ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಮ್ಯ ಲಕ್ಷಣ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಬಳಸಬಹುದು

|
Google Oneindia Kannada News

ನವದೆಹಲಿ, ಏಪ್ರಿಲ್ 30:ಸೌಮ್ಯ ಪ್ರಮಾಣದ ಲಕ್ಷಣ ಹೊಂದಿರುವವರು ಅಥವಾ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಔಷಧ ಬಳಸಬಹುದು ಎಂದು ಆಯುಷ್ ಇಲಾಖೆ ಹೇಳಿದೆ.

ಆಯುಷ್-64 ಗುಣಮಟ್ಟದ ಆರೈಕೆಗೆ ಸಂಬಂಧಿಸಿದ್ದು, ಮಹತ್ವದ ಸುಧಾರಣೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಅವಧಿ ಕಡಿಮೆಯಾಗುವುದು ಕಂಡುಬಂದಿದೆ ಎಂದು ಆಯುಷ್ ಸಚಿವಾಲಯ-ಸಿಎಸ್ ಐಆರ್ ಸಹಭಾಗಿತ್ವದ ಗೌರವಾನಿತ್ವ ಮುಖ್ಯ ಕ್ಲಿನಿಕಲ್ ಸಂಯೋಜಕ ಚೋಪ್ರಾ ತಿಳಿಸಿದ್ದಾರೆ.

ರಾಜ್ಯಗಳಿಗೆ ಸಿಹಿ ಸುದ್ದಿ; ಕೊವ್ಯಾಕ್ಸಿನ್ ಲಸಿಕೆ ಬೆಲೆ ಇಳಿಕೆರಾಜ್ಯಗಳಿಗೆ ಸಿಹಿ ಸುದ್ದಿ; ಕೊವ್ಯಾಕ್ಸಿನ್ ಲಸಿಕೆ ಬೆಲೆ ಇಳಿಕೆ

ಆಯುಷ್-64 ಔಷಧ, ಆತಂಕ, ಒತ್ತಡ, ಆಯಾಸ, ಹಸಿವು, ನಿದ್ರೆ ಮತ್ತಿರ ಸಾಮಾನ್ಯ ಆರೋಗ್ಯದ ಮೇಲೂ ಅನೇಕ ರೀತಿಯ ತೀವ್ರಗತಿಯ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

Govt Says AYUSH 64 Effective In Treating Mild To Moderate COVID-19 Infection

ಸೌಮ್ಯ,ಸಾಧಾರಣ ಸ್ವರೂಪದ ಕೋವಿಡ್-19 ಪ್ರಕರಣಗಳ ನಿರ್ವಹಣೆಯಲ್ಲಿ ಆಯುಷ್ -64 ಔಷಧವನ್ನು ಸೇರಿಸುವಂತೆ ರಾಜ್ಯಗಳ ನಿಯಂತ್ರಕರು, ಪ್ರಾಧಿಕಾರಿಗಳಿಗೆ ತಿಳಿಸುವಂತೆ ಆಯುಷ್- ಸಿಎಸ್ ಐಆರ್ ಜಂಟಿ ನಿರ್ವಹಣಾ ಸಮಿತಿ, ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

1980ರಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ್ದ ಆಯುಷ್-64 ಔಷಧವನ್ನು ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಬಹುದೆಂದು ಆಯುಷ್ ಸಚಿವಾಲಯ ಗುರುವಾರ ಹೇಳಿದೆ.

ಆಯುಷ್-64 ಅಧ್ಯಯನದಿಂದ ಬರುವ ಫಲಿತಾಂಶವನ್ನು ಸಮಿತಿ ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಪ್ರಕರಣಗಳಲ್ಲಿ ಈ ಔಷಧವನ್ನು ಬಳಸಬಹುದೆಂದು ಶಿಫಾರಸು ಮಾಡಲಾಗಿದೆ ಎಂದು ಐಸಿಎಂಆರ್ ಮಾಜಿ ಡೈರೆಕ್ಟರ್ ಜನರಲ್ ವಿ ಎಂ ಕಟೋಚ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮೂರು ಸೆಂಟರ್ ಗಳಲ್ಲಿ ಔಷಧದ ಪ್ರಯೋಗವನ್ನು ನಡೆಸಲಾಗಿದೆ ಎಂದು ಪುಣೆಯ ಸಾಂಕ್ರಾಮಿಕ ರೋಗಗಳ ಸೆಂಟರ್ ನಿರ್ದೇಶಕ ಅರವಿಂದ್ ಚೋಪ್ರಾ ವರ್ಚುಯಲ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.

ಆಯುಷ್-64 ಔಷಧವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ಆಯುರ್ವೇದ ಪದ್ಧತಿಯಾಗಿದೆ ಎಂದಿದ್ದಾರೆ.

English summary
There has been a resurgence in the COVID-19 cases in the country. The government is organizing vaccination for all in order to provide protection against the COVID-19 infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X