ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ರಾಜ್ಯಪಾಲರಿಂದ ಅಸಾಂವಿಧಾನಿಕ ಕೆಲಸ: ವಿಡಿ ಸತೀಶನ್

|
Google Oneindia Kannada News

ತಿರುವನಂತಪುರಂ, ನವೆಂಬರ್‌ 8: ಕೇರಳದ ರಾಜ್ಯಪಾಲರು ಅಸಂವಿಧಾನಿಕ ಕೆಲಸಗಳನ್ನು ಮಾಡುವ ಮೂಲಕ ಜನಮನದಲ್ಲಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇರಳದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮಂಗಳವಾರ ಆರೋಪಿಸಿದ್ದಾರೆ.

ನಿನ್ನೆ ಎರಡು ಮಾಧ್ಯಮಗಳಿಗೆ ಗೆಟ್ ಔಟ್ ಎಂದು ರಾಜ್ಯಪಾಲರು ಹೇಳಿದ್ದಾರೆ. ಪ್ರತಿಪಕ್ಷದ ನಾಯಕನನ್ನು ಅಂದರೆ ನನ್ನನ್ನು, ಇತರ ನಾಯಕರು ಮತ್ತು ಮಂತ್ರಿಗಳನ್ನು ನಿಂದಿಸುತ್ತಾ ಸತತವಾಗಿ ಇದನ್ನು ಮಾಡುತ್ತಿದ್ದಾರೆ. ಅವರು ಅಸಂವಿಧಾನಿಕ ಕೆಲಸಗಳನ್ನು ಮಾಡುವ ಮೂಲಕ ಜನಮನದಲ್ಲಿರಲು ಮತ್ತು ಸುದ್ದಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಂಗಳವಾರ ತಿರುವನಂತಪುರದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಲೋಪಿ ವಿಡಿ ಸತೀಶನ್ ಹೇಳಿದರು.

ಎರಡು ಸುದ್ದಿ ವಾಹಿನಿಗಳಿಗೆ ನಿಷೇಧ ವಿಧಿಸಿದ ಕೇರಳ ಗವರ್ನರ್‌, ಏನು ಕಾರಣ?ಎರಡು ಸುದ್ದಿ ವಾಹಿನಿಗಳಿಗೆ ನಿಷೇಧ ವಿಧಿಸಿದ ಕೇರಳ ಗವರ್ನರ್‌, ಏನು ಕಾರಣ?

ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಕೊಚ್ಚಿಯಲ್ಲಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಎರಡು ಮಲಯಾಳಂ ಚಾನೆಲ್‌ಗಳಾದ ಕೈರಾಲಿ ನ್ಯೂಸ್ ಮತ್ತು ಮೀಡಿಯಾ ಒನ್ ಅನ್ನು ನಿರ್ಬಂಧಿಸಿದ್ದರು. ಮತ್ತು ಈ ಎರಡು ಚಾನೆಲ್‌ಗಳನ್ನು ತಾವು ರಾಜಕೀಯ ವ್ಯಕ್ತಿಗಳಂತೆ ಭಾವಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಭೇಟಿ ಮಾಡುವುದಿಲ್ಲ ಎಂದು ಕೂಗಿದರು.

ಚಾನಲ್‌ನವವರನ್ನು ಹೊರಗೆ ಹೋಗುವಂತೆ ಸೂಚಿಸಿದ ರಾಜ್ಯಪಾಲರು, ನಾನು ಮಾಧ್ಯಮವನ್ನು ಬಹಳ ಮುಖ್ಯವೆಂದು ಪರಿಗಣಿಸಿದ್ದೇನೆ. ನಾನು ಯಾವಾಗಲೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತೇನೆ. ಆದರೆ ಈಗ ಮಾಧ್ಯಮದ ಮುಖವಾಡ ಹೊಂದಿರುವವರಿಗೆ ನನ್ನ ಮನವೊಲಿಸಲು ನನಗೆ ಸಾಧ್ಯವಾಗುತ್ತಿಲ್ಲ, ಅವರು ಮಾಧ್ಯಮದವರಲ್ಲ, ಅವರು ಮಾಧ್ಯಮವೆಂದು ವೇಷ ಹಾಕುತ್ತಿದ್ದಾರೆ. ಆದರೆ ಮೂಲತಃ ರಾಜಕೀಯ ವ್ಯಕ್ತಿಗಳು ಎಂದು ರಾಜ್ಯಪಾಲರು ಹೇಳಿದ್ದರು.

