ಹರಿಯಾಣ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ
ಚಂಡೀಘಡ, ಜನವರಿ 15: ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ.
ಜಿಂದ್ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತ ಬಾಲಕಿಯೋರ್ವಳು ಜನವರಿ 9 ರಂದು ನಾಪತ್ತೆಯಾಗಿದ್ದಳು, ಆ ನಂತರ ಆಕೆಯ ಮೃತ ದೇಹ 12ನೇ ತಾರೀಖಿನಂದು ದೊರಕಿತ್ತು, ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ.

ಬಾಲಕಿಯ ದೇಹದ ಮೇಲೆ 19 ಗಾಯಗಳಾಗಿದ್ದು, ಇದು ಒಬ್ಬ ವ್ಯಕ್ತಿ ಅತ್ಯಾಚಾರ ಮಾಡಿದ ರೀತಿ ಇಲ್ಲ, ಸಾಮೂಹಿಕ ಅತ್ಯಾಚಾರ ಬಾಲಕಿಯ ಮೇಲಾಗಿದೆ, ಆ ನಂತರ ಬಾಲಕಿಯ ಹೊಟ್ಟೆಗೆ ಇರಿದಿರುವ ಕಾರಣ ಯಕೃತ್‌ಗೆ ಹಾನಿಯಾಗಿ ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.
ಬಾಲಕಿ ನಾಪತ್ತೆಯಾದ ದಿನದಂದೇ ಗ್ರಾಮದ ಮತ್ತೋರ್ವ ದಲಿತ ಬಾಲಕ ನಾಪತ್ತೆ ಆಗಿದ್ದು, ಆತನೇ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಅನುಮಾನಿಸಿದ್ದು, ಆತನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications