ದೇಶದ 53 ಸ್ವಚ್ಛ ಜಿಲ್ಲೆಗಳ ಪಟ್ಟಿ ಬಿಡುಗಡೆ: ರಾಜ್ಯದ 6 ಜಿಲ್ಲೆಗಳು

Written By:
Subscribe to Oneindia Kannada

ನವದೆಹಲಿ, ಸೆ 10: ಕೇಂದ್ರ ಸರಕಾರ ಗ್ರಾಮೀಣ ಸ್ವಚ್ಛತಾ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿನ ಟಾಪ್ 53 ಜಿಲ್ಲೆಗಳಲ್ಲಿ (ಸಮತಟ್ಟು ಪ್ರದೇಶ) ರಾಜ್ಯದ ಆರು ಜಿಲ್ಲೆಗಳು ಸ್ಥಾನ ಪಡೆದುಕೊಂಡಿವೆ.

ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆ 'ಸ್ವಚ್ಛ ಸರ್ವೇಕ್ಷಣ್ 2016-ಗ್ರಾಮೀಣ್' ವರದಿಯ ಪ್ರಕಾರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಪ್ರಮುಖವಾಗಿ ನಾಲ್ಕು ಮಾನದಂಡಗಳನ್ನು ಆಧರಿಸಿ, ಗರಿಷ್ಠ ಅಂಕದನ್ವಯ ಕೇಂದ್ರ ಈ ಪಟ್ಟಿಯನ್ನು ಅಂತಿಮಗೊಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ, ಶೌಚಗೃಹ ಹೊಂದಿರುವ ಮನೆಗಳು, ಮನೆಸುತ್ತಮುತ್ತಲಿನ ಕಲುಷಿತ ವಾತಾವರಣ ಮತ್ತು ನೀರು ನಿಲ್ಲದ ಮನೆಗಳು, ಕಸ ಸಂಗ್ರಹಣೆ. ಈ ನಾಲ್ಕು ಅಂಶಗಳನ್ನು ಮಾನದಂಡವನ್ನಾಗಿಸಿ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.

ಪಟ್ಟಿಯಲ್ಲಿನ 53 ಜಿಲ್ಲೆಗಳ ಪೈಕಿ ಸ್ಥಾನ ಪಡೆದುಕೊಂಡಿರುವ ರಾಜ್ಯದ ಆರು ಜಿಲ್ಲೆಗಳಾವುವು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಟಾಪ್ ಟೆನ್ (ಆವರಣದಲ್ಲಿ ಪಡೆದುಕೊಂಡ ಅಂಕ)

ಟಾಪ್ ಟೆನ್ (ಆವರಣದಲ್ಲಿ ಪಡೆದುಕೊಂಡ ಅಂಕ)

1. ಸಿಂಧುದುರ್ಗ - ಮಹಾರಾಷ್ಟ್ರ (96.8)
2. ನಡಿಯಾ - ಪ.ಬಂಗಾಳ (95)
3. ಸತಾರಾ - ಮಹಾರಾಷ್ಟ್ರ (92.9)
4. ಮಿಡ್ನಾಪುರ ಪೂರ್ವ - ಪ.ಬಂಗಾಳ (92.6)
5. ಕೊಲ್ಹಾಪುರ - ಮಹಾರಾಷ್ಟ್ರ (91.6)
6. ಹೂಗ್ಲಿ - ಪ.ಬಂಗಾಳ (91.5)
7. ಉಡುಪಿ - ಕರ್ನಾಟಕ (91)
8. ರತ್ನಗಿರಿ - ಮಹಾರಾಷ್ಟ್ರ(90.9)
9. ಥಾಣೆ -ಮಹಾರಾಷ್ಟ್ರ (88.7)
10. ಚುರು - ರಾಜಸ್ಥಾನ (88.4)

ಟಾಪ್ 11-23 (ಆವರಣದಲ್ಲಿ ಪಡೆದುಕೊಂಡ ಅಂಕ)

ಟಾಪ್ 11-23 (ಆವರಣದಲ್ಲಿ ಪಡೆದುಕೊಂಡ ಅಂಕ)

