CIBIL Score: ವರನ ಸಿಬಿಲ್ ಸ್ಕೋರ್ ಕಡಿಮೆ ಇದ್ದಿದ್ದಕ್ಕೆ ಮದುವೆ ಕ್ಯಾನ್ಸಲ್!
ಇತ್ತೀಚೆಗೆ ಚಿತ್ರ ವಿಚಿತ್ರ ಕಾರಣಗಳಿಗೆ ಹಸೆಮಣೆವರೆಗೂ ಬಂದಿದ್ದ ಮದುವೆಗಳು ರದ್ದಾಗಿರುವುದನ್ನು ನೋಡಿದ್ದವೇ, ಇದಿಗ ಇಲ್ಲೊಂದು ಮದುವೆ ಮುರಿದುಬಿದ್ದಿದ್ದು, ಕಾರಣ ಏನು ಎಂದು ಕೇಳಿದ್ರೆ ನಿಮಗೆ ಅಚ್ಚರಿಯಾಗೋದು ಖಂಡಿತ. ಮದುವೆಯಾಗುವ ಖುಷಿಯಲ್ಲಿದ್ದ ಹುಡುಗನಿಗೆ ಆತನ ಸಿಬಿಲ್ ಸ್ಕೋರ್ ಶತ್ರುವಾಗಿದ್ದು, ಸಿಬಿಲ್ ಸ್ಕೋರ್ ನಿಂದಾಗಿಯೇ ಮದುವೆ ಮುರಿದುಬಿದ್ದಿದೆ.
ಹೌದು ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ ಎಂದು ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕುಟುಂಬಗಳು ಪರಸ್ಪರ ಒಪ್ಪಿಗೆಯಿಂದಲೇ ಮದುವೆಗೆ ನಿರ್ಧಾರ ಮಾಡಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಹುಡುಗಿಯ ಮನೆಯವರು ಮದುವೆಯನ್ನು ನಿಲ್ಲಿಸಿದ್ದಾರೆ.

ವಧುವಿನ ಚಿಕ್ಕಪ್ಪ ಮದುವೆಯಾಗುವ ಹುಡುಗನ ಸಿಬಿಎಲ್ ಸ್ಕೋರ್ ಅನ್ನು ಪರಿಶೀಲನೆ ಮಾಡುವಂತೆ ಒತ್ತಾಯಿಸಿದ್ದು, ಬಳಿಕ ಮದುವೆಯನ್ನು ಮುರಿಯಲು ತೀರ್ಮಾನಿಸಲಾಗಿದೆ. ಮದುವೆಗೆ ಪರಸ್ಪರ ಒಪ್ಪಿಕೊಂಡಿದ್ದ ಕುಟುಂಬಗಳು, ದಿನಾಂಕವನ್ನು ಅಂತಿಮಗೊಳಿಸಲು ಎರಡೂ ಕುಟುಂಬಗಳು ಭೇಟಿಯಾಗಿದ್ದು, ಮದುವೆ ಮಾತುಕತೆ ನಡೆಸಲು ನಿರ್ಧರಿಸಿದ್ದರು. ಆದರೆ ವಧುವಿನ ಚಿಕ್ಕಪ್ಪ ಹುಡುಗನ ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡಲು ನಿರ್ಧರಿಸಿದಾಗ ಅಲ್ಲಿನ ಚಿತ್ರಣವೇ ಬದಲಾಯಿತು.
ಸಿಬಿಲ್ ಸ್ಕೋರ್ ನೋಡಿ ಆಘಾತ
ಮದುವೆಯಾಗುವ ಹುಡುಗನ ಸಿಬಿಲ್ ಸ್ಕೋರ್ ನೋಡಿದ ಚಿಕ್ಕಪ್ಪ ಆಘಾತಕ್ಕೊಳಗಾದರು. ವರದಿಯ ಪ್ರಕಾರ ಮದುವೆಯಾಗುವ ಹುಡುಗ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವುದನ್ನು ನೋಡಿ ಮಹಿಳೆಯ ಕುಟುಂಬ ಆಘಾತಕ್ಕೊಳಗಾಗಿದೆ. ಇದರಿಂದ ಸಿಬಿಲ್ ಸ್ಕೋರ್ ಕಡಿಮೆಯಾಗಿರುವುದು ಗೊತ್ತಾಗಿದೆ. ಸರಿಯಾಗಿ ಲೋನ್ ವಾಪಸ್ ಕಟ್ಟದೇ ಇದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ.
ಹುಡುಗನ ಸಿಬಿಲ್ ಸ್ಕೋರ್ ನೋಡಿದ ಬಳಿಕ ಹುಡುಗಿಯ ಚಿಕ್ಕಪ್ಪ ಮದುವೆಯನ್ನು ವಿರೋಧಿಸಿದರು. ಈಗಾಗಳೇ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ತನ್ನ ಸೊಸೆಗೆ ಸೂಕ್ತ ಜೋಡಿಯಾಗಲ್ಲ, ಭಾವಿ ಪತ್ನಿಗೆ ಆರ್ಥಿಕ ಭದ್ರತೆ ಒದಗಿಸಲು ಸಾಧ್ಯವಾಗಲ್ಲ ಎಂದು ವಾದಿಸಿದ್ದು, ಇದಕ್ಕೆ ಕುಟುಂಬದ ಸದಸ್ಯರು ಕೂಡ ಒಪ್ಪಿಕೊಂಡಿದ್ದು ಮದುವೆಯನ್ನು ರದ್ದುಗೊಳಿಸಿದ್ದಾರೆ.
ಏನಿದು ಸಿಬಿಲ್ ಸ್ಕೋರ್?
ಸಿಬಿಲ್ ಸ್ಕೋರ್ ಎನ್ನುವುದು ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಅಳೆಯುವ ಸಂಖ್ಯೆಯಾಗಿದೆ. 300 ರಿಂದ 900 ರವರೆಗೆ ಇದನ್ನು ಅಳೆಯಲಾಗುತ್ತದೆ. ಕಡಿಮೆ ಸ್ಕೋರ್ ಹೊಂದಿದ್ದರೆ ಸರಿಯಾಗಿ ಬ್ಯಾಂಕಿಂಗ್ ವ್ಯವಹಾರ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಹೆಚ್ಚಿನ ಅಂಕ ಹೊಂದಿದ್ದರೆ ವಹಿವಾಟು ಉತ್ತಮವಾಗಿದ್ದು ಅಂತಹವರಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕೂಡ ಬೇಗ ದೊರೆಯುತ್ತದೆ.












Click it and Unblock the Notifications