ಮದುವೆ ಮನೆಯಿಂದ ವರ ಓಡಿಹೋದ, ಏಕೆ ಗೊತ್ತೆ..?
ಮೊರಾದಾಬಾದ್, ಡಿ. 24: ಒಂದು ಮದುವೆ ಮಾಡುವುದೆಂದರೆ ಸಾಹಸ ಮಾಡಿದಂತೆ. ಅದರಲ್ಲೂ ನಿಗದಿಪಡಿಸಿದ ಮುಹೂರ್ತಕ್ಕೆ ತಾಳಿಕಟ್ಟುವುದು ಎಲ್ಲರ ಕನಸಾಗಿರುತ್ತದೆ. ಆದರೆ, ಕೊನೆ ಕ್ಷಣದಲ್ಲಿ ವರ ಮದುವೆಯಿಂದ ಓಡಿಹೋಗಿಬಿಟ್ಟ...
ಹ್ಞಾಂ, ಇದಕ್ಕೆ ಕಾರಣ ಪ್ರೇಮ ಪ್ರಕರಣವಲ್ಲ, ಇಷ್ಟವಿಲ್ಲದ ಮದುವೆಯೂ ಅಲ್ಲ, ಒಂದು ಚಿರತೆ!

ಈ ಪ್ರಕರಣ ನಡೆದಿದ್ದು ಉತ್ತರ ಪ್ರದೇಶದ ಮೊರಾದಾಬಾದ್ ನಗರದ ಠಾಕೂರ್‌ದ್ವಾರಾದಲ್ಲಿ. ಹೊಸ ಜೀವನದ ಕನಸಿನಲ್ಲಿ ತೇಲುತ್ತಿದ್ದ ವರ ಅನಿರೀಕ್ಷಿತವಾಗಿ ಅಲ್ಲಿಗೆ ಬಂದ ಚಿರತೆ ನೋಡಿದ ತಕ್ಷಣ ಹಸೆ ಮಣೆ ಬಿಟ್ಟು ಓಡಿಹೋದ.
ಸಂಬಂಧಿಕರು ಬಡಿಗೆ ಹಿಡಿದು ಚಿರತೆಯನ್ನು ಓಡಿಸಿದ ನಂತರವೇ ವರ ವಾಪಸ್ ಬಂದ, ತಾಳಿ ಕಟ್ಟಿದ.
ಇದೇ ಚಿರತೆ ಈ ಮೊದಲು ಒಂದು ಶಾಲೆ ಮಕ್ಕಳ ಹಾಸ್ಟೆಲ್ ಸಮೀಪದಲ್ಲೂ ಕಂಡುಬಂದಿತ್ತು. ಆದ್ದರಿಂದ ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳೀಗ ಬಲೆ ಬೀಸಿದ್ದಾರೆ.












Click it and Unblock the Notifications