ಎಪಿಜೆ ಅಬ್ದುಲ್ ಕಲಾಂ ವಿವಿಗೆ ಉಪಕುಲಪತಿ ನೇಮಿಸಿದ ಕೇರಳ ಗವರ್ನರ್‌ಎಪಿಜೆ ಅಬ್ದುಲ್ ಕಲಾಂ ವಿವಿಗೆ ಉಪಕುಲಪತಿ ನೇಮಿಸಿದ ಕೇರಳ ಗವರ್ನರ್‌

ಇಲ್ಲಿ ವಾಸ್ತವವಾಗಿ ಒಂದು ಪಕ್ಷದ ಸದಸ್ಯರಿದ್ದಾರೆ. ಹಾಗಾಗಿ ಈ ಚಾನೆಲ್‌ಗಳ ಯಾರಾದರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರೆ ದಯವಿಟ್ಟು ಹೊರಟು ಬಿಡಿ. ಕೈರಾಲಿ ಮತ್ತು ಮೀಡಿಯಾ ಒನ್‌ನ ಪ್ರತಿನಿಧಿಗಳು ಇದ್ದರೆ ನಾನು ದೂರ ಹೋಗುತ್ತೇನೆ. ನಾನು ಕೈರಲಿ ಮತ್ತು ಮೀಡಿಯಾ ಒನ್ ಜೊತೆ ಮಾತನಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಅವರು ಹೇಳಿದರು.

Governor doing unconstitutional things: VD Satheesan

ಸೋಮವಾರ ಬೆಳಗ್ಗೆ ಕೊಚ್ಚಿಯ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆದಿತ್ತು. ಇದಕ್ಕೂ ಮೊದಲು ಅಕ್ಟೋಬರ್ 24 ರಂದು, ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳದಂತೆ ಮೇಲಿನ ಎರಡು ಚಾನೆಲ್‌ಗಳು ಸೇರಿದಂತೆ ನಾಲ್ಕು ಮಲಯಾಳಂ ಚಾನೆಲ್‌ಗಳನ್ನು ರಾಜಭವನ ನಿರ್ಬಂಧಿಸಿತ್ತು. ಕೈರಲಿ ನ್ಯೂಸ್ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಿಪಿಐ (ಎಂ) ನ ಚಾನೆಲ್ ಆಗಿದ್ದು, ಮಲಯಾಳಂ ನೆಟ್‌ವರ್ಕ್‌ ಚಾನೆಲ್ ಮೀಡಿಯಾ ಒನ್ ಭದ್ರತಾ ಕ್ಲಿಯರೆನ್ಸ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ನಿಷೇಧವನ್ನು ಎದುರಿಸುತ್ತಿದೆ.

ನಿಷೇಧದ ವಿರುದ್ಧ ಮೀಡಿಯಾ ಒನ್ ಸಲ್ಲಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿರಿಸಿತ್ತು. ಮಾರ್ಚ್‌ನಲ್ಲಿ ಮಧ್ಯಂತರ ಆದೇಶದಲ್ಲಿ, ಎಸ್‌ಸಿ ತನ್ನ ಪ್ರಸಾರವನ್ನು ಮುಂದುವರಿಸಲು ಚಾನೆಲ್‌ಗೆ ಅವಕಾಶ ನೀಡಿತ್ತು.

English summary
Leader of Opposition in Kerala VD Satheesan on Tuesday alleged that the Governor of Kerala is trying to stay in the limelight by doing unconstitutional things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X