11. ಕೊಡಗು - ಕರ್ನಾಟಕ (88)
12. ಧಾಂತರಿ -ಛತ್ತೀಸಗಢ (87.4)
13. ಇಂದೋರ್ - ಮ.ಪ್ರದೇಶ (87)
14. 24 ಪರಗಣ ಉತ್ತರ - ಪ.ಬಂಗಾಳ (86.7)
15. ಜುಂಜುನು - ರಾಜಸ್ಥಾನ (86.6)
16. ಕನ್ಯಾಕುಮಾರಿ - ತಮಿಳುನಾಡು (85)
17. ಬೆಂಗಳೂರು ಗ್ರಾಮಾಂತರ - ಕರ್ನಾಟಕ (84.4)
18. ಗಾಂಧಿನಗರ - ಗುಜರಾತ್ (82.9)
19. ನಾಮಕ್ಕಲ್ - ತಮಿಳುನಾಡು (81.7)
20. ಮಹೇಸನ - ಗುಜರಾತ್ (81.3)
21. ಖೇಡಾ - ಗುಜರಾತ್ (81.1)
22. ಜರ್ಸುಗುಢ - ಒರಿಸ್ಸಾ (81.1)
23. ರಾಮನಗರ - ಕರ್ನಾಟಕ (80.9)

ಟಾಪ್ 24- 35

ಟಾಪ್ 24- 35

24. ನವ್ಸಾರಿ - ಗುಜರಾತ್ (80.2)
25. ಶಿಕರ್ - ರಾಜಸ್ಥಾನ (79.9)
26. ಮಂಡ್ಯ - ಕರ್ನಾಟಕ (79.8)
27. ಪಠಾಣ್ - ಗುಜರಾತ್ (79)
28. ಸೂರತ್ - ಗುಜರಾತ್ (79)
29. ಭರೂಚ್ - ಗುಜರಾತ್ (78.8)
30. ಕೊಯಂಬತ್ತೂರು - ತ.ನಾಡು(78.5)
31. ವಲ್ಸದ್ - ಗುಜರಾತ್ (78.5)
32. ರಜ್ನಾಡ್ ಗಾಂವ್ - ಛತ್ತೀಸಗಢ (78.4)
33. ಯಮುನಾಗರ - ಹರ್ಯಾಣ (78.3)
34. ದೇಭಾಗರ್ - ಒರಿಸ್ಸಾ (78)
35. ನರ್ಮದಾ - ಗುಜರಾತ್ (78)

ಟಾಪ್ 36- 46 (ಆವರಣದಲ್ಲಿ ಪಡೆದುಕೊಂಡ ಅಂಕ)

ಟಾಪ್ 36- 46 (ಆವರಣದಲ್ಲಿ ಪಡೆದುಕೊಂಡ ಅಂಕ)

36. ಗಂಗಾನಗರ - ರಾಜಸ್ಥಾನ(77.9)
37. ನರಸಿಂಗಪುರ - ಮ.ಪ್ರದೇಶ (77.7)
38. ಸೆಹೋರ್ - ಮ.ಪ್ರದೇಶ(76.9)
39. ತೂತುಕುಡಿ - ತ.ನಾಡು (76.7)
40. ಗುರಗಾಂ - ಹರ್ಯಾಣ (75.4)
41. ಗಜಪತಿ - ಒರಿಸ್ಸಾ (75.1)
42. ಥಪಿ - ಗುಜರಾತ್ (74.9)
43. ಕೊರಿಯಾ - ಛತ್ತೀಸಗಢ (72)
44. ಬಿಕ್ನೀರ್ - ರಾಜಸ್ಥಾನ (71.9)
45. ಆನಂದ್ - ಗುಜರಾತ್ (71.6)
46. ಅಹಮದಾಬಾದ್ - ಗುಜರಾತ್ (71.5)

ಟಾಪ್ 47-53 (ಆವರಣದಲ್ಲಿ ಪಡೆದುಕೊಂಡ ಅಂಕ)

ಟಾಪ್ 47-53 (ಆವರಣದಲ್ಲಿ ಪಡೆದುಕೊಂಡ ಅಂಕ)

47. ಸಿರ್ಸಾ - ಹರ್ಯಾಣ (69.9)
48. ಪೆರಂಬಲೂರು - ತ.ನಾಡು (67.4)
49. ಅಜ್ಮೀರ್ - ರಾಜಸ್ಥಾನ(67)
50. ಗದಗ - ಕರ್ನಾಟಕ (64.7)
51. ಪಾಲಿ - ರಾಜಸ್ಥಾನ (64.5)
52. ಪಂಚಮಹಲ್ - ಗುಜರಾತ್ (64.1)
53. ದುಂಗಾರ್ಪುರ್ - ರಾಜಸ್ಥಾನ (62.4)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government of India released 53 clean districts of country, list includes 6 districts of Karnataka including Udupi, Bengaluru Rural, Gadag.
Please Wait while comments are loading...