Gemini AI: ಯುವತಿಗೆ ಮೋಸ ಮಾಡಿದ ನ್ಯಾನೋ ಬನಾನಾ ಟ್ರೆಂಡ್, ಟ್ರಾನ್ಸ್‌ಪರೆಂಟ್ ಸೀರೆಯೊಳಗೆ ಕಂಡಿದ್ದೇನು?
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಂದ ಮೇಲೆ ಎಲ್ಲ ರಂಗದಲ್ಲಿ ಒಂದಷ್ಟು ಬದಲಾವಣೆ, ಟ್ರೆಂಡ್ ಆಗುತ್ತಿದೆ. ಇದೀಗ ಯುವಕ, ಯುವತಿಯರು ತಮ್ಮ ಭಾವಚಿತ್ರವನ್ನು "ಗೂಗಲ್ ಜೆಮಿನಿಯ ಬನಾನಾ AI ಟೂಲ್' ಮೂಲಕ ಹೊಸ ರೂಪದಲ್ಲಿ ವಿನ್ಯಾಸ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. "ಗೂಗಲ್ ಜಿಮಿನಿ ಸೀರೆ ಟ್ರೆಂಡ್' ಜನಪ್ರಿಯತೆಯ ಪಡೆದಿದೆ. ಎಲ್ಲರಂತೆ ತಾನು ಸಹ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ರೆಟ್ರೋ ಲುಕ್ ಫೋಟೋ ನೋಡಿ ಖುಷಿಪಟ್ಟಿದ್ದಾಳೆ. ಬಳಿಕ ಆ ಯುವತಿ ಅಚ್ಚರಿಯ ಸಂಗತಿಯನ್ನು ಗಮನಿಸಿದ್ದಾಳೆ. ಈ ಬಗ್ಗೆ ಮಹಿಳೆಯರು ಜಾಗೃತವಾಗಿರಿ ಎಂದು ವಿಡಿಯೋ ಪೊಸ್ಟ್ ಮಾಡಿ ವಿವರಿಸಿದ್ದಾಳೆ.
ಗೂಗಲ್ ಜಿಮಿನಿ ನೀಡಿದ ಹೊಸ ರೂಪದ ಫೋಟೋ ನೋಡಿ ಬೆರಗುಗೊಂಡಿದ್ದಾರೆ. ಮನುಷ್ಯನನ್ನು ತಂತ್ರಜ್ಞಾನ ಅರಿತುಕೊಳ್ಳುತ್ತಿರುವ ಆಳ ಮತ್ತು ಅದರ ಭಯಾನಕತೆ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾಳೆ. ಈ ಬಗ್ಗೆ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗೂಗಲ್‌ನ ಜೆಮಿನಿ ನ್ಯಾನೋ ಬನಾನಾ ಟೂಲ್‌ನಲ್ಲಿ ನಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ ಪ್ರಾಂಪ್ಟ್ ಕೊಟ್ಟರೆ ಸಾಕು ಸೀರೆಯಲ್ಲಿ ಹೇಳೆಯ ಕಾಲದ ಸುಂದರ, ರೆಟ್ರೋ ಲುಕ್‌ನಲ್ಲಿನ ಭಾವಚಿತ್ರವನ್ನು ಪರಿವರ್ತಿಸಿ ನೀಡುತ್ತದೆ. ಅದರಂತೆ ತಾನು ಫೋಟೋ ಪರಿವರ್ತಿಸಿದ ಈ ಯುವತಿ ಆಶ್ಚರ್ಯ ವ್ಯಕ್ತಪಡಿಸಿದ್ದಾಳೆ.
ಜೆಮಿನಿ ಸೀರೆ ಫೋಟೋ: ವೈರಲ್ ವಿಡಿಯೋದಲ್ಲೇನಿದೆ?
