15 ದಿನದೊಳಗೆ ಆದಾಯ ವಿವರ ನೀಡಿ: ಯೋಗಿ ಆದಿತ್ಯನಾಥ್
15 ದಿನಗಳೊಳಗೆ ಎಲ್ಲ ಸರ್ಕಾರಿ ಅಧಿಕಾರಿಗಳೂ ತಮ್ಮ ಚರ ಮತ್ತು ಸ್ಥಿರಾಸ್ಥಿಯ ವಿವರವನ್ನು ಕಡ್ಡಾಯವಾಗಿ ನೀಡಲೇಬೆಂಕೆಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೊ, ಮಾರ್ಚ್ 20: 15 ದಿನಗಳೊಳಗೆ ಎಲ್ಲ ಸರ್ಕಾರಿ ಅಧಿಕಾರಿಗಳೂ ತಮ್ಮ ಚರ ಮತ್ತು ಸ್ಥಿರಾಸ್ಥಿಯ ವಿವರವನ್ನು ಕಡ್ಡಾಯವಾಗಿ ನೀಡಲೇಬೆಂಕೆಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಭಾನುವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಯೋಗಿ ಆದಿತ್ಯನಾಥ್, ಅಧಿಕಾರ ವಹಿಸಿಕೊಂಡ ಮರುದಿನವೇ ಇಂಥ ಹೇಳಿಕೆ ನೀಡಿರುವುದು ಅಧಿಕಾರಿಗಳಲ್ಲಿ ಭಯಹುಟ್ಟಿಸಿದೆ.[ವಿವಾದ, ಹಿಂದುತ್ವ, ಸನ್ಯಾಸದ ಘಾಟು ಮಿಕ್ಸ್ಚರ್ ಯೋಗಿ ಆದಿತ್ಯನಾಥ್]

ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಚರ ಮತ್ತು ಸ್ಥಿರಾಸ್ಥಿಯ ಸಂಪೂರ್ಣ ವಿವರ ಮತ್ತು ಆದಾಯ ತೆರಿಗೆಯ ವಿವರಗಳನ್ನು ನೀಡಬೇಕೆಂಬ ಆದಿತ್ಯನಾಥ್ ಹೇಳಿಕೆ ಉತ್ತರ ಪ್ರದೇಶದಲ್ಲಿ ಪಾರದರ್ಶಕ ಆಡಳಿತ ನೀಡುವ ಅವರ ಇಂಗಿತವನ್ನು ವ್ಯಕ್ತಪಡಿಸಿದೆ.[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]
ಇದೇ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಭಾನುವಾರ ರಾತ್ರಿ ನಡೆದ ಬಿ ಎಸ್ ಪಿ ನಾಯಕ ಮೊಹಮ್ಮದ್ ಶಮಿ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ಇನ್ನು ಮೇಲೆ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಲಿದೆ ಎಂದಿದ್ದಾರೆ.












Click it and Unblock the Notifications