Breaking; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸರ್ಕಾರದ ತಡೆ

ನವದೆಹಲಿ, ಏಪ್ರಿಲ್ 28; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬೇಡಿ ಎಂದು ಸರ್ಕಾರ ಬೈಕ್ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. ಬೈಕ್‌ಗಳಿಗೆ ಬೆಂಕಿ ತಗುಲುತ್ತಿರುವ, ಕೆಲವರು ಸಾವನ್ನಪ್ಪಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ತಗುಲಿದ ಪ್ರಕರಣಗಳ ಬಗ್ಗೆ ಪ್ರತ್ಯೇಕ ತನಿಖೆಯಾಗಬೇಕು. ಈ ತನಿಖೆ ಪೂರ್ಣಗೊಳ್ಳುವ ತನಕ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.

ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದೆ. ಈ ಸಭೆಯಲ್ಲಿ ಸೂಚನೆ ಕೊಡಲಾಗಿದ್ದು, ಯಾವುದೇ ಬೈಕ್ ಬೆಂಕಿಗೆ ಆಹುತಿಯಾಗಿದ್ದರೆ ಆ ಬ್ಯಾಚ್‌ನ ಎಲ್ಲಾ ವಾಹನಗಳನ್ನು ವಾಪಸ್ ಪಡೆದು ಮರು ಪರಿಶೀಲನೆ ಮಾಡುವಂತೆ ಸಹ ಹೇಳಿದೆ.

Govt Asked Electric Two Wheeler Manufacturers Not To Launch New Vehicles

ಸಭೆಯಲ್ಲಿ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳಿಗೆ ಹೊಸ ಬೈಕ್ ಬಿಡುಗಡೆ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಈಗ ಬೆಂಕಿ ಹೊತ್ತಿಕೊಂಡಿರುವ ಬೈಕ್‌ಗಳ ಬಗ್ಗೆ ತನಿಖೆ ನಡೆದು, ನಿಖರ ಕಾರಣ ಪತ್ತೆಯಾಗದ ಬಳಿಕ ಹೊಸ ಬೈಕ್‌ಗಳು ಬಿಡುಗಡೆಗೊಳ್ಳಲಿವೆ.

ಕಳೆದ ವಾರ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೋಷ ಪೂರಿತ ಬೈಕ್‌ಗಳನ್ನು ತಯಾರಕರೇ ಸತಃ ವಾಪಸ್ ಪಡೆಯಬೇಕು ಎಂದು ಹೇಳಿದ್ದರು. ಸಚಿವರ ಹೇಳಿಕೆ ಬಳಿಕ ವಿವಿಧ ಕಂಪನಿಗಳು 7 ಸಾವಿರ ಬೈಕ್‌ಗಳನ್ನು ವಾಪಸ್ ಪಡೆದಿದ್ದವು.

ದೇಶದ ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ಬಿದ್ದ ಪ್ರಕರಣಗಳು ದಾಖಲಾಗಿದ್ದವು. ಕೆಲವು ಬೈಕ್ ಸವಾರರು ಸಾವನ್ನಪ್ಪಿದ್ದರು. ಈ ಘಟನೆಗಳ ಬಳಿಕ ಸರ್ಕಾರ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+