"ಟ್ರೆಂಡ್‌ನಂತೆ ಎಐ ನಲ್ಲಿ ಫೋಟೋ ಪರಿವರ್ತಿಸುತ್ತಿದ್ದಾರೆ. ಪ್ರಾಂಪ್ಟ್‌ನೊಂದಿಗೆ ಜೆಮಿನಿಯಲ್ಲಿ ನಿಮ್ಮ ಚಿತ್ರವನ್ನು ಅಪ್‌ಲೋಡ್ ಮಾಡುತ್ತೀರಿ. ಜೆಮಿನಿ ಅದನ್ನು ಸೀರೆಯಲ್ಲಿ ಪರಿವರ್ತಿಸಿ ಕೊಡುತ್ತದೆ... ನಾನು ನಿನ್ನೆ ರಾತ್ರಿ ಅದನ್ನೆ ಮಾಡಿದೆ. ನಾನು ಫುಲ್ ಸ್ಲೀವ್ ಇರುವ ಹಸಿರು ಚೂಡಿ ದಾರರದಲ್ಲಿ ತೆಗೆದಿದ್ದ ಫೋಟೋ ಜೆಮಿನಿಗೆ ನೀಡಿದೆ. ಅದು ಪಾರದರ್ಶಕ ತೆಳುವಾದ ಸೀರೆಯಲ್ಲಿ ಫೋಟೋ ಮರಳಿ ನೀಡಿತು. ಆದರೆ ಸೀರೆ ಮತ್ತು ಸ್ಲೀವ್ ಲೆಸ್ ಡ್ರೆಸ್ ಜೊತೆಗೆ ನನ್ನ ಫೋಟೋ ನೀಡುವಾಗ ಜೆಮಿನಿಗೆ ನನ್ನ ಭುಜದ ಸಮೀಪ ತೋಳ ಮೇಲೆ ಮಚ್ಚೆ ಇರುವುದನ್ನು ನೀಡಿದೆ. ಅಂದರೆ ಅಪ್ಲೋಡ್ ಫೋಟೋದಲ್ಲಿ ಕಾಣದ ಮಚ್ಚೆ ಜಿಮಿನಿ ನೀಡಿದ ಫೋಟೋದಲ್ಲಿ ಕಂಡು ನನಗೆ ಆಶ್ಚರ್ಯ ಉಂಟಾಯಿತು' ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
"ಇದು ಸಣ್ಣ ವಿಷಯ ಅಲ್ಲ. ಇದು ತುಂಬಾ ಭಯಾನಕವಾದದ್ದು. ಮೈತುಂಬ ಇರುವ ಡ್ರೆಸ್‌ನಲ್ಲಿರುವ ಫೋಟೋ ಅಪ್ಲೋಡ್ ಮಾಡಿದರೆ ನನ್ನ ಮಚ್ಚೆಯನ್ನು ಸಹ ಅದೇಗೆ ನೀಡುತ್ತದೆ. ಇದು ಹೇಗೆ ಸಾಧ್ಯ? ಎಂದು ಯುವತಿ ಪ್ರಶ್ನಿಸಿದ್ದಾಳೆ. ಯುವತಿಯರು ಟ್ರೆಂಡಿಂಗ್ ಟೂಲ್ ಬಳಕೆ ಬಗ್ಗೆ ಎಚ್ಚರ ವಹಿಸುವಂತೆ, ಸುರಕ್ಷಿತವಾಗಿರುವಂತೆ' ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವಾಗ ಜಾಗೃತಿ ವಹಿಸಿ ಅಂತಲೂ ಕೋರಿದ್ದಾರೆ.
ಈ ವೈರಲ್ ವೀಡಿಯೊದಲ್ಲಿ ಮಾಡಲಾದ ಹಕ್ಕುಗಳ ಸತ್ಯಾಸತ್ಯತೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ.ಸದ್ಯ ಮಹಿಳೆ ಜೆಮಿನಿ ಫೋಟೋ ಬಗ್ಗೆ ತಿಳಿಸಿದ ವಿಡಿಯೋ ಸುಮಾರು ಏಳು ಮಿಲಿಯನ್ ವೀಕ್ಷಣೆ ಪಡೆದಿದೆ. ನೂರಾರು ಕಾಮೆಂಟ್‌ಗಳು ಬಂದಿವೆ. ಬಳಕೆದಾರರು ಎಐನಿಂದ ಆದ ವಿವಿಧ ಅನುಭವಗಳನ್ನು ಹಂಚಿಕೊಂಡಿದ್ದಾರೆ.
"ಇಂದು ಎಲ್ಲವೂ ಗೂಗಲ್‌ನೊಂದಿಗೆ ಸೇರಿದೆ. AI ಚಿತ್ರವನ್ನು ಅಭಿವೃದ್ಧಿಪಡಿಸಲು ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡಿದಾಗಿ ಪರಿಶೀಲಿಸುತ್ತದೆ ಎಂದು ಒಬ್ಬ ನೆಟ್ಟಿಗರು ಹೇಳಿದರು. ಮತ್ತೊಬ್ಬರು "ಈ ರೀತಿಯ ಅನುಭವ ನನಗೂ ಆಗಿದೆ. ಅಪ್ಲೋಡ್ ಮಾಡಿದ ಫೋಟೋಗಳಲ್ಲಿ ಕಾಣದ ಮಚ್ಚೆ ಜೆಮಿನಿ ಕೊಟ್ಟ ಫೋಟೋಗಳಲ್ಲಿ ಗೋಚರಿಸಿದೆ. ಇದು ಹೇಗೆ? ಎಂದು ಅವರು ಅಚ್ಚರ ವ್ಯಕ್ತಪಡಿಸಿದ್ದಾರೆ.












Click it and Unblock the Notifications