಸೆಂಬರ್ 14ರಂದು ಎರಡನೇ ಹಂತದ ಮತದಾನ ನಡೆದಿದೆ.
ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸದೆಬಡಿಯುವುದೆ ಮತ್ತು ಹಿಮಾಚಲದಲ್ಲಿ ಅಧಿಕಾರ ಉಳಿಸಿಕೊಳ್ಳುವುದೆ? ಅಥವಾ ಗುಜರಾತ್ ನಲ್ಲಿ ಬಿಜೆಪಿ ತನ್ನ ಕನಸಿನ ಓಟವನ್ನು ಮುಂದುವರಿಸುವುದೆ ಮತ್ತು ಹಿಮಾಚಲದಲ್ಲಿ ಗೆದ್ದು ಮತ್ತೊಂದು ರಾಜ್ಯವನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವುದೆ? ಕ್ಷಣಕ್ಷಣದ ಸುದ್ದಿಸ್ವಾರಸ್ಯಕ್ಕಾಗಿ ಈ ಜಾಗವನ್ನು ನೋಡುತ್ತಿರಿ.












Click it and Unblock the Notifications