ಸ್ಪೆಕ್ಟ್ರಂ ಹರಾಜು: ಸರ್ಕಾರಕ್ಕೆ 1.1 ಲಕ್ಷ ಕೋಟಿ ಆದಾಯ
ನವದೆಹಲಿ, ಮಾ. 26: ತರಂಗಾಂತರ ಹರಾಜು ಅಂತಿಮಗೊಳಿಸಲು ಕೇಂದ್ರ ಸರ್ಕಾರಕ್ಕೆ ಗುರುವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮಾರ್ಚ್ ತಿಂಗಳ ಆರಂಭದಲ್ಲೇ ತರಂಗಾಂತರ ಹಂಚಿಕೆ ಪ್ರಕ್ರಿಯೆ ಆರಂಭವಾಗಿತ್ತು.
ಹರಾಜು ಅಂತಿಮಗೊಳಿಸುವುದು ಮತ್ತು ಬಿಡ್ ಯಾರ ಪಾಲಾಗಿದೆ ಎಂಬುದನ್ನು ಬಹಿರಂಗ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

ಟೆಲಿಕಾಂ ಹರಾಜು ಆರಂಭವಾದ 19 ದಿನಗಳ ಬಳಿಕ ಬುಧವಾರ ಅಂತಿಮಗೊಂಡಿತು. ಕಣದಲ್ಲಿರುವ ಎಂಟು ಮಂದಿ ಅಂದಾಜು 1,10,000 ಕೋಟಿ ರೂಪಾಯಿಗಳ ಬಿಡ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೋಲ್ ಇಂಡಿಯಾ ಷೇರಿಗಳನ್ನು ಹರಾಜು ಮಾಡಿ ಅಪಾರ ಆದಾಯ ಸಂಗ್ರಹ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ತರಂಗಾಂತರ ಹಂಚಿಕೆಯಿಂದಲೂ ಹಣ ಸಂಗ್ರಹಿಸಿದೆ.
ಹರಾಜಿನಲ್ಲಿ ಏರ್‌ಟೆಲ್, ವೊಡಾಫೋನ್, ರಿಲಯನ್ಸ್ ಕಮ್ಯುನಿಕೇಷನ್‌ಗಳು ತಾವು ಹೊಂದಿದ್ದ ಹಿಂದಿನ ತರಂಗಾಂತರಗಳನ್ನು ಉಳಿಸಿಕೊಳ್ಳಲು ಪಾಲ್ಗೊಂಡರೆ, ರಿಲಯನ್ಸ್ ಜಿಯೋ, ಟಾಟಾ ಟೆಲಿ ಸರ್ವೀಸಸ್, ಟೆಲಿವಿಂಗ್ಸ್ (ಯೂನಿನಾರ್) ಮತ್ತು ಏರ್‌ಸೆಲ್‌ಗಳು ಹೆಚ್ಚುವರಿ ಸ್ಪೆಕ್ಟ್ರಂ ಪಡೆಯಲು ಪಾಲ್ಗೊಂಡಿದ್ದವು.[OMG: ದಾಖಲೆ ಮೊತ್ತಕ್ಕೆ ಹರಾಜಾಯಿತು ಮೋದಿ ಸೂಟ್]
ಈಗ ಬಿಡ್ಡಿಂಗ್‌ನಲ್ಲಿ ತರಂಗಾಂತರ ವಿಜೇತರಾಗಿರುವ ಕಂಪನಿಗಳು, ಬಿಡ್ಡಿಂಗ್ ಮುಗಿದ 10 ದಿನದೊಳಗೆ ಶೇ.33ರಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು. ಉಳಿದ ಹಣವನ್ನು ಮುಂದಿನ 12 ವರ್ಷ ಅವಧಿಯಲ್ಲಿ (ಮೊದಲೆರಡು ವರ್ಷ ವಿನಾಯಿತಿ- ಬಾಕಿ 10 ವರ್ಷ ಕಾಲ ವಾರ್ಷಿಕ ಕಂತು) ನೀಡಬೇಕು.
ಈ ಹಣವನ್ನು ಆರ್ಥಿಕ ಅಭಿವೃದ್ಧಿಗೆ ಬಳಸುವಂತೆ ಸುಪ್ರೀಂ ಕೋರ್ಟ್ ಅಟರ್ನಿ ಜನರಲ್ ತಿಳಿಸಿದ್ದಾರೆ. ಆದರೆ ಕೆಲವೊಂದು ಟೆಲಿಕಾಂ ಕಂಪನಿಗಳು ನ್ಯಾಯಾಲಯಕ್ಕೆ ದೂರನ್ನು ದಾಖಲಿಸಿದ್ದು ಹರಾಜು ಏಕಪಕ್ಷೀಯವಾಗುತ್ತು ಎಂದು ಆರೋಪಿಸಿವೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications