ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಅಡ್ವಾಣಿ ತಿಕ್ಕಾಟ, ಬಿಜೆಪಿಗೆ ಪ್ರಾಣ ಸಂಕಟ

By Mahesh
|
Google Oneindia Kannada News

ನವದೆಹಲಿ, ಮಾ.20: ಲೋಕಸಭೆ ಚುನಾವಣೆ ಪ್ರಚಾರದಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯುವ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಈಗ ಆಂತರಿಕ ತಿಕ್ಕಾಟ ತಲೆನೋವಿನ ವಿಷಯವಾಗಿ ಪರಿಣಮಿಸಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದ ಮೇಲೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡುವಿನ ಮುಸುಕಿನ ಗುದ್ದಾಟ ಮತ್ತೆ ಆರಂಭವಾಗಿದೆ. ಅಡ್ವಾಣಿ ಅವರ ಇಚ್ಛೆಗೆ ವಿರುದ್ಧವಾಗಿ ಬಿಜೆಪಿ ಸಂಸದೀಯ ಮಂಡಳಿ ನಿರ್ಣಯ ಕೈಗೊಂಡಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಹಾಗೂ ಗುಜರಾತಿನ ವಡೋದರಾದಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಈ ಮುಂಚೆ ಪ್ರಕಟಗೊಂಡಂತೆ ಅಡ್ವಾಣಿ ಅವರಿಗೆ ಮಧ್ಯಪ್ರದೇಶದ ಭೋಪಾಲ್ ಬದಲಿಗೆ ಗುಜರಾತಿನ ಗಾಂಧಿನಗರದಿಂದಲೇ ಸ್ಪರ್ಧಿಸುವಂತೆ ಬಿಜೆಪಿ ಚುನಾವಣಾ ಸಮಿತಿ ಕೇಳಿಕೊಂಡಿದೆ.

ಮೋದಿ ಸಂಧಾನ ವಿಫಲ: ಭೋಪಾಲ್ ನಿಂದ ಸ್ಪರ್ಧಿಸಲು ಇಚ್ಛಿಸಿದ್ದ ಅಡ್ವಾಣಿ ಅವರಿಗೆ ಬಯಸಿದ ಕ್ಷೇತ್ರ ಸಿಗದ ಕಾರಣ ಸಹಜವಾಗಿ ಅಸಮಾಧಾನಗೊಂಡಿದ್ದಾರೆ. ಅವರ ಕೋಪ ಶಮನಗೊಳಿಸಲು ಗುರುವಾರ ಬೆಳಗ್ಗೆ ಮೋದಿ ಅವರು ಸ್ವತಃ ಅಡ್ವಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಅಡ್ವಾಣಿ ಅವರು ಪಟ್ಟು ಸಡಿಲಿಸಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ 67 ಮಂದಿ ಪ್ರಮುಖರಿದ್ದಾರೆ. ಈ ಪಟ್ಟಿಯಲ್ಲಿ 10 ಮಹಿಳೆಯರಿಗೂ ಸ್ಥಾನ ನೀಡಲಾಗಿದೆ. ಪ್ರಮುಖ ಅಭ್ಯರ್ಥಿಗಳ ವಿವರ, ಅಡ್ವಾಣಿ ಮುಂದಿನ ನಡೆಯೇನು? ಮೋದಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದೇಕೆ? ಮುಂತಾದ ವಿವರ ಮುಂದೆ ಓದಿ...

ಐದನೇ ಪಟ್ಟಿಯಲ್ಲಿ ಬಿಜೆಪಿಯ ಪ್ರಮುಖ ಅಭ್ಯರ್ಥಿಗಳು

ಐದನೇ ಪಟ್ಟಿಯಲ್ಲಿ ಬಿಜೆಪಿಯ ಪ್ರಮುಖ ಅಭ್ಯರ್ಥಿಗಳು

* ಗುಜರಾತಿನ ಗಾಂಧಿನಗರ: ಲಾಲ್​ ಕೃಷ್ಣ ಅಡ್ವಾಣಿ ಪೋರಬಂದರ್: ವಿಠ್ಠಲ್ ಭಾಯಿ ರಾಡಿಯಾ ವಡೋದರಾ: ನರೇಂದ್ರ ಮೋದಿ
* ರಾಜಸ್ಥಾನ ರಾಜ್ಯದ ಬಿಕಾನೇರ್​​: ಅರ್ಜುನ್​ ಮೇಘವಾಲ್​ ಬಿಕನೇರ್: ರಾಹುಲ್ ಕಾಸ್ವಾ ಜೈಪುರ ಗ್ರಾಮೀಣ: ರಾಜ್ಯವರ್ಧನ್​​ ಸಿಂಗ್ ರಾಥೋರ್​ ದಹೋದ್​: ಜಸ್ವಂತ್ ಸಿಂಗ್​
* ಉತ್ತರಪ್ರದೇಶ ರಾಜ್ಯದಲ್ಲಿ... ಮಥುರಾ: ಹೇಮಮಾಲಿನಿ ಡೊಮರಿಯಾ ಗಂಜ್: ಜಗದಂಬಿಕಾ ಪಾಲ್
* ರಾಜಸ್ಥಾನ ಸಿಎಂ ವಸುಂಧರಾ ರಾಜೇ ಪುತ್ರ ದುಶ್ಯಂತ ಸಿಂಗ್ ಜಲ್​ವಾರ್​ ನಿಂದ ಸ್ಪರ್ಧಿಸಲಿದ್ದಾರೆ. ಈ ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಎಲ್​ ಕೆ ಅಡ್ವಾಣಿ ಬಿಜೆಪಿ ಪಟ್ಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುಷ್ಮಾ-ರಾಜನಾಥ್ ಸಂಧಾನ ಕೂಡಾ ವಿಫಲ

