ವಿಮಾನದೊಳಗೆ ವೈಫೈ ಇನ್ನೂ ದೂರದ ಕನಸು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಚೌಬೆ ಕಳೆದ ಆಗಸ್ಟ್ ನಲ್ಲಿ ಮಾಡಿದ್ದ ಘೋಷಣೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ವಿಮಾನದೊಳಗೆ "ಇನ್ನು ಹತ್ತು ದಿನದೊಳಗೆ ವೈಫೈ" ನಿರೀಕ್ಷಿಸಬಹುದು ಎಂದಿದ್ದರು. ಆದರೆ ಅದೀಗ ದೂರದ ಕನಸು ಎಂಬಂತಾಗಿದೆ.

ಭದ್ರತೆ ಕಾರಣಗಳಿಗಾಗಿ ವಿಮಾನದೊಳಗೆ ಪ್ರಯಾಣಿಕರು ವೈಫೈ ಬಳಸಲು ಅವಕಾಶ ನೀಡುವುದಕ್ಕೆ ಕೇಂದ್ರ ಸರಕಾರವು ನಿರಾಕರಿಸಿದೆ ಎಂದು ವರದಿಯಾಗಿದೆ. ಯಾವುದೇ ವಾಣಿಜ್ಯ ವಿಮಾನ. ಅಂತರರಾಷ್ಟ್ರೀಯ ವಿಮಾನಗಳಲ್ಲಿ ಭಾರತದೊಳಗೆ ಯಾನ ಮಾಡುವಾಗ ವೈಫೈ ಡಿಸೇಬಲ್ ಮಾಡಬೇಕಿತ್ತು.[ವಿಮಾನಯಾನಿಗಳಿಗೆ 10 ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ]

Govt Refuses to Allow In-flight Wi-Fi, Citing Security Concerns

ಜಾಗತಿಕ ಮಟ್ಟದಲ್ಲಿ ಹಲವು ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವೈಫೈ ಸೌಲಭ್ಯ ನೀಡುತ್ತವೆ. ಚೀನಾ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾದ ವಿಮಾನ ಯಾನ ಸಂಸ್ಥೆಗಳು ಈ ಸೌಲಭ್ಯ ನೀಡುತ್ತಿವೆ. ರಕ್ಷಣಾ ತಜ್ಞರೇ ಅಭಿಪ್ರಾಯ ಪಡುವಂತೆ ವಿಮಾನದೊಳಗೆ ವೈಫೈ ಸೌಲಭ್ಯ ನೀಡಿದರೆ ರಾಷ್ಟ್ರೀಯ ಭದ್ರತೆಗೆ ಯಾವುದೇ ತೊಂದರೆಯಿಲ್ಲ.[ಜನವರಿಯಿಂದ ಒಂದು ಗಂಟೆಯ ವಿಮಾನ ಪ್ರಯಾಣಕ್ಕೆ 2,500 ರು.]

ಆದರೆ, ಭಾರತವು ಬಹಳ ಹಿಂದಿನಿಂದಲೂ ಈ ಅಭಿಪ್ರಾಯಕ್ಕೆ ವಿರುದ್ಧವಾದ ನಿಲವು ಹೊಂದಿದೆ. ಮತ್ತು ಇದನ್ನು ಸದ್ಯಕ್ಕಂತೂ ಬದಲಾಯಿಸುವಂತೆಯೂ ಕಾಣುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The central govt has yet again refused to allow passengers to use Wi-Fi services on flights, citing security concerns. As it stands today, any commercial aircraft, including international flights, is required to disable in-flight Wi-Fi access when flying over Indian airspace.
Please Wait while comments are loading...