ಗಡ್ಚಿರೋಲಿ ಎನ್ ಕೌಂಟರ್: ಮೃತ ನಕ್ಸಲರ ಸಂಖ್ಯೆ 37 ಕ್ಕೆ ಏರಿಕೆ
ಗಡ್ಚಿರೋಲಿ, ಏಪ್ರಿಲ್ 24: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್ ಕೌಂಟರ್ ನಲ್ಲಿ ಮೃತರಾದ ನಕ್ಸಲರ ಸಂಖ್ಯೆ 37 ಕ್ಕೇರಿದೆ.
ಹಡ್ಚಿರೋಲಿ ಪೊಲೀಸರ ವಿಶೇಷ ತಂಡ 'ಸಿ-60 ಕಮಾಂಡೋಸ್' ಎಂಬ ಕಾರ್ಯಾಚರಣೆ ನಡೆಸಿ, ನಕ್ಸಲರನ್ನು ಹತ್ಯಗೈದಿತ್ತು. ಭಾನುವಾರ ಕೇವಲ 16 ನಕ್ಸಲರ ಮೃತದೇಹ ಪತ್ತೆಯಾಗಿತ್ತು. ಆದರೆ ಈಗ ಇಲ್ಲಿನ ಇಂದ್ರಾವತಿ ನದಿಯಲ್ಲಿ ಮತ್ತೂ 11 ಜನರ
ಮೃತದೇಹ ಪತ್ತೆಯಾಗಿದೆ. ನಕ್ಸಲರ ಸಾವಿನ ಸಂಖ್ಯೆ 37 ಕ್ಕೇರಿದೆ ಎಂದು ಮೂಲಗಳು ತಿಳಿಸಿವೆ.

ನಕ್ಸಲರು ಗಡ್ಚಿರೋಲಿ ಪ್ರದೇಶದಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಭಾನುವಾರ ನಡೆಸಲಾಗಿತ್ತು. ನಿಷ್ಕಾರಣವಾಗಿ ನಕ್ಸಲರು ಕಮಾಂಡೋಗಳತ್ತ ಗುಂಡಿನ ದಾಳಿ ಆರಂಭಿಸಿದ್ದರಿಂದ ಕಮಾಂಡೋಗಳು ಸ್ವರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಇದರಿಂದ ಆರಂಭವಾದ ಗುಂಡಿನ ಚಕಮಕಿಯಲ್ಲಿ 37 ನಕ್ಸಲರು ಮೃತರಾಗಿದ್ದಾರೆ.












Click it and Unblock the Notifications