ಊಹಿಸಿದ್ದಕ್ಕಿಂತಲೂ ಹೆಚ್ಚು ಕುಸಿದಿದೆ ಜಿಡಿಪಿ: ಆರ್‌ಬಿಐ ಗೌರ್ನರ್

ನವದೆಹಲಿ, ಸೆಪ್ಟೆಂಬರ್ 16: 'ನಾವು ಊಹಿಸಿದಕ್ಕಿಂತಲೂ ಕೆಟ್ಟ ರೀತಿಯಲ್ಲಿ ಅಭಿವೃದ್ಧಿ ಸೂಚ್ಯಂಕ ಕುಸಿದಿದೆ' ಎಂದು ಆರ್‌ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಜಿಡಿಪಿಯು 5% ಆಗಿರುವುದು ಆಶ್ಚರ್ಯ ತಂದಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಅಭಿವೃದ್ಧಿ ಸೂಚ್ಯಂಕ ಕುಸಿತ ಕಂಡಿರುವುದಕ್ಕೆ ಕಾರಣಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ' ಎಂದ ಅವರು, 'ಹಣಕಾಸು ನೀತಿ ಸಮಿತಿಯು ಜಿಡಿಪಿ ಕುಸಿತಕ್ಕೆ ಕಾರಣಗಳನ್ನು ಗುರುತಿಸಿದೆ' ಎಂದು ಅವರು ಹೇಳಿದರು.

Growth Rate Wors Than Expected: RBI Governer

ಅಂತರರಾಷ್ಟ್ರೀಯ ಹಣಕಾಸು ನಿಧಿಯು 2019 ಮತ್ತು 2020 ರಲ್ಲಿ ಭಾರತದ ಜಿಡಿಪಿ ಕುಸಿತ ಕಾಣಲಿದೆ ಎಂದು ಊಹಿಸಿತ್ತು. ಆದರೆ ಅದು ಹೀಗೆ ಭಾರಿ ಕುಸಿತಕ್ಕೆ ಒಳಗಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಹತ್ತಿರದಲ್ಲೇ ಪೆಟ್ರೋಲ್ ಬೆಲೆ ಸಹ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ನೀಡಿದ ಅವರು, ಸೌದಿ ಅರೆಬಿಯಾದ ಅತಿ ದೊಡ್ಡ ತೈಲ ಸಂಸ್ಕರಣಾ ಘಟಕದ ಮೇಲೆ ನಡೆದ ದಾಳಿಯಿಂದಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ 10% ಹೆಚ್ಚಳ ಆಗಬಹುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+