ಸುಷ್ಮಾ-ರಾಜನಾಥ್ ಸಂಧಾನ ಕೂಡಾ ವಿಫಲ

ಬುಧವಾರ ಪಟ್ಟಿ ಬಿಡುಗಡೆಯಾದ ಮೇಲೆ ಅಡ್ವಾಣಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ರಾಜನಾಥ್ ಸಿಂಗ್ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಅಡ್ವಾಣಿ ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡಾ ಒಂದು ಸುತ್ತಿನ ಮಾತುಕತೆ ನಡೆಸಿ ಬಂದ ಮೇಲೆ ಮೋದಿ ಅವರಿಗೆ ಚುನಾವಣಾ ಸಮಿತಿ ಸಭೆಗೆ ಬರುವಂತೆ ಕರೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೋದಿ ಮಾತುಕತೆ-ಸಂಧಾನ ವಿಫಲ

ಗುರುವಾರ ಬೆಳಗ್ಗೆ ಮೋದಿ ಅವರು ಸ್ವತಃ ಅಡ್ವಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಅಡ್ವಾಣಿ ಅವರು ಪಟ್ಟು ಸಡಿಲಿಸಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಗಾಂಧಿನಗರ ಅಡ್ವಾಣಿ ಪ್ರತಿನಿಧಿಸಿದ ಕ್ಷೇತ್ರ

ಗಾಂಧಿನಗರ ಅಡ್ವಾಣಿ ಪ್ರತಿನಿಧಿಸಿದ ಕ್ಷೇತ್ರ

ಗುಜರಾತ್ ಬಿಜೆಪಿ ಘಟಕ ಎಂದಿನಂತೆ ಈ ಬಾರಿ ಕೂಡಾ ಅಡ್ವಾಣಿ ಹೆಸರನ್ನು ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಿತ್ತು. ಆದರೆ, ಅಡ್ವಾಣಿ ಒಪ್ಪುತ್ತಿಲ್ಲ. 10ನೇ ಲೋಕಸಭೆ (1991-96). 12ನೇ ಲೋಕಸಭೆ (1998-99), 14ನೇ ಲೋಕಸಭೆ (2008-09) ಹಾಲಿ ಲೋಕಸಭೆ 15ನೇ ಲೋಕಸಭೆ(2009-14) ಪ್ರತಿನಿಧಿಸಿದ್ದಾರೆ.

ಅಡ್ವಾಣಿ ಸ್ಪರ್ಧೆಯೇ ಬಿಜೆಪಿಗೆ ಅಚ್ಚರಿ

ಅಡ್ವಾಣಿ ಸ್ಪರ್ಧೆಯೇ ಬಿಜೆಪಿಗೆ ಅಚ್ಚರಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜನವರಿ ತಿಂಗಳಿನಲ್ಲಿ ಘೋಷಿಸುವ ಮೂಲಕ 86 ವರ್ಷದ ಹಿರಿಯ ರಾಜಕಾರಣಿ ಅಡ್ವಾಣಿ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಮೋದಿ ಅವರ ಕೈಗೆ ಚುನಾವಣೆ ಹೊಣೆ ಸಿಕ್ಕ ಮೇಲೆ ಅಡ್ವಾಣಿ ಅವರು ರಾಜ್ಯಸಭೆ ಕಣಕ್ಕಿಳಿಯಬಹುದು ಎನ್ನುವ ಊಹಾಪೋಹ ಎದ್ದಿತ್ತು. ಆದರೆ, ಎಲ್ಲಾ ಸುದ್ದಿಗಳನ್ನು ಬದಿಗೊತ್ತಿ ಲೋಕಸಭೆ ಸ್ಪರ್ಧೆ ಬಗ್ಗೆ ಅಡ್ವಾಣಿ ಖಚಿತಪಡಿಸಿದ್ದರು. ಅಲ್ಲಿಂದ ಇಂದಿನ ವರೆಗೂ ಅಡ್ವಾಣಿಗೆ ಕ್ಷೇತ್ರ ಆಯ್ಕೆ ಮಾಡುವ ಗೊಂದಲ ಬಿಜೆಪಿಯಲ್ಲಿ ಮನೆ ಮಾಡಿದೆ.

English summary
Rumblings in BJP came to the fore tonight as the party decided to field L K Advani from Gandhinagar for Lok Sabha polls, angering the patriarch who wanted to shift to Bhopal in a reflection of his tensions with Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X